Categories
ಮಲ್ನಾಡ್

ಮಲೆನಾಡಿಗೆ ಪ್ರವಾಸ ಬರುವ ಪ್ರವಾಸಿಗರಿಗೆ ಎಚ್ಚರಿಕೆ

ಮಲೆನಾಡಿಗೆ ಪ್ರವಾಸ ಬರುವ ಪ್ರವಾಸಿಗರಿಗೆ ಎಚ್ಚರಿಕೆ

* ಪ್ರಕೃತಿ ಸೌಂದರ್ಯವನ್ನ ಆನಂದಿಸಿ ಆದರೆ ಆಹುತಿಯಾಗಬೇಡಿ
* ಸ್ವಚ್ಛ, ಸುಂದರ ಮಲೆನಾಡು ನಮ್ಮೆಲ್ಲರ ಉಸಿರು,ಇದು ನಮ್ಮೂರ್ ಎಕ್ಸ್‌ಪ್ರೆಸ್ ಕಳಕಳಿ

NAMMMUR EXPRESS NEWS
ಚಿಕ್ಕಮಗಳೂರು: ಮಳೆಗಾಲ ಆರಂಭವಾಗಿದೆ, ಮಲೆನಾಡು ಭಾಗವಾದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಈಗ ಹಸಿರು ಸುಂದರ ಹಾಗೂ ತಂಪಾದ ವಾತಾವರಣ ನಿರ್ಮಿಸಿದೆ.
ದಾರಿಯುದ್ದಕ್ಕೂ ಅನೇಕ ಝರಿ,ಜಲಪಾತಗಳು ಹುಟ್ಟಿವೆ. ಇಂತಹ ಸಂದರ್ಭದಲ್ಲಿ ರಜೆ ದಿನಗಳಲ್ಲಿ,ವಾರಾಂತ್ಯದಲ್ಲಿ ಒಂದು ಟ್ರಿಪ್ ಈ ಭಾಗಗಳಿಗೆ ಯೋಚನೆ ಮಾಡಿ ಪ್ರಕೃತಿ ಸೌಂದರ್ಯ ಸವಿಯುವ ಮನಸ್ಸಾಗುವುದು ಸಾಮಾನ್ಯ,ಅಂತೆಯೇ ದೂರ ದೂರದ ಊರುಗಳಿಂದ ಸಿಟಿ ಜಂಜಾಟ, ತಮ್ಮ ಕೆಲಸದ ಒತ್ತಡದಿಂದ ಬಿಡುವು ಪಡೆದು ಪ್ರವಾಸಕ್ಕೆ ಕುಟುಂಬ,ಸ್ನೇಹಿತರೊಂದಿಗೆ
ಬಂದಿರುತ್ತೀರಿ.ಮಲೆನಾಡಿನ ಸ್ಥಳೀಯರಿಗದು ದೈನಂದಿನ ಸಾಮಾನ್ಯ ದಿನ ಆದರೆ ಪ್ರವಾಸಿಗರಿಗೆ ಅದು ಸ್ಮರಣೀಯ ದಿನವಾಗಿರತ್ತೆ ಅದಕ್ಕಾಗಿ ಆ ಹುಮ್ಮಸ್ಸಲ್ಲಿ,ಮೋಜು ಮಸ್ತಿಯ ಆ ನಶೆಯಲ್ಲಿ ಒಂದು ಕ್ಷಣ ಮೈಮರೆತು,ಎಲ್ಲಾ ಎಲ್ಲೆಯನ್ನು ಮೀರಿ ನಡೆದುಕೊಳ್ಳ ತೊಡಗುವಿರಿ,ಸೆಲ್ಫಿ,ರೀಲ್ಸ್ ‌ಗೀಳಿಗೆ ಬಿದ್ದು ಯಾವ ಅಪಾಯವನ್ನು ಲೆಕ್ಕಿಸದೇ ಸಂಭ್ರಮಿಸುವಿರಿ, ಇದೇ ಅಪಾಯಕ್ಕೆ ಕಾರಣವಾಗೋ ಸಂದರ್ಭ. ಮಳೆಗಾಲದಲ್ಲಿ ತಾತ್ಕಾಲಿಕವಾಗಿ ಉದ್ಭವಿಸಿರೋ ಝರಿ,ಜಲಪಾತಗಳು ಸದಾ ಬೀಳೋ ಮಳೆಯಿಂದ ಪಾಚಿ ಕಟ್ಟಿ ಬಹಳ ಅಪಾಯಕಾರಿಯಾಗಿ ಅನಾಹುತಗಳಿಗೆ ಬಾಯ್ತೆರೆದಿರುತ್ತವೆ.ಇಂತಹ ಸನ್ನಿವೇಶಗಳಲ್ಲಿ ಆ ಸ್ಥಳಗಳಲ್ಲಿ ನಿಮ್ಮ ಆಟಗಳು,ಬೇಜಾವಾಬ್ದಾರಿ ನಡವಳಿಕೆಗಳಿಂದ ಪ್ರಕೃತಿ ಸೌಂದರ್ಯಕ್ಕೆ ನೀವೇ ಆಹುತಿಯಾಗುವ ಸನ್ನಿವೇಶಗಳು ಬರಬಹುದು ದಯಮಾಡಿ ಇಂತಹ ಘಟನೆಗಳಿಗೆ ಆಸ್ಪದ ಕೊಡಬೇಡಿ.ಪ್ರವಾಸ ಬಂದಾಗ ಒಬ್ಬ ಜವಾಬ್ದಾರಿಯುತ ಪ್ರವಾಸಿಗನಾಗಿ ಹಾಗೂ ಪ್ರಕೃತಿಯ ಆರಾಧಕನಾಗಿ ವರ್ತಿಸಿ. ನಿಮ್ಮ ಕೆಲ ತಪ್ಪುಗಳು ನಿಮ್ಮ ಕುಟುಂಬ ಒಬ್ಬ ಸದಸ್ಯನನ್ನು ಕಳೆದುಕೊಳ್ಳುವಂತೆ ಮಾಡಬಹುದು ಹಾಗೂ ಮಲೆನಾಡ ಸುಂದರ ಪ್ರದೇಶದ ಹೆಸರಿಗೂ ಕಳಂಕ ತಂದೊಡ್ಡಬಹುದು.ಈ ನಿಟ್ಟಿನಲ್ಲಿ ನಿಮ್ಮ ಜವಾಭ್ದಾರಿಯುತ ಆಟ,ಒಬ್ಬ ಜವಾಬ್ದಾರಿಯುತ ಪ್ರವಾಸಿಗನ ನಡೆ ಇಲ್ಲಿ ತುಂಬಾ ಮಹತ್ವ ಪಡೆಯಲಿದೆ.

* ಜವಾಬ್ದಾರಿಯುತ ಪ್ರವಾಸಿಗರಾಗಿ ವರ್ತಿಸಿ 
ಮೈಮರೆತು ಪ್ರಕೃತಿ ಸೌಂದರ್ಯ ಸವಿಯೋ ಬದಲು ಎಚ್ಚರಿಕೆಯಿಂದ ಪ್ರಕೃತಿಯ ಸೊಬಗನ್ನು ಆನಂದಿಸಿ.ಮಳೆಗಾಲದ ಅವಘಡಗಳ ಬಗ್ಗೆ ಅರಿವಿರಲಿ,ಸೂಕ್ಷ್ಮ,ಅತಿ ಸೂಕ್ಷ್ಮ ಪ್ರದೇಶಗಳ ಬಗ್ಗೆ ಗಮನವಿರಲಿ,ಕಸ ಎಲ್ಲೆಂದರಲ್ಲಿ ಎಸೆಯಬೇಡಿ ಶುಚಿತ್ವಕ್ಕೆ ಆದ್ಯತೆ ನೀಡಿ. ಮಲೆನಾಡು ಕೇವಲ ಪ್ರವಾಸಿಗರ ತಾಣವಷ್ಟೇ ಅಲ್ಲ ಬದಲಾಗಿ ಇಲ್ಲಿ ಅನೇಕ ಜನ ರೈತಾಪಿ ವರ್ಗ ಕೃಷಿಯನ್ನೇ ಅವಲಂಬಿಸಿದೆ ಎಂಬ ಯೋಚನೆ ತಲೆಯಲ್ಲಿರಲಿ. ನೀವು ಒಂದು ದಿನ ಹಾಡಿ,ಆಡಿ, ಕುಣಿದು ನೀವು ತಮ್ಮ ಊರುಗಳಿಗೆ ಹೋಗಿ ಸೇರಿಕೊಳ್ಳುತ್ತೀರಿ ಆದರೆ ನೀವು ಎಸೆದ ತ್ಯಾಜ್ಯ,ಕಸದಿಂದ ಅನಾರೋಗ್ಯ,ರೈತರಿಗೆ ಕೃಷಿ ಕೆಲಸಗಳಿಗೆ ಅಡಚಟೆ ಉಂಟಾಗಿ ತಮ್ಮ ನಿತ್ಯದ ಹಸಿರು ಪರಿಸರದಲ್ಲಿ ಕಸ,ತ್ಯಾಜ್ಯದ ರಾಶಿಯಿಂದ ನೀವು ತೋರಿದ ಬೇಜವಾಬ್ದಾರಿ ವರ್ತನೆಗೆ ಮಲೆನಾಡು ಭಾಗಶಃ ಹಾಳಾಗಿ ಹೋಗುತ್ತಿದೆ. ದಯವಿಟ್ಟು ನಿಮ್ಮ ಪ್ರವಾಸ ಜವಾಬ್ದಾರಿಯುತವಾಗಿರಲಿ,ಸ್ವಚ್ಛತೆಯಿಂದ ಕೂಡಿರಲಿ ಇದು ನಮ್ಮೂರ್ ಎಕ್ಸ್‌ಪ್ರೆಸ್ ಕಳಕಳಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.