Categories
ತೀರ್ಥಹಳ್ಳಿ

ಕೋಣಂದೂರು ಆಸ್ಪತ್ರೆ ಉದ್ಘಾಟಿಸಿದ ಅರೋಗ್ಯ ಸಚಿವರು

ಕೋಣಂದೂರು ಆಸ್ಪತ್ರೆ ಉದ್ಘಾಟಿಸಿದ ಅರೋಗ್ಯ ಸಚಿವರು
– ₹9.8 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ
– ಎಲ್ಲಾ ಸೌಕರ್ಯ ಒದಗಿಸಲು ಬದ್ಧ ಎಂದ ದಿನೇಶ್ ಗುಂಡೂರಾವ್

NAMMUR EXPRESS NEWS
ಕೋಣಂದೂರು: ಬಹುದಿನಗಳ ನಿರೀಕ್ಷೆಯಾಗಿದ್ದ ನೂತನ ಸಮುದಾಯ ಆರೋಗ್ಯ ಕೇಂದ್ರ ಮೇ 28ರಂದು ಉದ್ಘಾಟನೆಗೊಂಡಿದೆ.
ಶಾಸಕ ಆರಗ ಜ್ಞಾನೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟನೆ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಡಿ.ಎಚ್.ಒ. ನಟರಾಜ್, ಟಿ.ಎಚ್.ಒ. ಅನಿಕೇತ್, ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣ ವಾಸುದೇವ, ಉಪಾಧ್ಯಕ್ಷೆ ಸುಜಾತ ಚೂಡಾಮಣಿ, ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ಆಸ್ಪತ್ರೆಯಲ್ಲಿ ಏನೇನಿದೆ?

ಆರೋಗ್ಯ ಕೇಂದ್ರದ ಜಾಗದಲ್ಲಿ ₹9.8 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣಗೊಂಡಿದೆ.ನೂತನ ಸಮುದಾಯ ಆರೋಗ್ಯ ಕೇಂದ್ರದಲ್ಲಿ 30 ಹಾಸಿಗೆಗಳ ವ್ಯವಸ್ಥೆ ಇದೆ. 6 ವೈದ್ಯರು ಸೇರಿದಂತೆ 33 ಆರೋಗ್ಯ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.

ಆಸ್ಪತ್ರೆಗಾಗಿ ಜಾಗ ದಾನ ಮಾಡಿದ್ದ ಕುಟುಂಬ!

ಆರಗ ಜ್ಞಾನೇಂದ್ರ ಅವರು ಮಾತನಾಡಿ ಸಮುದಾಯ ಆರೋಗ್ಯ ಕೇಂದ್ರ ಕೋಣಂದೂರು ಉದ್ಘಾಟನೆಗೊಂಡಿರುವುದು ತುಂಬಾ ಹೆಮ್ಮೆಯ ಸಂಗತಿ. ಕೋಣಂದೂರಿನಲ್ಲಿ ಜಾಗವೇ ಇರಲಿಲ್ಲ ಆದರೆ ಎರಡು ಕುಟುಂಬದವರು ಈ ಆರೋಗ್ಯ ಕೇಂದ್ರಕ್ಕೆ ಕೆಲವು ವರ್ಷಗಳ ಹಿಂದೆಯೇ ಜಾಗವನ್ನು ನೀಡಿದ್ದು ಆದ್ದರಿಂದ ಆ ಕುಟುಂಬಕ್ಕೆ ಸಾಕಷ್ಟು ರೀತಿಯ ಒಳಿತು ಆಗಲಿ ಎಂದು ನಾನು ಪ್ರಾರ್ಥನೆ ಮಾಡುತ್ತೇನೆ ಎಂದು ಆಗರ ಜ್ಞಾನೇಂದ್ರ ಅವರು ತಿಳಿಸಿದರು.

ಎಲ್ಲಾ ಸೌಲಭ್ಯ ಒದಗಿಸಲು ಸರ್ಕಾರ ಬದ್ಧ: ದಿನೇಶ್ ಗುಂಡೂರಾವ್ 

ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರ ಕಟ್ಟಿರುವುದು ತುಂಬಾ ಸಂತೋಷವಾಗಿದೆ. ಈ ಆರೋಗ್ಯ ಕೇಂದ್ರ ಉದ್ಘಾಟನೆಗೊಂಡಿದೆ, ಹೊರತು ಲೋಕಾರ್ಪಣೆಗೊಂಡಿಲ್ಲ ಎಲ್ಲಾ ರೀತಿಯ ಸಿಬ್ಬಂದಿಗಳು, ವ್ಯವಸ್ಥೆಗಳು ಪೂರ್ಣವಾದರೆ ಮಾತ್ರ ಲೋಕಾರ್ಪಣೆಗೊಂಡಿದೆ ಎಂದರ್ಥ. ಈ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ಸಿಬ್ಬಂದಿಗಳು, ಸಲಕರಣೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕೂಡ ಮಾಡಿಕೊಡುತ್ತೇವೆ ಎಂಬುದಾಗಿ ಭರವಸೆಯನ್ನು ನೀಡಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.