ನವಚೇತನ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್
* ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಸ್ವಾಮಿಗಳ ಜನ್ಮದಿನ ಪ್ರಯುಕ್ತ ಕಾರ್ಯಕ್ರಮ
* ಕೊಟ್ಟ ಜವಾಬ್ದಾರಿ ಹೊತ್ತು ಎಲ್ಲಾ ಶಾಲೆಗಳಿಗೆ ನೋಟ್ ಬುಕ್ ವಿತರಿಸುತ್ತಿರುವ ಶೃಂಗೇರಿ ಸಹಾಯ ಹಸ್ತ ತಂಡ
NAMMMUR EXPRESS NEWS
ಶೃಂಗೇರಿ: ಜು.29 ರಂದು ಶೃಂಗೇರಿ ಶ್ರೀಮಠದ ಜಗದ್ಗುರುಗಳಾದ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಜನ್ಮದಿನ ಇರುವುದರಿಂದ ನವಚೇತನ ಚಾರಿಟೆಬಲ್ ಟ್ರಸ್ಟ್,ರಾಮನಗರ ವತಿಯಿಂದ ಶೃಂಗೇರಿ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ನೋಟ್‌ಬುಕ್ ವಿತರಿಸುತ್ತಿದೆ. ಅಂತೆಯೇ ಇಂದು ತಾಲೂಕಿನ ಸರ್ಕಾರಿ ಫ್ರೌಢಶಾಲೆ (ಗುಡ್ಡದ ಹೈಸ್ಕೂಲ್)ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ 285 ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿದರು. ಇದೇ ಸಂದರ್ಭದಲ್ಲಿ ಶೃಂಗೇರಿ ಶ್ರೀಶಾರದಾ ಪೀಠದ ವತಿಯಿಂದ ನೀಡಿದ ಊಟದ ತಟ್ಟೆಗಳನ್ನು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳ ಆಪ್ತ ಸಹಾಯಕರಾದ ವೇ.ಬ್ರ.ಶ್ರೀ ಕೃಷ್ಣಮೂರ್ತಿಯವರು ಉಪಸ್ಥಿತರಿದ್ದು ನೋಟ್ ಬುಕ್ ಹಾಗೂ ಊಟದ ತಟ್ಟೆಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ನೋಟ್ ಬುಕ್ ದಾನಿಗಳಾದ ನವಚೇತನ ಚಾರಿಟೆಬಲ್ ಟ್ರಸ್ಟ್‌ನ ಮುಖ್ಯಸ್ಥರಾದ ಮಂಜುನಾಥ್ ರವರು ಉಪಸ್ಥಿತರಿದ್ದರು ಹಾಗೂ ಶೃಂಗೇರಿ ಸಹಾಯ ಹಸ್ತ ತಂಡದ ಸದಸ್ಯರುಗಳಾದ ಪ್ರಶಾಂತ್,ಸಚಿನ್,ರೇವಂತ್ ನಾಯಕ್,ಉದಯ್ ಮೆಣಸೆ,ಅರುಣ್,ಸಂಜಯ್,ಮಹೇಶ್,ಸುಜಾತ,ನಿತ್ಯಾನಂದ ಮತ್ತು ಶಾಲಾ ಸಮಿತಿಯ ಅಧ್ಯಕ್ಷರಾದ ಆನಂದಸ್ವಾಮಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ.ಬಿ ಶಿವಶಂಕರ್,ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕ ವರ್ಗದವರು ಹಾಜರಿದ್ದರು.
* ಫ್ರೌಡಶಾಲೆಗೆ ಊಟದ ತಟ್ಟೆಗಾಗಿ ಶೃಂಗೇರಿ ಸಹಾಯ ಹಸ್ತ ತಂಡದಿಂದ ಮನವಿ
ಕಳೆದ ಬಾರಿ ನೋಟ್ ಬುಕ್ ವಿತರಣೆಯ ಸಂದರ್ಭದಲ್ಲಿ ಶಾಲೆಯಲ್ಲಿ ಊಟದ ತಟ್ಟೆಯ ಅವಶ್ಯಕತೆಯ ಬಗ್ಗೆ ಗಮನಕ್ಕೆ ತರಲಾಗಿತ್ತು ಅದರಂತೆಯೇ ತಂಡದ ಸದಸ್ಯರು ಜಗದ್ಗುರಗಳ ದರ್ಶನ ಮಾಡಿ ಊಟದ ತಟ್ಟೆ ನೀಡುವಂತೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿದ ಶ್ರೀಮಠವು ಶಾಲೆಗೆ ಊಟದ ತಟ್ಟೆಯನ್ನು ವ್ಯವಸ್ಥೆ ಮಾಡಿತು.ಶೃಂಗೇರಿ ಸಹಾಯ ಹಸ್ತ ತಂಡವು ಶಾಲೆಗೆ ಅಗತ್ಯವಿದ್ದ ಊಟದ ತಟ್ಟೆ ಪೂರೈಸಲು ಸಹಕರಿಸಿದ ತಂಡಕ್ಕೆ ಶಾಲೆಯ ಪರವಾಗಿ ಧನ್ಯವಾದ ತಿಳಿಸಿದರು. ತಂಡದ ಮನವಿಗೆ ತಕ್ಷಣ ಸ್ಪಂದಿಸಿ ತಟ್ಟೆಗಳನ್ನು ನೀಡಿದ ಶ್ರೀಶಾರದಾ ಪೀಠಕ್ಕೆ ತಂಡದ ಪರವಾಗಿ ಧನ್ಯವಾದ ತಿಳಿಸಲಾಯಿತು.
* ನೋಟ್ ಬುಕ್ ವಿತರಣೆ ಜವಾಬ್ದಾರಿ ಶೃಂಗೇರಿ ಸಹಾಯ ಹಸ್ತ ತಂಡಕ್ಕೆ
ತಾಲೂಕಿನಲ್ಲಿ ಕಳೆದ ಒಂದು ವರ್ಷದಿಂದ ಕಡುಬಡವರ ಆರೋಗ್ಯ ಸಮಸ್ಯೆಗೆ ಸಹಾಯ ಮಾಡುತ್ತಿರುವ ಶೃಂಗೇರಿ ಸಹಾಯಹಸ್ತ ತಂಡದ ಕಾರ್ಯವನ್ನು ಗಮನಿಸಿರುವ ನವಚೇತನ ಚಾರಿಟೆಬಲ್ ಟ್ರಸ್ಟ್‌ನ ಮುಖ್ಯಸ್ಥ ಮಂಜುನಾಥ್ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ಈ ಬಾರಿ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ನೋಟ್ ಬುಕ್ ವಿತರಿಸುವ ಜವಾಬ್ದಾರಿ ನೀಡಿದ್ದಾರೆ. ಅದರಂತೆಯೇ ಕಳೆದ ನಾಲ್ಕು ದಿನಗಳಿಂದ ಓಡಾಡುತ್ತಿರುವ ತಂಡ ಒಂದು ನಿಗದಿತ ಸಮಯದಲ್ಲಿ ಬಿಡುವು ಮಾಡಿಕೊಂಡು ಆ ಸಮಯದಲ್ಲಿ ಲಭ್ಯವಿರುವ ತಂಡದ ಉಳಿದ ಸದಸ್ಯರನ್ನು ಸೇರಿಸಿಕೊಂಡು ತಾಲೂಕಿನ ಕುಂಚೇಬೈಲ್,ಗೋಚುವಳ್ಳಿ,ಕೂತುಗೋಡು,ತೆಕ್ಕೂರು, ವೈಕುಂಠಪುರ,ವೈಕುಂಪುರ ಫ್ರೌಢಶಾಲೆ, ವಿದ್ಯಾನಗರ,ಕಲ್ಕಟ್ಟೆ,ಶಿಡ್ಲೆ,ಮಸಿಗೆ,ಸರ್ಕಾರಿ ಪಿಯು ಕಾಲೇಜುಗಳಲ್ಲಿ ನೋಟ್ ಬುಕ್ ವಿತರಿಸಿದೆ. ಉಳಿದ ಎಲ್ಲಾ ಶಾಲೆಗಳಿಗೂ ವಿತರಿಸುವುದಾಗಿ ತಿಳಿಸಿದ.
ನೋಟ್ ಬುಕ್ ಜೊತೆಗೆ ತಂಡ ಪೆನ್ನುಗಳನ್ನು ವಿತರಿಸುತ್ತಿದೆ.
ತಂಡದ ಈ ಎಲ್ಲಾ ಕೆಲಸಗಳಿಗೆ ವೇ.ಬ್ರ.ಶ್ರೀ ಕೃಷ್ಣಮೂರ್ತಿಯವರು ಮೆಚ್ಚುಗೆ ವ್ಯಕ್ತಪಡಿಸಿ ಈ ಕಾರ್ಯವನ್ನು ಮುಂದುವರೆಸುವಂತೆ ಆಶೀರ್ವದಿಸಿದರು.
