Categories
ಚಿಕ್ಕಮಗಳೂರು

ಶೃಂಗೇರಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ವಾಹನ ಸಂಚಾರ ನಿಷೇಧ

ಶೃಂಗೇರಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ವಾಹನ ಸಂಚಾರ ನಿಷೇಧ

* ತನಿಕೋಡ್‌ನಿಂದ ಎಸ್.ಕೆ ಬಾರ್ಡರ್‌ವರೆಗೆ ಭಾರೀ ವಾಹನ ಸಂಚಾರದ ನಿಷೇಧ
* ರಾಷ್ಟ್ರೀಯ ಹೆದ್ದಾರಿ -169ರಲ್ಲಿ ಗುಡ್ಡ ಕುಸಿತ,ಮುಂಜಾಗ್ರತಾ ಕ್ರಮವಾಗಿ ಡಿಸಿ ಆದೇಶ
* ಬದಲಿ ಮಾರ್ಗ ಯಾವುದು ಇಲ್ಲಿದೆ ಮಾಹಿತಿ

NAMMMUR EXPRESS NEWS
ಶೃಂಗೇರಿ: ಅತಿಯಾದ ಮಳೆಯಿಂದಾಗಿ ಶೃಂಗೇರಿಯಿಂದ ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ -169ರಲ್ಲಿ ಗುಡ್ಡ ಕುಸಿತದಂತಹ ಘಟನೆಗಳು ನಡೆದಿದ್ದು ಮುಂಜಾಗ್ರತ ಕ್ರಮವಾಗಿ ಶೃಂಗೇರಿ ತಾಲೂಕಿನ ತನಿಕೋಡಿನಿಂದ ಎಸ್.ಕೆ ಬಾರ್ಡರ್ ವರೆಗೆ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ನಿನ್ನೆ ಈ ಮಾರ್ಗದ ನೆಮ್ಮಾರ್ ಬಳಿ ಗುಡ್ಡ ಕುಸಿತ ಉಂಟಾಗಿ ಸಂಜೆ 5 ಗಂಟೆಯಿಂದ ಬೆಳಿಗ್ಗೆ 8 ಗಂಟೆಯವರೆಗೆ ಶೃಂಗೇರಿಯಿಂದ ಮಾಳ ಗೇಟ್‌ವರೆಗಿನ ವಾಹನ ಸಂಚಾರವನ್ನು ನಿಷೇಧಿಸಿ ಶೃಂಗೇರಿ ತಹಶೀಲ್ದಾರ್ ಆದೇಶಿಸಿದ್ದರು.
ಈಗ ಈ ಮಾರ್ಗದಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸಿ ಬದಲಿ ಮಾರ್ಗ ಸೂಚಿಸಿ ಜಿಲ್ಲಾಧಿಕಾರಿಗಳು ಆದೇಶಸಿದ್ದಾರೆ.

* ಸೂಚಿಸಿರುವ ಬದಲಿ ಮಾರ್ಗ ಯಾವುದು

1. ಚಿಕ್ಕಮಗಳೂರಿನಿಂದ ಬರುವ ಭಾರಿ ವಾಹನಗಳು ಬಾಳೆಹೊನ್ನೂರು-ಮಾಗುಂಡಿ-ಕಳಸ-ಕುದುರೆಮುಖ-ಎಸ್.ಕೆ.ಬಾರ್ಡರ್ ಮಾರ್ಗ ವಾಗಿ ಸಂಚರಿಸುವುದು.

2. ನರಸಿಂಹರಾಜಪುರ ಕಡೆಯಿಂದ ಬರುವ ಭಾರಿ ವಾಹನಗಳು ಬಾಳೆಹೊನ್ನೂರು-ಮಾಗುಂಡಿ-ಕಳಸ-ಕುದುರೆಮುಖ-ಎಸ್.ಕೆ.ಬಾರ್ಡರ್ ಮಾರ್ಗವಾಗಿ ಸಂಚರಿಸುವುದು.

3. ಕೊಪ್ಪ ಕಡೆಯಿಂದ ಬರುವ ಭಾರಿ ವಾಹನಗಳು ಕೊಪ್ಪ-ಜಯಪುರ- ಬಾಳೆಹೊನ್ನೂರು-ಮಾಗುಂಡಿ-ಕಳಸ-ಕುದುರೆಮುಖ- ಎಸ್.ಕೆ.ಬಾರ್ಡರ್ ಮಾರ್ಗವಾಗಿ ಸಂಚರಿಸುವುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.