Categories
ಚಿಕ್ಕಮಗಳೂರು

ಪ್ಲಾಂಟೇಷನ್ ಬೆಳೆಗಳ ಜಮೀನು ಗುತ್ತಿಗೆ: ಜು. 15 ಕೊನೆ ದಿನ

ಪ್ಲಾಂಟೇಷನ್ ಬೆಳೆಗಳ ಜಮೀನು ಗುತ್ತಿಗೆ: ಜು. 15 ಕೊನೆ ದಿನ 
– ನಮೂನೆ 57 ಅರ್ಜಿ ಸಲ್ಲಿಸಿದವರೂ ಅರ್ಜಿ ಸಲ್ಲಿಸಿ: ಶಾಸಕ ರಾಜೇಗೌಡ
– ನಮೂನೆ 9ರಲ್ಲಿ ಅರ್ಜಿ ಸಲ್ಲಿಸಲು ಕೊನೆಯ ಅವಕಾಶ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನರಸಿಂಹರಾಜಪುರ/ಕೊಪ್ಪ: ಪ್ಲಾಂಟೇಷನ್ ಬೆಳೆಗಳ ಜಮೀನು ಗುತ್ತಿಗೆ ನೀಡಲು ಬೆಳೆಗಾರರು ನಮೂನೆ 9ರ ಅರ್ಜಿ ಸಲ್ಲಿಸಲು ಸರ್ಕಾರ ದಿನಾಂಕ ವಿಸ್ತರಣೆ ಮಾಡಿರುವ ದಿನಾಂಕ ಕೂಡ ಜುಲೈ 15ಕ್ಕೆ ಮುಗಿಯಲಿದ್ದು ನಮೂನೆ 57ರಲ್ಲಿ( ಬಗರ್ ಹುಕುಂ) ಎಲ್ಲಾ ಬೆಳೆಗಾರರು ಈ ಅವಕಾಶ ಬಳಸಿಕೊಳ್ಳಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದ್ದಾರೆ.
ಸರ್ಕಾರಿ ಜಮೀನುಗಳಲ್ಲಿ ಬೆಳೆಯುತ್ತಿರುವ ಪ್ಲಾಂಟೇಷನ್ ಬೆಳೆಗಳ ಜಮೀನುಗಳನ್ನು ನಮೂನೆ 57ರಲ್ಲಿ ಕೂಡ ಅರ್ಜಿ ಹಾಕಿ ರೈತರು, ಕಾಫಿ ಹಾಗೂ ಇತರೆ ಬೆಳೆಗಾರರು ಅವಕಾಶ ಬಳಸಿಕೊಳ್ಳಬೇಕು. ಈಗಾಗಲೇ ಬಹುತೇಕರು ಅರ್ಜಿ ಸಲ್ಲಿಸಿದ್ದಾರೆ. ಇನ್ನು ಅರ್ಜಿ ಹಾಕದೆ ಇರುವವರು ಅರ್ಜಿ ಸಲ್ಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸರ್ಕಾರ ಜಮೀನನ್ನು ಗುತ್ತಿಗೆ ನೀಡಲು ಸಂಬಂಧಪಟ್ಟ ಬೆಳೆಗಾರರಿಂದ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸುತ್ತಿದೆ. 2025ರ ಜ.1ಕ್ಕಿಂತ ಮೊದಲು ಸರ್ಕಾರಿ ಜಮೀನಿನಲ್ಲಿ ಪ್ಲಾಂಟೇಷನ್ ಬೆಳೆಗಳನ್ನು ಬೆಳೆಯುತ್ತಿರುವ ಜಮೀನಿನ ಗುತ್ತಿಗೆ ನೀಡಲು ನಮೂನೆ 9ರಲ್ಲಿ ಸಂಬಂಧಪಟ್ಟ ಬೆಳೆಗಾರರಿಂದ ಆನ್ ಲೈನ್ ಮೂಲಕ ಅರ್ಜಿಸಲ್ಲಿಸಲು ಅನುಕೂಲವಾಗುವಂತೆ ದಿನಾಂಕ 2025ರ ಜುಲೈ 15ರವರೆಗೆ ಕಾಲಾವಕಾಶ ವಿಸ್ತರಿಸಲಾಗಿತ್ತು. ಬಗರ್ ಹುಕುಂ ಅರ್ಜಿ ಹಾಕಿದವರು ಕೂಡ ಈ ಅರ್ಜಿ ಹಾಕಿ ಯೋಜನೆಯ ಅನುಕೂಲ ಪಡೆಯಬೇಕೆಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.