Categories
ತೀರ್ಥಹಳ್ಳಿ

ಮಂಜುನಾಥ ಗೌಡರಿಗೆ ಈ ವಾರ ರಿಲೀಫ್?!

ಮಂಜುನಾಥ ಗೌಡರಿಗೆ ಈ ವಾರ ರಿಲೀಫ್?!
– ಆರ್‌ಎಂಎಂ ಜಾಮೀನು ಅರ್ಜಿ ವಿಚಾರಣೆ ನಡೆಯಲಿಲ್ಲ
– ಅಕ್ಕ ಪಕ್ಕ ಇದ್ದವರು ಆರ್. ಎಂ ಜತೆ ನಿಲ್ಲಲಿಲ್ಲ?!
– ನಾಯಕರು ಎಲ್ಲರೂ ಎಲ್ಲಿ ಹೋದರು: ಚರ್ಚೆ

NAMMUR EXPRESS NEWS
ತೀರ್ಥಹಳ್ಳಿ: ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಬಂಧನದಲ್ಲಿರುವ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆ‌ರ್.ಎಂ.ಮಂಜುನಾಥಗೌಡರನ್ನು ವಿಚಾರಣೆ ನಡೆಸಲು ಇ.ಡಿ. ನ್ಯಾಯಾಲಯದ ಮೂಲಕ ಆರ್‌ಎಂಎಂರನ್ನು 14 ದಿನಗಳ ಕಸ್ಟಡಿಗೆ ಪಡೆದುಕೊಂಡಿತ್ತು. ಈ ಅವಧಿ ಏಪ್ರಿಲ್ 21ಕ್ಕೆ ಅಂತ್ಯವಾಗಿತ್ತು. ಇಡಿ ಮತ್ತೆ ಕಸ್ಟಡಿ ಅವಧಿಯನ್ನು 14 ದಿನ ವಿಸ್ತರಿಸುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ ಇಡಿ ಅಧಿಕಾರಿಗಳು ಕೋರ್ಟ್ ಹಾಜರಾಗದೆ ಇರುವುದು ಅನೇಕ ಚರ್ಚೆಗೆ ಕಾರಣವಾಗಿದೆ.
ಈ ಮಧ್ಯೆ ಮಂಜುನಾಥಗೌಡರ ಪರ ವಕೀಲರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಮಂಜುನಾಥಗೌಡರ ಬಂಧನದ ಸಂದರ್ಭ ಇ.ಡಿ. ಸರಿಯಾದ ಕ್ರಮ ಅನುಸರಿಸಿಲ್ಲ ಆದ್ದರಿಂದ ಕಸ್ಟಡಿಯಿಂದ ಬಿಡುಗಡೆಗೆ ಆದೇಶಿಸುವಂತೆ ಕೋರಿತ್ತು. ಹೈಕೋರ್ಟ್‌ ಆರ್‌ಎಂಎಂ ಪರ ವಕೀಲರ ಅರ್ಜಿಯನ್ನು ತಿರಸ್ಕರಿಸಿತ್ತು . ಏಪ್ರಿಲ್ 25ರ ಶುಕ್ರವಾರ ನ್ಯಾಯಾಲಯದಲ್ಲಿ ಗೌಡರ ಜಾಮೀನು ಅರ್ಜಿ ವಿಚಾರಣೆಯಾಗಬೇಕಿತ್ತು. ಆದರೆ ಇ.ಡಿ.ಪರ ವಾದಿಸಬೇಕಿದ್ದ ಸರ್ಕಾರಿ ವಕೀಲರು ರಜೆ ಹಾಕಿದ್ದರಿಂದ ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ. ಆರ್‌ಎಂಎಂ ಸೋಮವಾರದವರೆಗೂ ಕಸ್ಟಡಿಯಲ್ಲೇ ಇರಬೇಕಾಗಿದೆ. ಇನ್ನು ಈ ವಾರ ಅವರಿಗೆ ರಿಲೀಫ್ ಸಿಗಲಿದೆ ಎನ್ನಲಾಗಿದೆ.

ಅಕ್ಕ ಪಕ್ಕ ಇದ್ದವರು ಆರ್. ಎಂ ಜತೆ ನಿಲ್ಲಲಿಲ್ಲ?

ಮಂಜುನಾಥ ಗೌಡರ ಕಷ್ಟದ ಸಮಯದಲ್ಲಿ ಅವರ ಆಪ್ತರು, ಅವರಿಂದ ಲಾಭ ಪಡೆದವರು ಈಗ ಅವರ ಜತೆ ಇಲ್ಲ. ಕನಿಷ್ಠ ಅವರ ಪರ ಒಂದು ಪತ್ರಿಕಾ ಹೇಳಿಕೆ ಕೂಡ ನೀಡದೆ ಇರುವುದು ಇದೀಗ ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಇನ್ನು ತೀರ್ಥಹಳ್ಳಿಯಲ್ಲಿ ಅವರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದ ಬ್ಯಾನರ್ ಅಡಿ ಕ್ರಿಕೆಟ್ ಕೂಡ ನಡೆಯುತ್ತಿದೆ. ಅಲ್ಲಿ ಕೂಡ ಗೌಡರ ಬಗ್ಗೆ ಎಲ್ಲೂ ಮಾತು ಕೇಳಿ ಬರಲಿಲ್ಲ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.