ಪುಷ್ಪಗಿರಿ ಗಣೇಶೋತ್ಸವ ಸಂಭ್ರಮ
* ಸಡಗರ ಸಂಭ್ರಮದಿಂದ ಗೌರಿಗಣೇಶೋತ್ಸವ ಆಚರಣೆ
* ವಿವಿಧ ಖಾದ್ಯದೊಂದಿಗೆ ಶಾಸ್ತ್ರೋತ್ಕವಾಗಿ ಆಚರಣೆ, ಹಲವರು ಭಾಗಿ
NAMMMUR EXPRESS NEWS
ಮೂಡಿಗೆರೆ: ತಾಲೂಕಿನ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ )ವತಿಯಿಂದ “ಪುಷ್ಪಗಿರಿ ಸದನ”ದಲ್ಲಿ ಸಂಭ್ರಮ ಸಡಗರದಿಂದ ಗೌರಿ ಗಣೇಶೋತ್ಸವವನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಉಮಾ ಮೋಹನ್ ಹಾಗೂ ಬಾಂಧವ್ಯ, ಡಿಂಪಲ್ ