ಆನ್‌ಲೈನ್ ಪರಿಚಯ ಶಿಕ್ಷಕಿಗೆ 3 ಲಕ್ಷ ವಂಚನೆ
* ಪ್ರೊಫೈಲ್ ನನಗೆ ಇಷ್ಟವಾಯಿತೆಂದು ಮೊಬೈಲ್ ಮೂಲಕ ಸ್ನೇಹ
* ಮದುವೆಯಾಗುವುದಾಗಿ ನಂಬಿಸಿ ಶಿಕ್ಷಕಿಗೆ ವಂಚನೆ
NAMMMUR EXPRESS NEWS
ಶೃಂಗೇರಿ: ಆನ್‌ಲೈನ್‌ನಲ್ಲಿ ಪರಿಚಯವಾದ ವ್ಯಕ್ತಿಯಿಂದ ಶೃಂಗೇರಿ ತಾಲೂಕಿನ ಶಿಕ್ಷಕಿಯೊಬ್ಬರು 3,07,500 ರೂ. ವಂಚನೆಗೆ ಒಳಗಾಗಿದ್ದು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಕ್ಷಕಿ ಒಂದು ವರ್ಷದ ಹಿಂದೆ ವಿವಾಹದ ವೆಬ್‌ಸೈಟ್‌ವೊಂದರಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿದ್ದಾರೆ. ಅಪರಿಚಿತ ವ್ಯಕ್ತಿ ಅನೆಕ್ಸ್ ಮೈಕಲ್ ರಾಜಿತ್ ವೇದಿ ಎಂದು ಪರಿಚಯ ಮಾಡಿ ಕೊಂಡು, ನಿಮ್ಮ ಪ್ರೊಫೈಲ್ ನನಗೆ ಇಷ್ಟವಾಗಿದೆ ಎಂದು ದೂರವಾಣಿ ಮೂಲಕ ಸ್ನೇಹ ಬೆಳೆಸಿದ್ದಾನೆ. ತಾನು ನೆದರ್‌ಲ್ಯಾಂಡ್‌ನಲ್ಲಿ ವಾಸವಿದ್ದು ಮದುವೆಯಾಗುವುದಾಗಿ, ಬೆಂಗಳೂರಿನಲ್ಲಿ ನೆಲೆಸುವುದಾಗಿ ನಂಬಿಸಿದ್ದಾನೆ. ಇದಾದ ನಂತರ ಶಿಕ್ಷಕಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಗಿಫ್ಟ್ ಕಳುಹಿಸಿದ್ದೇನೆ ಎಂದು ಹೇಳಿದ್ದಾನೆ. ಬಳಿಕ ಗಿಫ್ಟ್ ಜತೆ ಹಣ ದೆಹಲಿಯಲ್ಲಿ ಸ್ಥಗಿತಗೊಂಡಿದೆ. ನೀವು ಬಿಡಿಸಿಕೊಳ್ಳದಿದ್ದರೆ ಸರ್ಕಾರಕ್ಕೆ ಹೋಗುತ್ತೆ, ಇದರಿಂದ ಸಮಸ್ಯೆಯಾಗುತ್ತದೆ ಎಂದು ಹಂತ ಹಂತವಾಗಿ ಒಟ್ಟು 3,07,500 ರೂ. ಲಪಟಾಯಿಸಿದ್ದಾನೆ. ಈತನನ್ನು ಪತ್ತೆ ಮಾಡಿಕೊಡುವಂತೆ ಶಿಕ್ಷಕಿ ಶೃಂಗೇರಿ ಠಾಣೆಗೆ ದೂರು ಸಲ್ಲಿಸಿದ್ದಾರೆ.
