ತೀರ್ಥಹಳ್ಳಿಯಲ್ಲಿ ವಿಶ್ವಯೋಗ ದಿನಾಚರಣೆಗೆ ಸಜ್ಜು..!
– ಭಾರತೀಯ ಯೋಗ ಶಿಕ್ಷಣ ಟ್ರಸ್ಟ್‌ನಿಂದ ಜೂನ್ 21ರಂದು ಕಾರ್ಯಕ್ರಮ
– ಬೆಳಿಗ್ಗೆ 6ರಿಂದ10 ಘಂಟೆಯವರೆಗೆ ಸೊಪ್ಪುಗುಡ್ಡೆಯಲ್ಲಿ ಸಾರ್ವಜನಿಕ ಸಮಾರಂಭ
NAMMUR EXPRESS NEWS
ತೀರ್ಥಹಳ್ಳಿ: ಭಾರತೀಯ ಯೋಗ ಶಿಕ್ಷಣ ಟ್ರಸ್ಟ್ (ರಿ) ಮತ್ತು ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಜೂನ್ 21 ರ ಶನಿವಾರ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗುವುದು. ಬೆಳಿಗ್ಗೆ 6 ರಿಂದ 7.30 ರವರೆಗೆ ಟಿ.ಎ.ಪಿ.ಸಿ. ಎಂ.ಎಸ್ ‘ ಸಭಾ ಭವನದಲ್ಲಿ ಸಾಮೂಹಿಕ ಯೋಗಾಸನ ನಡೆಯಲಿದೆ. ಯೋಗಾಸನ ಅಭ್ಯಾಸ ಇರುವ ಎಲ್ಲರೂ 10 ನಿಮಿಷ ಮುಂಚಿತವಾಗಿ ಆಗಮಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿಬೇಕಾಗಿ ವಿನಂತಿಸಲಾಗಿದೆ. ಇದೇ ದಿನ ಸಂಜೆ 6 ರಿಂದ10 ಘಂಟೆಯ ವರೆಗೆ ಸೊಪ್ಪುಗುಡ್ಡೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೋಗ ಶಿಕ್ಷಣ ಟ್ರಸ್ಟ್‌ನ ಗೌರವಾಧ್ಯಕ್ಷರಾದ ಡಾ||ಜೀವಂಧರ್ ಜೈನ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಆರಗ ಜ್ಞಾನೇಂದ್ರ, ಪ.ಪಂ.ಅಧ್ಯಕ್ಷ ರೆಹಮತ್ ಉಲ್ಲಾ ಅಸಾದಿ, ಮುಖ್ಯಾಧಿಕಾರಿ ಡಿ.ನಾಗರಾಜ್, ಯೋಗಶಿಕ್ಷಣ ಟ್ರಸ್ಟ್ (ರಿ) ಉಪಾಧ್ಯಕ್ಷೆ ಭಾಗ್ಯ ಎಸ್.ಐತಾಳ್ ಈ ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಪ್ರಖರ ವಾಗ್ನಿ, ನಿರೂಪಕ, ಮಾತೃವಂದನಾ ಕಾರ್ಯಕ್ರಮದ ಮೂಲಕ ಜನಪ್ರಿಯರಾದ ಎನ್. ಆರ್.ದಾಮೋದರ ಶರ್ಮಾ ಇವರು ಆಗಮಿಸಿ ಮಾತೃ ಭೂಮಿ ಭಾರತ ಎನ್ನುವ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ನಡೆಸಿಕೊಡಲಿದ್ದಾರೆ. ನಂತರ ಸ್ಥಳೀಯ ಶಾಲಾ ಮಕ್ಕಳು ಮತ್ತು ಸ್ಥಳೀಯ ಯೋಗ ಬಂಧುಗಳಿಂದ ಯೋಗ ನೃತ್ಯ ಹಾಗೂ ತಾಲೂಕಿನ ಯೋಗ ಪ್ರತಿಭೆಗಳಾದ ಚಿ. ಅಭಿನಂದನ್ ಕೋಟಿಕೊಪ್ಪ ಮತ್ತು ಚಿ.ಅದೈತ್ ಭಾವಿಕೈಸರು ಇವರಿಂದ ವಿಶೇಷ ಯೋಗಾಸನ ಪ್ರದರ್ಶನ ನಡೆಯಲಿದೆ.. ಕಾರ್ಯಕ್ರಮ ಸರಿಯಾಗಿ 6 ಘಂಟೆಗೆ ಆರಂಭವಾಗುತ್ತದೆ ದಯಮಾಡಿ 10 ನಿಮಿಷ ಮುಂಚಿತವಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಆಯೋಜಕರು ವಿನಂತಿಸಿದ್ದಾರೆ.
