ಬೆಲೆ ಏರಿಕೆ: ಚಕಾಫಿ ನಾಡಲ್ಲಿ ಬಿಜೆಪಿ ಹೋರಾಟ!
– ಎನ್.ಆರ್.ಪುರದಲ್ಲಿ ಆಟೋಗೆ ಹಗ್ಗ ಕಟ್ಟಿ ಪ್ರತಿಭಟನೆ
– ಕೊಪ್ಪದಲ್ಲಿ ಸರ್ಕಾರದ ವಿರುದ್ಧ ಛೀಮಾರಿ ಹಾಕಿದ ಮಹಿಳೆಯರು
– ಚಿಕ್ಕಮಗಳೂರಲ್ಲಿ ಪ್ರತಿಭಟನೆ: ಎಲ್ಲೆಲ್ಲಿ ಏನಾಯ್ತು…?!
NAMMUR EXPRESS NEWS
ಚಿಕ್ಕಮಗಳೂರು: ಪೆಟ್ರೋಲ್-ಡಿಸೇಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಚಿಕ್ಕಮಗಳೂರು ನಗರದ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್ ತಲುಪುವ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಎಂ ಆರ್ ದೇವರಾಜ್ ಶೆಟ್ಟಿ, ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಚ್ ಸಿ ಕಲ್ಮರುಡಪ್ಪ, ನಗರಾಧ್ಯಕ್ಷರಾದ ಕೆ. ಎಸ್.ಪುಷ್ಪರಾಜ್,ಪ್ರಧಾನ ಕಾರ್ಯದರ್ಶಿಗಳಾದ ಕೌಶಿಕ್, ಬಸವರಾಜ್ ,ಜಿಲ್ಲಾ ಮಹಿಳಾಮೋರ್ಚಾ ಅಧ್ಯಕ್ಷರಾದ ಜಸಂತ ಅನಿಲ್ ಕುಮಾರ್, ನಗರ ಅಧ್ಯಕ್ಷರಾದ ಪವಿತ್ರ, ಚಿತ್ರದುರ್ಗದ ಪ್ರಬಾರಿ ಶ್ರೀ ಪ್ರೇಮ್ ಕುಮಾರ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಕೆ. ಪಿ.ವೆಂಕಟೇಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಸಂತೋಷ್ ಕೋಟಿಯನ್, ಹಿರಿಯ ಮುಖಂಡರಾದ ಕೋಟೆ ರಂಗನಾಥ್, ನಗರ ಯುವ ಮೋರ್ಚಾ ಅಧ್ಯಕ್ಷರಾದ ಕೋಟೆ ಜೀವನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಚಿನ್, ರಾಜ್ಯ ಓಬಿಸಿ ಮೋರ್ಚಾದ ಕಾರ್ಯದರ್ಶಿಗಳಾದ ಬಿ ರಾಜಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಈಶ್ವರಳ್ಳಿ ಮಹೇಶ್, ನಗರಸಭಾ ಸದಸ್ಯರಾದ ಮಧುರಾಜ್ ಅರಸ್, ರಾಜು, ವಿಫಲ್ ಕುಮಾರ್ ಜೈನ್, ಮಣಿ,ರವಿ, ಕೇಶವ್ ಹಿರೇಮಗಳೂರು,ನಾಯ್ಕ್ ಮತ್ತು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಕಲ್ಮುರುಡಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ದೇವರಾಜ್ ಶೆಟ್ಟಿ ಸೇರಿದಂತೆ ಎಲ್ಲಾ ಮೋರ್ಚಾಗಳ ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು.
ಕೊಪ್ಪದಲ್ಲಿ ಬಿಜೆಪಿ ಪ್ರತಿಭಟನೆ: ಹೊಸೂರು ದಿನೇಶ್ ಆಕ್ರೋಶ
ಕೊಪ್ಪ: ಪೆಟ್ರೋಲ್ ಡೀಸೆಲ್ ಹಾಗೂ ಅಗತ್ಯ ದಿನೋಪಯೋಗಿ ವಸ್ತುಗಳ ದರ ಏರಿಕೆಯನ್ನು ವಿರೋಧಿಸಿ ಬಿಜೆಪಿ ಕೊಪ್ಪ ಮಂಡಲದ ವತಿಯಿಂದ ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ತಾಲೂಕು ಅಧ್ಯಕ್ಷರಾದ ಹೊಸೂರ್ ದಿನೇಶ್ ಮಾತನಾಡಿ, ತನ್ನ ಬಿಟ್ಟಿ ಗ್ಯಾರಂಟಿಗಳಿಗಾಗಿ ಸರ್ಕಾರ ಜನರಿಂದಲೇ ದುಪ್ಪಟ್ಟು ಹಣವನ್ನು ದೋಚಿ ಕೊಡುವ ನಾಟಕವಾಡ್ತಾ ಇದೆ. ಈ ನಾಟಕ ರಾಜ್ಯದ ಜನತೆಗೆ ಅರ್ಥವಾಗಿದ್ದು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ. ತಕ್ಷಣ ಅಗತ್ಯ ದಿನಬಳಕೆ ವಸ್ತುಗಳ ಬೆಲೆಯನ್ನು ಇಳಿಸಬೇಕೆಂದು ಆಗ್ರಹಿಸಿದರು.
