ಆನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ಶಾಸಕ ವೈಯಕ್ತಿಕ ನೆರವು
– ಸೀತೂರಿನಲ್ಲಿ ನಡೆದಿದ್ದ ಕಾಡಾನೆ ದಾಳಿ
– ವೈಯಕ್ತಿಕ ಪರಿಹಾರದ ಚೆಕ್ ನೀಡಿದ ಶಾಸಕ ಟಿ.ಡಿ ರಾಜೇಗೌಡ
NAMMUR EXPRESS NEWS
ಎನ್.ಆರ್.ಪುರ: ಎನ್ ಆರ್ ಪುರ ತಾಲೂಕಿನ ಸೀತೂರು ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಕಾಡಾನೆ ತುಳಿದು ಮೃತಪಟ್ಟಿದ್ದ ಕೆರೆಗದ್ದೆ ಉಮೇಶ್ರವರ ಕುಟುಂಬಕ್ಕೆ ಶಾಸಕ ಟಿ.ಡಿ ರಾಜೇಗೌಡ ಘೋಷಿಸಿದ್ದ ವೈಯಕ್ತಿಕ ಒಂದು ಲಕ್ಷ ರೂ.ಗಳ ಚೆಕ್ ವಿತರಿಸಿದರು. ಮೃತ ಉಮೇಶ್ ಮನೆಗೆ ಭೇಟಿ ನೀಡಿದ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಕುಟುಂಬಸ್ಥರಿಗೆ ಸಾಂತ್ವನ ಹೇಳಿ,ವೈಯಕ್ತಿಕವಾಗಿ ತಾನು ಘೋಷಿಸಿದ ಒಂದು ಲಕ್ಷ ರೂ. ಮೊತ್ತದ ಚೆಕ್ ಹಸ್ತಾಂತರಿಸಿದರು.
