Categories
ಚಿಕ್ಕಮಗಳೂರು

ಶೃಂಗೇರಿಯಲ್ಲಿ ವಿಶ್ವಯೋಗ ದಿನ ಆಚರಿಸೋಣ ಬನ್ನಿ

ಶೃಂಗೇರಿಯಲ್ಲಿ ವಿಶ್ವಯೋಗ ದಿನ ಆಚರಿಸೋಣ ಬನ್ನಿ

* ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಹಾಗೂ ಹಿಂದೂ ಸೇವಾ ಪ್ರತಿಷ್ಠಾನದಿಂದ ಆಯೋಜನೆ
* ಯೋಗದಿಂದ ಆರೋಗ್ಯಕರ ಜೀವನ, ಮನಸ್ಸಿಗೆ ನೆಮ್ಮದಿ

NAMMMUR EXPRESS NEWS
ಶೃಂಗೇರಿ : ಜೂನ್ 21 ವಿಶ್ವ ಆರೋಗ್ಯ ದಿನ ಪ್ರಪಂಚದಾದ್ಯಂತ ಎಲ್ಲಾ ದೇಶಗಳು ಈ ದಿನವನ್ನು ಆಚರಿಸುತ್ತಿದ್ದು,ಜಗತ್ತಿಗೆ ಯೋಗವನ್ನು ಪರಿಚಯಿಸಿದ ಭಾರತದಾದ್ಯಂತ ವಿಶೇಷವಾಗಿ ಆಚರಿಸುಲಾಗುತ್ತದೆ.
ಶೃಂಗೇರಿಯಲ್ಲಿ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ,ಶೃಂಗೇರಿ ಹಾಗೂ ಹಿಂದೂ ಸೇವಾ ಪ್ರತಿಷ್ಠಾನ, ಶೃಂಗೇರಿ ಇವರ ಸಹಯೋಗದಲ್ಲಿ ಪಟ್ಟಣದ ಕನ್ನಡ ಭವನದಲ್ಲಿ ಯೋಗ ದಿನದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ಆಸಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸರ್ವರನ್ನು ಸಂಸ್ಥೆ ಆಹ್ವಾನನಿಸಿದೆ.
ಕಾರ್ಯಕ್ರಮ ಜೂ.21 ರ ಶನಿವಾರ ಬೆಳಿಗ್ಗೆ 5:30 ಕ್ಕೆ ಪಟ್ಟಣದ ಕನ್ನಡ ಭವನದಲ್ಲಿ ಆರಂಭವಾಗಲಿದೆ. 15 ನಿಮಿಷಗಳ ನಡೆಯುವ ಸಭಾ ಕಾರ್ಯಕ್ರಮವನ್ನು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹೆಚ್.ಎಸ್ ವೇಣುಗೋಪಾಲ್ ಉದ್ಘಾಟಿಸಲಿದ್ದಾರೆ,ನಂತರ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಶೃಂಗೇರಿಯ ಪ್ರಮುಖರಾದ ನಾಗೇಶ್ ಕಾಮತ್ ನೇತೃತ್ವದಲ್ಲಿ ವಿವಿಧ ಯೋಗಾಸನಗಳ ಅಭ್ಯಾಸ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.