ಜಗದೀಶ್ ನುಗ್ಗಿ ಮಾತನಾಡಿ, ನುಡಿದಂತೆ ನಡೆಯದೇ,ಸುಳ್ಳು ಆಶ್ವಾಸನೆಗಳ ಮೂಲಕ ಅಧಿಕಾರಕ್ಕೆ ಬಂದು ಜನರಿಂದ ಹಣ ದೋಚಿ ರಾಜ್ಯದ ಜನತೆಗೆ ದ್ರೋಹ ಬಗೆದ ರಾಜ್ಯ ಕಾಂಗ್ರೇಸ್ ಸರ್ಕಾರ ಈಗ ಎಲ್ಲಾ ವರ್ಗದ ಜನರ ಮೇಲೆ ಬರೆ ಎಳೆಯುತ್ತಿದೆ ಕೂಡಲೇ ಬೆಲೆ ಇಳಿಕೆ ಮಾಡ ಬೇಕು ಇಲ್ಲವಾದಲ್ಲಿ ಜನರ ಪರವಾಗಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷರಾದ ಹೊಸೂರ್ ದಿನೇಶ್,ನುಗ್ಗಿ ಗ್ರಾ ಪಂ ಮಾಜಿ ಅಧ್ಯಕ್ಷರು ಜಿಲ್ಲಾ ಆಟೋ ಚಾಲಕ ಹಾಗೂ ಮಾಲಕರ ಸಂಘದ ಗೌರವಾಧ್ಯಕ್ಷರಾದ ಜಗದೀಶ್ ನುಗ್ಗಿ, ಜಿಲ್ಲಾ ಮಹಿಳಾ ಪ್ರಮುಖರಾದ ಅನಸೂಯ, ಶೃತಿ ರೋಹಿತ್ ಹಾಗು ಪ್ರಮಃಖ ನಾಯಕರುಗಳು,ಚುನಾಯಿತ ಪ್ರತಿನಿಧಿಗಳು,ಕಾರ್ಯಕರ್ತರು ಉಪಸ್ಥಿತರಿದ್ದರು.
ಎನ್.ಆರ್.ಪುರದಲ್ಲಿ ಆಟೋಗೆ ಹಗ್ಗ ಕಟ್ಟಿ ಪ್ರತಿಭಟನೆ!
ನರಸಿಂಹರಾಜಪುರ: ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರ ಏಕಾಏಕಿ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರಿಗೆ 3 ರೂಪಾಯಿ ಹಾಗೂ ಡಿಸೇಲ್ ಬೆಲೆಯನ್ನು ಪ್ರತಿ ಲೀಟರಿಗೆ 3.50 ರೂಪಾಯಿಯಷ್ಟು ಹೆಚ್ಚಿಸಿದೆ. ಇದನ್ನು ವಿರೋಧಿಸಿ ಮಾಜಿ ಸಚಿವರಾದ ಜೀವರಾಜ್ ನೇತೃತ್ವದಲ್ಲಿ ಬಿಜೆಪಿ ನರಸಿಂಹರಾಜಪುರ ಮಂಡಲ ಮತ್ತು ತಾಲೂಕು ಜೆಡಿಎಸ್ ಘಟಕ ವತಿಯಿಂದ ಆಟೋಗೆ ಹಗ್ಗ ಕಟ್ಟಿ ಎಳೆಯುವುದರ ಮೂಲಕ ಅಂಬೇಡ್ಕರ್ ವೃತ್ತದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಕ್ಷೇತ್ರದ ಶಾಸಕರ ವಿರುದ್ಧ ಪ್ರತಿಭಟನೆ ಮಾಡಲಾಯಿತು.
ಜೀವರಾಜ್ ಮಾತನಾಡಿ,ಸುಳ್ಳು ಗ್ಯಾರಂಟಿಗಳ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೇಸ್ ಇಂದು ರಾಜ್ಯದ ಜನತೆಗೆ ಮೂರು ನಾಮ ಹಾಕುವ ಕೆಲಸ ಮಾಡುತ್ತಿದ್ದು ಜನರು ಸರ್ಕಾರದ ಮೇಲಿಟ್ಟಿದ್ದ ನಂಬಿಕೆಗೆ ದ್ರೋಹ ಮಾಡಿದೆ,ಸರ್ಕಾರ ಈ ಕೂಡಲೇ ಬೆಲೆ ಏರಿಕೆ ಮಾಡಿರುವುದನ್ನು ಕಡಿತಗೊಳಿಸಬೇಕು ಎಂದು ಅಗ್ರಹಿಸಿದರು.
