ನೀಟ್ ಪರೀಕ್ಷೆಯಲ್ಲಿ ನ್ಯೂ ವೈಬ್ರೆಂಟ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
NAMMUR EXPRESS NEWS
ಮೂಡಬಿದಿರೆ, ಜೂನ್ 14: ರಾಷ್ಟ್ರೀಯ ಪರೀಕ್ಷಾ ಮಂಡಳಿಯಿಂದ ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ನಡೆಸಲಾಗಿದ್ದ ನೀಟ್ (NEET) ಪರೀಕ್ಷೆಯಲ್ಲಿ ಮೂಡಬಿದಿರೆಯ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿ ಗಣೇಶ್ ಈ ಪರೀಕ್ಷೆಯಲ್ಲಿ 720 ಅಂಕಗಳಲ್ಲಿ 579 ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು, ತಮ್ಮ ಕೆಟಗೊರಿಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 88ನೇ Rank ಸಾಧಿಸಿದ್ದಾರೆ. ಇದಕ್ಕೂ ಮುನ್ನ, ಗಣೇಶ್ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ 600ನೇ Rank ಪಡೆದು ಮುಂಬೈ ಐಐಟಿಗೆ ಪ್ರವೇಶ ಪಡೆದಿದ್ದ ಯಶಸ್ವಿ ವಿದ್ಯಾರ್ಥಿ.
ಇದೇ ಪರೀಕ್ಷೆಯಲ್ಲಿ ಅಭಿಷೇಕ್ ಸದಾಶಿವ ತೋರ್ಸೆ 553 ಅಂಕ, ಯಶವಂತ್ ಬಿ 541 ಅಂಕ, ಮಹದೇವ್ ಲಗಮಣ್ಣ ಬಿ ಪಾಟೀಲ್ 539 ಅಂಕ, ವಿಶ್ವ ಸಂಗಪ್ಪ ಶೆಟ್ಟರ್ 530 ಅಂಕ, ಸೋಮನಗೌಡ ಅಸ್ಕಿ 529 ಅಂಕ, ಪ್ರತೀಕ್ಷಾ ಶೆಟ್ಟಿ 516 ಅಂಕ, ನೂತನ ಆರ್ ಗೌಡ 508 ಅಂಕ, ಸಮೃದ್ಧ ಎಸ್ ಕೆ 506 ಅಂಕ, ಹಿಬಾ ಸಿಮಲ್ ಹಾಗೂ ಅಬ್ದುಲ್ ಜಬ್ಬರ್ ಇಬ್ಬರೂ ತಲಾ 505 ಅಂಕ, ಶರಣ್ ಯಂ ಎಸ್ 500 ಅಂಕ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಜೊತೆಗೆ ಪೂರ್ವಿ ಎಂ, ಚೇತನ್ ಕೆ ಎಂ, ಸೃಜನ್ ಸುರೇಶ್ ಕುಂಬರ್, ಪುಷ್ಪಕ್ ಎ ಆರ್, ತಸ್ಮಿಯಾ ಎಸ್, ಮನೋಜ್ ಬಿ ಎನ್, ಶಶಾಂಕ್, ನಿವೇದಿತಾ ಹಿರೇಮಠ, ರವಿಶಂಕರ್ ಎಂ ಎಂ, ಪತಂಜಲಿ ಬಂಗೇರ, ಲಕ್ಷ್ಮಿ, ತನಿಷ್ಕಾ ಎಸ್ ಕೆ, ವೇದಿಕ್ ರಾಜ್ ಅರಸ್, ಅತವಳಿಗಿ ಪೂಜಾ, ಅಕ್ಷತಾ ಜೆ, ನಿತಿನ್ ಡಿ ವೈ, ಆದರ್ಶ್ ಎಲ್ ಜಿ, ಫಾತಿಮಾ ಅಶುರ, ಈಶ್ವರ್ ಕಬನೂರಿ ಮತ್ತು ಸಂಗೀತ ಆರ್ ಡಿ ಸೇರಿದಂತೆ ಹಲವರು ಉತ್ತಮ ಅಂಕಗಳನ್ನು ಗಳಿಸಿದ್ದಾರೆ.
ಈ ವರ್ಷದ ನೀಟ್ ಫಲಿತಾಂಶದಲ್ಲಿ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ಒಟ್ಟು 12 ವಿದ್ಯಾರ್ಥಿಗಳು 500ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದು, 450ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 32ಕ್ಕೆ ಏರಿದೆ. ಈ ಸಾಧನೆ ಕಾಲೇಜಿನಲ್ಲಿ ನೀಡಲಾಗುತ್ತಿರುವ ಉತ್ತಮ ಕೋಚಿಂಗ್, ಶಿಸ್ತಿನ ಅಧ್ಯಯನ ವ್ಯವಸ್ಥೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ರೂಪಿಸಿರುವ ಪ್ರಬಲ ಶೈಕ್ಷಣಿಕ ನಿಲುವಿನ ಫಲವಾಗಿದೆ.
ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ಮತ್ತು ಅಧ್ಯಾಪಕೇತರ ವೃಂದದವರು ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಾರಿ ಹೆಚ್ಚಿನ ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಮತ್ತು ದಂತವೈದ್ಯಕೀಯ ಸೀಟುಗಳನ್ನು ಪಡೆಯುವ ನಿರೀಕ್ಷೆಯಿದೆ.
