Categories
ಚಿಕ್ಕಮಗಳೂರು

ಕೊಪ್ಪ ಉತ್ಸವ ರಂಗು ಶುರು!

ಕೊಪ್ಪ ಉತ್ಸವ ರಂಗು ಶುರು!
– ಬಡವರ ಬಂಧು ಸಿದ್ದಿಕ್ ನೇತೃತ್ವದಲ್ಲಿ ಆಯೋಜನೆ
– ಜ. 17 ರಿಂದ 21 ರವರೆಗೆ ಕೊಪ್ಪ ಉತ್ಸವ – 2025
– ನೂರಾರು ಮಳಿಗೆಗಳು: ಸಾಂಸ್ಕೃತಿಕ ಕಾರ್ಯಕ್ರಮಗಳು

NAMMUR EXPRESS NEWS
ಕೊಪ್ಪ: ಬಡವರ ಬಂಧು ಸಾಂಸ್ಕೃತಿಕ ವೇದಿಕೆ, ಕೊಪ್ಪ ಇವರ ಆಶ್ರಯದಲ್ಲಿ ಕೊಪ್ಪ ಉತ್ಸವ – 2025 ಶುಕ್ರವಾರದಿಂದ 5 ದಿನ ನಡೆಯಲಿದೆ. 17.01.2025 ಶುಕ್ರವಾರ ಸಂಜೆ 6:30ಕ್ಕೆ ಅನ್ನಪೂರ್ಣ ಲೇಔಟ್ ಶ್ರೀ ಗುತ್ಯಮ್ಮ ದೇವಸ್ಥಾನದ ಸಮೀಪ ಕೊಪ್ಪದಲ್ಲಿ ಐದು ದಿನಗಳ ಕಾಲ ಕೊಪ್ಪ ಉತ್ಸವ 2025 ನೆರವೇರಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಒಕ್ಕಲಿಗರ ಸಂಘದ ನಿರ್ದೇಶಕರಾದ ಪೃಥ್ವಿರಾಜ್ ಕೆ.ಪಿ. ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಧಾಕರ್ ಕುಪ್ಪಳ್ಳಿ ತಟ್ಟಾಪುರ, ವಿಶ್ವನಾಥ್ ಕಲ್ಕೆರೆ, ಎ. ಓ. ವೆಂಕಟೇಶ್, ಸಮರ್ಥ್, ಎಚ್. ಕೆ. ಸುರೇಶ್, ಕೆ. ಜಿ ಶೋಭಿತ್, ಜಿನೇಶ್ ಇರ್ವತ್ತೂರು, ಕಿರಣ್ ಮಡಬಳ್ಳಿ, ಇಸ್ಮಾಯಿಲ್ (ಇದ್ದೀನಬ್ಬ), ಮೈತ್ರಾ ಗಣಶ್, ರ್ಥ ಹೆಚ್. ಶೆಟ್ಟಿ, ಶ್ರೀನಿವಾಸ ಶೆಟ್ಟಿ, ರಮೇಶ್, ಶೃಂಗಗಿರಿ ಈ ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ. ಐದು ದಿನಗಳ ಕಾಲ ಕೊಪ್ಪ ಉತ್ಸವ ನೆರವೇರಲಿದೆ. ಮಧ್ಯಾಹ್ನ 2:30 ರಿಂದ ರಾತ್ರಿ 10 ರವರೆಗೆ ಅನ್ನಪೂರ್ಣ ಲೇಔಟ್ ಕೊಪ್ಪದಲ್ಲಿ ಈ ಉತ್ಸವ ನಡೆಯಲಿದೆ. ಸರ್ವರಿಗೂ ಕೂಡ ಈ ಕಾರ್ಯಕ್ರಮಕ್ಕೆ ಆಯೋಜಕರು ಆದರದ ಸ್ವಾಗತ ಕೋರಿದ್ದಾರೆ.

100ಕ್ಕೂ ಹೆಚ್ಚು ಮಳಿಗೆಗಳು: ವಿಶೇಷ ಆಕರ್ಷಣೆ

ಕೊಪ್ಪ ಉತ್ಸವದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳು ಬಂದಿದ್ದು, ಬೆಳಿಗ್ಗೆ 10 ರಿಂದ ರಾತ್ರಿ 10 ಗಂಟೆವರೆಗೆ ಆಹಾರ ಮೇಳ ನೆರವೇರಲಿದೆ. ಈಗಾಗಲೇ ಅನೇಕ ಮಳಿಗೆಗಳು ಕೂಡ ಬಂದಿದೆ, ಪುಸ್ತಕ ಮಳಿಗೆ, ವಿಶೇಷ ಆಹಾರ ಮಳಿಗೆ, ಜೊತೆಗೆ ಕರಕುಶಲ ವಸ್ತು, ಖದೀ ಹಾಗೂ ಇನ್ನೂ ಹತ್ತು ಹಲವಾರು ವಿಶೇಷ ಮಳಿಗೆಗಳು ಬಂದಿವೆ. ಮಲೆನಾಡು ಹಾಗೂ ಕೊಪ್ಪದ ಜನರು ಭೇಟಿ ನೀಡಿ ಈ ಸುಂದರ ಕ್ಷಣದ ಅನುಭವ ಪಡೆಯಬಹುದು.

ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು

ಶನಿವಾರ 6:30ಕ್ಕೆ ದೈವರಾಜ ಬಬ್ಬು ಸ್ವಾಮಿ, ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ಗಿಲ್ಲಿ ನಟ ತಂಡದ ಕಾಮಿಡಿ ಮತ್ತು ಆರ್ಕೆಸ್ಟ್ರಾ, ಸೋಮವಾರ: ಪ್ರಸನ್ನ ಶೆಟ್ಟಿ ಬೈಲೂರು ನಿರ್ದೇಶನದ ಅಷ್ಟಮಿ ನಾಟಕ, ಮಂಗಳವಾರ: ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.