Categories
ತೀರ್ಥಹಳ್ಳಿ

ತೀರ್ಥಹಳ್ಳಿಗೆ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು!

ತೀರ್ಥಹಳ್ಳಿಗೆ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು!
– ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಪೂಜೆ: ಸರ್ವರಿಗೂ ಆಶೀರ್ವಾದ
– ಜಿ.ಎಸ್.ಬಿ ಸಮುದಾಯದಿಂದ ಶ್ರೀಗಳಿಗೆ ಗೌರವ

NAMMUR EXPRESS NEWS
ತೀರ್ಥಹಳ್ಳಿ: ಶ್ರೀ ವಿದ್ಯಾಧಿರಾಜ ಸಭಾಗೃಹದಲ್ಲಿ ಮೊಕ್ಕಾಂನಲ್ಲಿರುವ ಶ್ರೀ ಸಂಸ್ಥಾನ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರಿಮದ್ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ಜನವರಿ 19ರಂದು ತೀರ್ಥಹಳ್ಳಿಯ ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಆಹ್ವಾನದ ಮೇರೆಗೆ ತೀರ್ಥಹಳ್ಳಿ ರಥಬೀದಿಯ ತಿರುಮಲ ಶ್ರೀಲಕ್ಷ್ಮೀವೆಂಕಟರಮಣ ದೇವಾಲಯಕ್ಕೆ ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಶ್ರೀಗಳು ತೀರ್ಥಹಳ್ಳಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವರಿಗೆ ಪ್ರಸನ್ನ ಪೂಜೆ ಮಾಡಿದರು. ದೇವಾಲಯದಲ್ಲಿ ಆಯೋಜಿಸಿದ್ದ ಶ್ರೀವೆಂಕಟೇಶ ಮೂಲಮಂತ್ರ ಹವನದ ಪೂರ್ಣಾಹುತಿಯಲ್ಲಿ ಭಾಗವಹಿಸಿ ತೀರ್ಥಹಳ್ಳಿಯ ಸಮಸ್ತರನ್ನೂ ಆಶಿರ್ವದಿಸಿದರು.

ಶ್ರೀಗಳವರ ಹಿರಿಯ ಗುರುಗಳಾದ ವೃಂದಾವನಸ್ಥ ಶ್ರೀಮದ್ ವಿದ್ಯಾಧಿರಾಜತೀರ್ಥ ಶ್ರೀಪಾದರು ದೇವಲಾಯಕ್ಕೆ ಶಿಲನ್ಯಾಸ ಮಾಡಿದ್ದರು. ಶ್ರೀಗಳು ತೀರ್ಥಹಳ್ಳಿಯಲ್ಲಿಯೇ ಶ್ರೀರಾಮನ ಪ್ರತಿಷ್ಠಾಪನೆಯ ದಿನದಂದು ಪೂಜೆ ನೆರವೇರಿಸಿದರು. ಬಳಿಕ ಜ.24ರವರೆಗೆ ಭಕ್ತರಿಗೆ ಆಶೀರ್ವಾದ ಮಾಡಿದರು. ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ರಮೇಶ್ ನಾಯಕ್, ಜಿ.ಎಸ್.ಬಿ ಸಮಾಜದ ಅಧ್ಯಕ್ಷರಾದ ಸಂದೇಶ್ ಜವಳಿ, ತಾಲೂಕು ಬಿಜೆಪಿ ಅಧ್ಯಕ್ಷರಾದ ಬಾಳೇಬೈಲು ರಾಘವೇಂದ್ರ ಸೇರಿದಂತೆ ಹಲವು ಪ್ರಮುಖರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದು ಗುರುಗಳನ್ನು ಸ್ವಾಗತಿಸಿ ಆಶೀರ್ವಾದ ಪಡೆದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.