Categories
ಕರಾವಳಿ ಮಲ್ನಾಡ್

ಮಳೆಯಿಂದ ಅಡಕೆಗೆ ಕೊಳೆ: ರೈತರಿಗೆ ಜೀವನ ಭಯ!

ಮಳೆಯಿಂದ ಅಡಕೆಗೆ ಕೊಳೆ: ರೈತರಿಗೆ ಜೀವನ ಭಯ! 
– ಫಸಲಿದ್ದರೂ ಔಷಧ ಸಿಂಪಡಣೆಗೆ ಮಳೆ ಅಡ್ಡಿ
– ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆ!

NAMMUR EXPRESS NEWS
ಮಲೆನಾಡು/ ಕರಾವಳಿ: ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ರೈತರ ಸ್ಥಿತಿ ಆತಂಕಕ್ಕೆ ತಲುಪಿದೆ. ಮಳೆ ಕಾರಣ ಔಷಧಿ ಕೂಡ ಹೊಡೆಯಲು ಕೂಡ ತೊಂದರೆ ಆಗಿದೆ.
ಎರಡು ತಿಂಗಳಿನಿಂದ ಕರಾವಳಿ ಹಾಗೂ ಮಲೆನಾಡ ಹೆಚ್ಚಿನ ಭಾಗಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆ ಅಡಕೆ ಬೆಳೆಗೆ ಕೊಳೆರೋಗ ಹರಡುತ್ತಿದೆ. ಇದು ಇದೀಗ ರೈತರ ಆತಂಕಕ್ಕೆ ಕಾರಣವಾಗಿದೆ.
ಕಳೆದ ವರ್ಷ ಭಾರಿ ಮಳೆಯಿಂದ ವಿಪರೀತ ಕೊಳೆ ರೋಗ ಭಾದೆ ಕಂಡು ಬಂದಿದ್ದು, ಹೆಚ್ಚಿನ ತೋಟಗಳಲ್ಲಿ ಅರ್ಧದಷ್ಟೂ ಫಸಲು ಸಿಕ್ಕಿಲ್ಲ. ಬೆಲೆ ಇದ್ದರೂ ಫಸಲು ಇರಲಿಲ್ಲ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಂತೂ ಈಗಾಗಲೇ ಅಡಕೆ ಕೊಳೆರೋಗ ವ್ಯಾಪಕವಾಗಿ ಕಾಣಿಸಿಕೊಂಡಿದೆ. ಎರಡು ಬಾರಿ ನಿಯಂತ್ರಣದ ಬೋರ್ಡೋ ಮಿಶ್ರಣ ಔಷಧ ಸಿಂಪಡಣೆ ಮಾಡಿದ್ದರೂ ಪ್ರಯೋಜನವಾಗಿಲ್ಲ.
ನಿರಂತರ ಮಳೆಯಿಂದಾಗಿ ಅಡಕೆ ತೋಟದಲ್ಲಿ ಶೀತ ವಾತಾವರಣ ಸೃಷ್ಟಿಯಾಗಿದ್ದು, ಅಡಕೆ ಗೊನೆಯಲ್ಲಿ ಕೊಳೆ ಉತ್ಪತ್ತಿಗೊಂಡಿದೆ. ಅಡಕೆ ಮಳೆ, ಹಸಿರು ಕಾಯಿ ಕೊಳೆತು ಉದುರಿ ಬೀಳುತ್ತಿದ್ದು ಬೆಳೆ ನಷ್ಟಕ್ಕೆ ಕಾರಣವಾಗುತ್ತಿದೆ. ಇತ್ತ ಔಷಧ ಸಿಂಪಡಿಸಲು ಕುಶಲ ಕಾರ್ಮಿಕರು ಸಿಗುತ್ತಿಲ್ಲ. ಇನ್ನೊಂದೆಡೆ ಔಷಧ ಸಿಂಪಡಣೆ ಯಂತ್ರ ಅವಲಂಬನೆ ಹೆಚ್ಚಾಗಿದೆ. ಕೊಳೆರೋಗ ತಡೆ ಔಷಧ ಸಾಮಗ್ರಿ ಬೆಲೆ ಹೆಚ್ಚಾಗಿದ್ದು ಸಿಂಪಡಣೆಗೆ ದುಬಾರಿ ವೆಚ್ಚ ತಗಲುತ್ತಿದೆ.
ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಡಿಕೆ ಇದೀಗ ರೈತರಲ್ಲಿ ಭಯ ಹುಟ್ಟಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.