ಟಾಪ್ 3 ನ್ಯೂಸ್
– ತುಮಕೂರು : ಆನ್ಲೈನ್ ಗೇಮ್ನಲ್ಲಿ ಹಣ ಕಳೆದುಕೊಂಡ ಯುವಕ ಆತ್ಮಹತ್ಯೆ..!
– ಬೆಳಗಾವಿ : 2 ಸಾವಿರ ಹಣಕ್ಕಾಗಿ ಕೊಲೆ ಮಾಡಿದ ಆರೋಪಿಗಳ ಬಂಧನ…!
– ಗದಗ : ಲವ್ ಜಿಹಾದ್ಗೆ 9ನೇ ಕ್ಲಾಸ್ ವಿದ್ಯಾರ್ಥಿನಿ ಆತ್ಮಹತ್ಯೆ
NAMMUR EXPRESS NEWS
ತುಮಕೂರು : ಇತ್ತೀಚೆಗೆ ಆನ್ಲೈನ್ ಗೇಮಿಂಗ್ಗೆ ಅನೇಕ ಯುವಕರು ಬಲಿಯಾಗುತ್ತಿದ್ದು, ಇದೀಗ ಓರ್ವ ಯುವಕ ಆನ್ಲೈನ್ ಗೇಮಿಂಗ್ನಲ್ಲಿ ರೂ.20 ಸಾವಿರ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೊರಪೇಟೆಯ ಬಾರ್ ಲೈನ್ ರಸ್ತೆಯಲ್ಲಿ ನಡೆದಿದೆ. ಆನ್ಲೈನ್ ಗೇಮ್ ಆಡಬೇಡ ಎಂದು ತಾಯಿ ಬುದ್ದಿ ಹೇಳಿದ್ದಕ್ಕೆ ಮನನೊಂದು ಟಿ.ಎಸ್.ಭರತ್ (24) ಎಂಬುವವನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನ್ಲೈನ್ ಗೇಮಿಂಗ್ನಲ್ಲಿ ರೂ.20 ಸಾವಿರ ಕಳೆದುಕೊಂಡಿದ್ದ ಭರತ್ ವಿಚಾರ ತಿಳಿದ ತಾಯಿಯು, ಇನ್ಮುಂದೆಯಾದರೂ ಆಡಬೇಡಪ್ಪ ಅಂತಾ ಬುದ್ದಿಮಾತು ಹೇಳಿದ್ದರು ಎಂದು ತಿಳಿದುಬಂದಿದೆ. ಇನ್ನು ಘಟನೆ ಸಂಬಂಧ ತುಮಕೂರು ನ ೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಬೆಳಗಾವಿ : 2 ಸಾವಿರ ಹಣಕ್ಕಾಗಿ ಕೊಲೆ ಮಾಡಿದ ಆರೋಪಿಗಳ ಬಂಧನ…!
ಬೆಳಗಾವಿ: ಎರಡು ಸಾವಿರ ಹಣಕ್ಕಾಗಿ ಕೊಲೆ ಮಾಡಿ, ಊರಲ್ಲಿ ಜಾಲಿಯಾಗಿ ಓಡಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಂತೋಷ್ ನಾಯಿಕ್, ಹೊಳೆಪ್ಪ ಘಸ್ತಿ, ಮಹೇಶ್ ಬೇರಡ ಕೊಲೆ ಮಾಡಿದ ಆರೋಪಿಗಳು. ಅಪ್ಪಾಸಾಹೇಬ್ ಭೀಮಾ ನಾಯಿಕ್ (64) ಕೊಲೆಯಾದ ದುರ್ದೈವಿ. ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ವಾಳಕಿ ಗ್ರಾಮದ ಅಪ್ಪಾಸಾಹೇಬ್ 2023ರ ಅಗಸ್ಟ್ 11ರಂದು ಸಂತೆಗೆ ಹೋಗುವುದಾಗಿ ಹೇಳಿ ಹೋಗಿದ್ದರು. ಸಂತೆಗೆ ಹೋದ ತಂದೆ ಅಪ್ಪಾಸಾಹೇಬ್ ಮರಳಿ ಮನೆಗೆ ಬಾರದಿದ್ದಕ್ಕೆ ಮಗ ಕಾಕಾಸಾಹೇಬ್ ಖಡಕಲಾಟ್ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ಅಣ್ಣಾಸಾಹೇಬ್ರನ್ನು ಕೊಲೆ ಮಾಡಿದ ಬಳಿಕ ಮೂವರು ಆರೋಪಿಗಳು ಊರಲ್ಲಿ ಜಾಲಿಯಾಗಿ ತಿರುಗಾಡಿಕೊಂಡಿದ್ದರು. ಒಂದು ದಿನ, ಆರೋಪಿ ಸಂತೋಷ್ ನಾಯಿಕ್ ಕುಡಿದ ಮತ್ತಲ್ಲಿ ಕೆಂಪಣ್ಣ ಎಂಬುವವರ ಮುಂದೆ ಕೊಲೆ ಮಾಡಿದ್ದು ನಾವೇ ಎಂದು ಹೇಳಿದ್ದನು. ಈ ವಿಚಾರವನ್ನು ಕೆಂಪಣ್ಣ ಕೊಲೆಯಾದ ಅಪ್ಪಸಾಹೇಬ್ರ ಪುತ್ರ ಕಾಕಾಸಹೇಬ್ಗೆ ಹೇಳಿದ್ದನು. ಕೆಂಪಣ್ಣನ ಮಾತನ್ನು ಆಧರಿಸಿ ಕಾಕಾಸಾಹೇಬ್ ಪೊಲೀಸರಿಗೆ ದೂರು ನೀಡಿದ್ದರು. ಕಾಕಾಸಾಹೇಬ್ ದೂರು ಆಧರಿಸಿ ಪೊಲೀಸರು ಮೂವರನ್ನು ಬಂಧಿಸಿದರು. ಆರೋಪಿಗಳ ಮಾಹಿತಿ ಆಧರಿಸಿ ಪೊಲೀಸರು ಮಹಾರಾಷ್ಟ್ರ ರಾಜ್ಯದ ಫೋಡಾ ಘಾಟ್ನಲ್ಲಿ ಸ್ಥಳ ಮಹಜರು ನಡೆಸದರು. ಆದರೆ, ಶವ ಈವರೆಗೂ ಪತ್ತೆಯಾಗಿಲ್ಲ. ಮನೆ ಕಟ್ಟಲು ಆರೋಪಿ ಸಂತೋಷ್ ಅಪ್ಪಾಸಾಹೇಬ್ರಿಂದ ಮುಂಗಡ ಹಣ ಪಡೆದಿದ್ದನು. ಆದರೆ, ಸಂತೋಷ್ ಮನೆ ಕೆಲಸ ಪೂರ್ಣಗೊಳಿಸಿದೆ, ಅರ್ಧಕ್ಕೆ ಬಿಟ್ಟಿದ್ದನು. ಹೀಗಾಗಿ, ಹೆಚ್ಚುವರಿಯಾಗಿ ನೀಡಿದ್ದ ಎರಡು ಸಾವಿರ ಹಣ ನೀಡುವಂತೆ ಅಪ್ಪಸಾಹೇಬ್ ಆರೋಪಿ ಸಂತೋಷ್ಗೆ ಕೇಳಿದ್ದರು. ಈ ಎರಡು ಸಾವಿರ ರೂಪಾಯಿಗಾಗಿ ಕೊಲೆ ಮಾಡಿದ್ದಾಗಿ ಆರೋಪಿಗಳು ಪೊಲೀಸರ ಎದುರು ಒಪ್ಪಿಕೊಂಡಿದ್ದಾರೆ.
– ಗದಗ : ಲವ್ ಜಿಹಾದ್ಗೆ 9ನೇ ಕ್ಲಾಸ್ ವಿದ್ಯಾರ್ಥಿನಿ ಆತ್ಮಹತ್ಯೆ
ಗದಗ : ಹತ್ಾು ಕನಸು ಕಂಡಿದ್ದ 9ನೇ ತರಗತಿ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ಘಟನೆ ಗದಗ ಜಿಲ್ಲೆ ಗಜೇಂದ್ರಗಡದ ಬಣಗಾರ ಕಾಲೋನಿಯಲ್ಲಿ ನಡೆದಿದೆ. ಅಪ್ರಾಪ್ತ ಬಾಲಕರ ಕಿರುಕುಳಕ್ಕೆ 9ನೇ ತರಗಿತಿ ಖುಷಿ ಪ್ರಾಣ ಕಳೆದುಕೊಂಡಿದ್ದಾಳೆ. ಅಪ್ರಾಪ್ತ ಬಾಲಕರ ಕಿರುಕುಳಕ್ಕೆ ಬೇಸತ್ತು ಖುಷಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಮುದ್ದಿನ ಮಗಳ ಸಾವು ಕಂಡು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಬಣಕಾರ ಓಣಿಯ ನಿವಾಸಿ 15 ವರ್ಷದ ಖುಷಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಓದುತ್ತಿದ್ದ ಶಾಲೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ದಿನ ನಿತ್ಯ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದರೆಂದು ಖುಷಿಯ ಹೆತ್ತವರು ಆರೋಪಿಸಿದ್ದು, ಮುದ್ದಾಗಿ ಸಾಕಿದ್ದ ಮಗಳ ಕಳೆದುಕೊಂಡ ಕುಟುಂಬಸ್ಥರು ಮಗಳ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.. ಲವ್ ಜಿಹಾದ್ ಆರೋಪ..! ಇಬ್ಬರು ಅಪ್ರಾಪ್ತ ಬಾಲಕರ ಕಿರುಕುಳಕ್ಕೆ ಖುಷಿ ಆತ್ಮಹತ್ಯೆ ಮಾಡಿಕೊಂಡ ವಿಷಯ ಎಸ್ ಎಸ್ ಕೆ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ. ಬಾಲಕಿ ಸಾವು ಖಂಡಿಸಿ ಇಡೀ ಸಮಾಜ ವ್ಯಾಪಾರ ವಹಿವಾಟು ಬಂದ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖುಷಿ ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಲವ್ ಜಿಹಾದ್ಗೆ ಬಲಿಯಾಗಿರುವ ಸಂಶಯವಿದೆ ಎಂದು ಆರೋಪಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ತಹಶೀಲ್ದಾರರಿಗೆ ಆಗ್ರಹಿಸಿದ್ದಾರೆ. ಇನ್ನು ಈ ಕುರಿತು ಗಜೇಂದ್ರಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.