Categories
ಚಿಕ್ಕಮಗಳೂರು

ಶೃಂಗೇರಿ ಮಠಕ್ಕೆ ನೂತನ ಆಡಳಿತಾಧಿಕಾರಿ!

ಶೃಂಗೇರಿ ಮಠಕ್ಕೆ ನೂತನ ಆಡಳಿತಾಧಿಕಾರಿ!
– ಪಿ.ಎ. ಮುರುಳಿ ಅವರು ಶೃಂಗೇರಿ ಮಠದ ನೂತನ ಆಡಳಿತಾಧಿಕಾರಿಯಾಗಿ ನೇಮಕ
– ಶೃಂಗೇರಿ ಹಿರಿಯ ಜಗದ್ಗುರು ಭಾರತೀ ತೀರ್ಥ ಶ್ರೀಗಳಿಂದ ಮುರುಳಿ ನೇಮಕ
– ಮಠದ ಅಭಿವೃದ್ದಿ ಕಾರ್ಯಗಳಿಗೆ ಮುಖ್ಯ ಸಲಹೆಗಾರರಾಗಿ ಗೌರಿ ಶಂಕರ್ ಸೇವೆ

NAMMUR EXPRESS NEWS
ಶೃಂಗೇರಿ:ಶೃಂಗೇರಿ ಮಠಕ್ಕೆ ನೂತನ ಆಡಳಿತಾಧಿಕಾರಿಯಾಗಿ ಪಿ.ಎ. ಮುರುಳಿ ಅವರು ನೇಮಕಗೊಂಡಿದ್ದಾರೆ. ಶೃಂಗೇರಿ ಹಿರಿಯ ಜಗದ್ಗುರು ಭಾರತೀ ತೀರ್ಥ ಶ್ರೀಗಳಿಂದ ಮುರುಳಿ ಅವರನ್ನು ನೇಮಕ ಮಾಡಲಾಗಿದೆ. 1986ರಿಂದ 38 ವರ್ಷಗಳಿಂದ ಮಠದ ಆಡಳಿತಾಧಿಕಾರಿಯಾಗಿ ಗೌರಿ ಶಂಕರ್ ಸೇವೆ ಸಲ್ಲಿಸಿದ್ದರು. 1986ರಲ್ಲಿ ಶೃಂಗೇರಿ ಜಗದ್ಗುರು ಆಭಿನವ ವಿದ್ಯಾತೀರ್ಥ ಶ್ರೀಗಳಿಂದ ಗೌರಿ ಶಂಕರ್ ನೇಮಕವಾಗಿತ್ತು. ಮಠದ ಅಭಿವೃದ್ದಿ ಕಾರ್ಯಗಳಿಗೆ ಮುಖ್ಯ ಸಲಹೆಗಾರರಾಗಿ ಗೌರಿ ಶಂಕರ್ ಮುಂದುವರಿಯಲಿದ್ದಾರೆ. ಫೆಬ್ರವರಿ 12ಕ್ಕೆ ಮಠದಲ್ಲಿ ಗೌರಿ ಶಂಕರ್ ಗೆ ಅಭಿನಂದನಾ ಸಮಾರಂಭ ನಡೆಯಲಿದೆ. ಫೆಬ್ರವರಿ 12ಕ್ಕೆ ಕಿರಿಯ ಶ್ರೀ ವಿಧುಶೇಖರ ಶ್ರೀಗಳು ಸನ್ಯಾಸ ಸ್ವೀಕರಿಸಿ 9 ವರ್ಷವಾಗಲಿದೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಶಾರದಾ ಮಠ ದೇಶದಲ್ಲೇ ಪ್ರಸಿದ್ಧ ಮಠವಾಗಿದೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.