ಕ್ಷೇತ್ರದ ಅತಿವೃಷ್ಠಿ-ಅನಾವೃಷ್ಠಿ ಮುಂಜಾಗೃತಾ ಸಭೆ ನಡೆಸಿದ ಶಾಸಕ ರಾಜೇಗೌಡ
* ತುರ್ತು ಸಂದರ್ಭದಲ್ಲಿ ಜನರ ಸಹಾಯಕ್ಕೆ ಸನ್ನದ್ಧವಾಗಿರಿ
* ಕ್ಷೇತ್ರದ ಮೂರು ತಾಲೂಕುಗಳಲ್ಲಿ ಸಭೆ ನಡೆಸಿದ ಶಾಸಕ
NAMMMUR EXPRESS NEWS
ಶೃಂಗೇರಿ/ಕೊಪ್ಪ/ಎನ್.ಆರ್ ಪುರ: ಕ್ಷೇತ್ರದಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಅನೇಕ ಸಮಸ್ಯೆಗಳು ಉಂಟಾಗಿದ್ದು,ಕ್ಷೇತ್ರದ ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ,ಜನರ ಸಮಸ್ಯೆಯ ಕರೆ ಬಂದಾಗ ತಕ್ಷಣ ಧಾವಿಸಿ ಪರಿಹಾರ ಕಾರ್ಯ ನಡೆಸುವಂತೆ ಶಾಸಕ ಟಿ.ಡಿ ರಾಜೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಳೆದೊಂದು ವಾರದಿಂದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ತಾಲೂಕು ಪಂಚಾಯ್ತಿ ಸಿಇಓ ಹಾಗೂ ತಹಶೀಲ್ದಾರ್ ಮತ್ತು ಎಲ್ಲಾ ಅಧಿಕಾರಿಗಳನ್ನು ಆಯಾ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸಭೆ ಸೇರಿಸಿ ಅತೀವೃಷ್ಠಿ ಹಾಗೂ ಅನಾವೃಷ್ಠಿಯ ಕುರಿತು ಪೂರ್ವಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಆಯಾ ತಾಲೂಕಗಳ ಸಮಸ್ಯೆಗಳು,ಪರಿಹಾರಕ್ಕಾಗಿ ಕೈಗೊಂಡ ಕಾರ್ಯಗಳು,ರಕ್ಷಣಾ ತಂಡದ ದೂರವಾಣಿ ವಿವರಗಳನ್ನು ಶಾಸಕ ಟಿ.ಡಿ ರಾಜೇಗೌಡ ಪರಿಶೀಲಿಸಿದರು. ತುರ್ತ ಸಂದರ್ಭಗಳಲ್ಲಿ ಜನರು ನೆರವಿಗಾಗಿ ಕರೆ ಮಾಡಿದಾಗಿತಕ್ಷಣ ಸ್ಪಂದಿಸಿ ನೆರವು ನೀಡಲು ರಕ್ಷಣಾ ತಂಡಗಳು ಸರ್ವ ಸನ್ನದ್ಧರಿರುವಂತೆ ಸೂಚಿಸಿದರು. ಆಕಾಲಿಕ ಮಳೆಯು ಕ್ಷೇತ್ರದಾದ್ಯಂತ ನಿರೀಕ್ಷೆಗೂ ಮೀರಿ ಸುರಿಯುತ್ತಿದ್ದು ಯಾವುದೇ ತೊಂದರೆಗಳಾಗದಂತೆ ಕ್ರಮಹಿಸಲು ಸಭೆಯಲ್ಲಿ ಸೂಚಿಸಲಾಗಿದೆ ಎಂದು ಶಾಸಕರು ತಿಳಿಸಿದರು.
