Categories
ಚಿಕ್ಕಮಗಳೂರು

ಕಾಫಿನಾಡಿನಾದ್ಯಂತ ಮಾಘ ಮಳೆ ಆರ್ಭಟ!

ಕಾಫಿನಾಡಿನಾದ್ಯಂತ ಮಾಘ ಮಳೆ ಆರ್ಭಟ!
– ಜನಜೀವನ ಅಸ್ಥವ್ಯಸ್ಥ: ಹಲವೆಡೆ ಗುಡ್ಡ ಕುಸಿತ
– ಸಂಚಾರಕ್ಕೆ ತೊಂದರೆ,ವಿದ್ಯುತ್ ವ್ಯತ್ಯಯ
* ಉಕ್ಕಿಹರಿಯುತ್ತಿರುವ ತುಂಗಾ,ಭದ್ರಾ ಸೇರಿ ಇತರೆ ಹಳ್ಳಕೊಳ್ಳಗಳು: ಎಚ್ಚರಿಕೆ

NAMMMUR EXPRESS NEWS
ಚಿಕ್ಕಮಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯ ಶೃಂಗೇರಿ,ಮೂಡಿಗೆರೆ,ಕಳಸ,ಬಾಳೆಹೊನ್ನೂರು,ಕೊಪ್ಪ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಇದರಿಂದ ಜಿಲ್ಲೆಯ ಮಲೆನಾಡು ಭಾಗದ ಜನಜೀವನ ಸಂಪೂರ್ಣ ಅಸ್ಥವ್ಯಸ್ಥವಾಗಿದೆ.
ಕಡೂರು ಮತ್ತು ತರೀಕೆರೆ ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದ್ದು ಜಿಲ್ಲೆಯ ಮಲೆನಾಡು ಭಾಗದಲ್ಲಿ ವರರುಣನ ಆರ್ಭಟ ಜೋರಾಗಿದೆ.
ಶೃಂಗೇರಿ ತಾಲೂಕಿನ ಕೆರೆಕಟ್ಟೆ ಭಾಗದಲ್ಲಿ ವಿಪರೀತ ಮಳೆಯಾಗುತ್ತಿದ್ದು ಇದರಿಂದ ತುಂಗಾನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ನದಿ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ಆಸುಪಾಸಿನ ಅನೇಕ ತೋಟ,ಗದ್ದೆಗಳಿಗೆ ನೀರು ನುಗ್ಗಿದೆ. ನಗರದ ಗಾಂಧಿ ಮೈದಾನ ಸಂಪೂರ್ಣ ಜಲಾವೃತಗೊಂಡಿದ್ದು,ತುಂಗಾ ನದಿ ಪಕ್ಕದಲ್ಲಿ ಸಾಗುವಾ ಬೈಪಾಸ್ ರಸ್ತೆಯಲ್ಲಿ ನೀರು ನಿಂತಿದೆ ಆದ್ದರಿಂದ ಸಂಚಾರವನ್ನು ನಿಲ್ಲಿಸಲಾಗಿದೆ.
ಅತಿಯಾದ ಮಳೆಯಿಂದಾಗಿ ಗಿರಿಶ್ರೇಣಿಯಲ್ಲಿ ಸಣ್ಣಪ್ರಮಾಣದ ಭೂಕುಸಿತ ಉಂಟಾಗಿದೆ.ಹೊನ್ನಮ್ಮನ ಹಳ್ಳದಲ್ಲಿ ಕುಸಿತ ಉಂಟಾಗಿ ಕೆಳಭಾಗದಲ್ಲಿದ್ದ ಶೌಚಾಲಯ ಮುಚ್ಚಿಹೋಗಿದೆ. ಬಾಬಾಬುಡನ್‌ ಗಿರಿಗೆ ತೆರಳುವ ಮಾರ್ಗದಲ್ಲಿ ಭೂಕುಸಿತ ಉಂಟಾಗಿ ಅದನ್ನು ತೆರವುಗೊಳಿಸಲಾಗಿದೆ.

* ಜಿಲ್ಲೆಯಲ್ಲಿ ತಾಲೂಕುವಾರು ಭಾನುವಾರ ಸುರಿದ ಮಳೆಯ ಪ್ರಮಾಣ

ಚಿಕ್ಕಮಗಳೂರು – 17.3 ಮಿ.ಮೀ
ಕಡೂರು – 0.9 ಮಿ.ಮೀ
ಕೊಪ್ಪ – 108.1ಮಿ.ಮೀ
ಮೂಡಿಗೆರೆ – 47.6 ಮಿ.ಮೀ
ಎನ್ ಆರ್ ಪುರ – 42.2 ಮಿ.ಮೀ
ಶೃಂಗೇರಿ – 131.7 ಮಿ.ಮೀ
ತರೀಕೆರೆ – 3.7 ಮಿ.ಮೀ
ಅಜ್ಜಂಪುರ- 2.5 ಮಿ.ಮೀ
ಕಳಸ – 61.3 ಮಿ.ಮೀ
ಸರಾಸರಿ – 34 ಮಿ.ಮೀ

* ಜಿಲ್ಲಾಡಳಿತದಿಂದ ಹೈಅರ್ಲಟ್ 
ಆ.17 ರಿಂದ 20ರವರೆಗೆ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಾಲ್ಕು ದಿನಗಳು ಆರೆಂಜ್ ಮತ್ತು ರೆಡ್ ಅಲರ್ಟ್ ಘೋಷಿಸಲಾಗಿದೆ. ಪ್ರತಿ ಗಂಟೆಗೆ 40-50 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಂಭವವಿದ್ದು ಜಿಲ್ಲೆಯ ಸಾರ್ವಜನಿಕರು ಹಾಗೂ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಜಿಲ್ಲಾಡಳಿತಕ್ಕೆ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಕೋರಿದ್ದಾರೆ.
ಮುಂಜಾಗ್ರತ ಕ್ರಮವಾಗಿ ಇಂದು ಅಂಗನಾವಡಿ,ಶಾಲೆ,ಪ್ರೌಢಶಾಲೆಗಳಿಗೆ ಜಿಲ್ಲಾಧಾಕಾರಿ ರಜೆ ಘೋಷಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.