ರಸ್ತೆ ಗುಂಡಿ ತಪ್ಪಿಸಲು ಹೋಗಿ ವ್ಯಕ್ತಿ ಸಾವು
* ಕ್ಷೇತ್ರದ ಶಾಸಕರ ವಿರುದ್ಧ ಗ್ರಾಮಸ್ಥರ ಆಕ್ರೋಶ,ಪ್ರತಿಭಟನೆ
* ತೋಟಕ್ಕೆಂದು ಹೋದರೆ ಆನೆ ಕಾಟ,ರಸ್ತೆ ಮೇಲೆ ವಾಹನದಲ್ಲಿ ಹೋದ್ರೆ ಗುಂಡಿ ಕಾಟ – ಡಿ.ಎನ್ ಜೀವರಾಜ್
NAMMMUR EXPRESS NEWS
ಎನ್.ಆರ್ ಪುರ: ರಸ್ತೆ ಗುಂಡಿ ತಪ್ಪಿಸಲು ಹೋಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ತಾಲೂಕಿನ ಮಡಬೂರು ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಚಂದ್ರಶೇಖರ್ ಆಚಾರ್ ಎಂದು ಗುರುತಿಸಲಾಗಿದೆ.
ಘಟನೆಯನ್ನು ಖಂಡಿಸಿ ಗ್ರಾಮಸ್ಥರು ರಸ್ತೆ ಗುಂಡಿಗೆ ಬಾಳೆಗಿಡ ನೆಟ್ಟು ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ವಿರುದ್ಧ ಪ್ರತಿಭಟನೆ ನಡೆಸಿದರು. ಎನ್.ಆರ್ ಪುರ ಶಿವಮೊಗ್ಗ ಸಂಪರ್ಕಿಸುವ ಮುಖ್ಯರಸ್ತೆ ಇದಾಗಿದ್ದು ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ರಸ್ತೆಯ ತುಂಬೆಲ್ಲಾ ಗುಂಡಿ ಬಿದ್ದಿದ್ದು ರಸ್ತೆಗೂ ಗುಂಡಿಗೂ ವ್ಯತ್ಯಾಸ ತಿಳಿಯದಂತಾಗಿದೆ.ಅದರಲ್ಲೂ ರಾತ್ರಿ ಹೊತ್ತು ಪ್ರಯಾಣ ತುಂಬಾ ಕಷ್ಟಕರವಾಗಿದೆ.ಆದಷ್ಟು ಬೇಗ ರಸ್ತೆಯನ್ನು ಸರಿಪಡಿಸಿ ಗುಂಡಿ ಮುಚ್ಚಿ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಿ ಇಲ್ಲವಾದಲ್ಲಿ ಇನ್ನೂ ತೀವ್ರ ಸ್ವರೂಪದ ಪ್ರತಿಭಟನೆ ನಡೆಸೋದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
* ತೋಟಕ್ಕೆ ಹೋದ್ರೆ ಆನೆ ಕಾಟ – ರಸ್ತೆ ಮೇಲೆ ವಾಹನದಲ್ಲಿ ಹೋದ್ರೆ ಗುಂಡಿ ಕಾಟ
ಈ ಘಟನೆಯ ಬೆನ್ನಲ್ಲೇ ಶಾಸಕ ರಾಜೇಗೌಡ ಹಾಗೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಶಾಸಕ ಡಿ.ಎನ್ ಜೀವರಾಜ್, ಕೇವಲ ಇದೊಂದೇ ರಸ್ತೆಯಲ್ಲ ಕ್ಷೇತ್ರದ ಎಲ್ಲಾ ರಸ್ತೆಗಳ ಪರಿಸ್ಥಿತಿ ಇದೇ ರೀತಿ ಇದೆ. ಮನೆಯಲ್ಲಿದ್ದು ತೋಟಕ್ಕೆಂದು ಹೋದರೆ ಆನೆ ಕಾಟವಿದೆ ಬೇಡ ರಸ್ತೆ ಮೇಲೆ ವಾಹನ ಸವಾರಿ ಮಾಡಿ ಅಂಗಡಿಗೆಂದು ಹೋದ್ರೆ ಗುಂಡಿ ಕಾಟವಿದೆ ಒಟ್ಟಾರೆ ಮನುಷ್ಯನ ಜೀವಕ್ಕೆ ಬೆಲೆ ಇಲ್ಲದ ಪರಿಸ್ಥಿತಿಯನ್ನು ಶೃಂಗೇರಿ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ. ಇದು ನಮ್ಮ ಕ್ಷೇತ್ರದ ಜನತೆಯ ದೌರ್ಭಾಗ್ಯ ಎಂದರು.
ಸರ್ಕಾರ ಚಿಕ್ಕಮಗಳೂರಿನ ಲ್ಯಾಂಡ್ ಆರ್ಮಿಗೆ ಕೆಲಸ ಕೊಡದೇ ಬೆಂಳೂರಿನ ಲ್ಯಾಂಡ್ ಆರ್ಮಿಗೆ ಕೆಲಸ ಕೊಡತ್ತೆ ಹೀಗಾದರೆ ಏನರ್ಥ ಇಲ್ಲಿನ ಏಜನ್ಸಿಗಳ ಮೇಲೆ ಅಪನಂಬಿಕೆ ಇದೆಯಾ ಅಥವಾ ಇದರಿಂದ ನಿಮಗೇನಾದರೂ ಲಾಭವಿದೆಯೇ ಎಂದು ಶಾಸಕರಿಗೆ ಪ್ರಶ್ನೆ ಮಾಡಿದರು.
