ಕಾರ್ಮಿಕ ಮಿತ್ರ ಬಳಗದಿಂದ ಕಾರ್ಮಿಕ ದಿನಾಚರಣೆ
* ಪೌರ ಕಾರ್ಮಿಕರಿಗೆ ಸನ್ಮಾನ ಮತ್ತು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ
* ಶೃಂಗೇರಿ ಶ್ರೀಶಾರದಾ ಪೀಠದಿಂದ ರಗ್ ವಿತರಣೆ
NAMMMUR EXPRESS NEWS
ಶೃಂಗೇರಿ: ಕಾರ್ಮಿಕ ಮಿತ್ರ ಬಳಗ (ರಿ) ಶೃಂಗೇರಿ ಇವರ ವತಿಯಿಂದ ಶೃಂಗೇರಿಯ ಕನ್ನಡ ಭವನದಲ್ಲಿ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಮಿಕ ಬಳಗದ ತಾಲೂಕು ಅಧ್ಯಕ್ಷರಾದ ಶೂನ್ಯ ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ, ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ, ಕಾರ್ಮಿಕರಿಗೆ ಶೃಂಗೇರಿ ಶ್ರೀಶಾರದಾ ಪೀಠದಿಂದ ರಗ್ ವಿತರಣೆ,ಕಾರ್ಮಿಕರಿಗೆ ಗಿಡಗಳ ವಿತರಣೆ ಮತ್ತು ತಾಲೂಕಿನ ಗುತ್ತಿದಾರ ಭಾನು ಪ್ರಕಾಶ್‌ರವರಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಅರಣ್ಯ ಹಕ್ಕು ಸಮಿತಿಯ ಮೇಲುಸ್ತುವಾರಿ ಸಮಿತಿ ಮಾಜಿ ಸದಸ್ಯರು ಮತ್ತು ರಾಜ್ಯ ಮೂಲ ಆದಿವಾಸಿ ವೇದಿಕೆಯ ರಾಜ್ಯ ಅಧ್ಯಕ್ಷರು ಹಾಗೂ ಚಿಕ್ಕಮಗಳೂರು ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾಧ್ಯಕ್ಷರಾದ ಕೆ.ಎನ್ ವಿಠ್ಠಲ್ ಮತ್ತು ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿಯ ರಾಜ್ಯ ಸದಸ್ಯರಾದ ಬಸವರಾಜ ಕೌತಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಕೊಪ್ಪ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಯಾದ ಎಲ್. ನಂದೀಶ್‌ರವರಿಂದ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು. ಶೃಂಗೇರಿ ವಲಯಾಧಿಕಾರಿ ಮಧುಕರ್ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿದರು.
ಕಾರ್ಯಕ್ರಮವನ್ನು ಶೃಂಗೇರಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಎಚ್.ಎಸ್ ವೇಣುಗೋಪಾಲ್ ಉದ್ಘಾಟಿಸಿದರು. ಶೃಂಗೇರಿ ಶ್ರೀಶಾರದಾ ಪೀಠದ ವತಿಯಿಂದ ನೀಡಲಾದ ರಗ್‌ಗಳನ್ನು ಶ್ರೀಮಠದ ಪ್ರತಿನಿಧಿಯಾದ ಸತೀಶ್ ಭಟ್ ಕಾರ್ಮಿಕರಿಗೆ ವಿತರಿಸಿದರು,ಕಾರ್ಯಕ್ರಮದಲ್ಲಿ ಶಿವ ಪ್ರಕಾಶ್ ಕನ್ಸ್ಟ್ರಕ್ಷನ್ಸ್ ಮಾಲೀಕರಾದ ಭಾನುಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಮಿಕರಿಗೆ ಸಮಸ್ಯೆಗಳಾದಲ್ಲಿ ಎಲ್ಲರೂ ಒಟ್ಟಾಗಿ ಬಗೆಹರೆಸುವ ಆಶಯ ವ್ಯಕ್ತಪಡಿಸಿದ ತಾಲೂಕು ಅಧ್ಯಕ್ಷ ಶೂನ್ಯ ರಮೇಶ್ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
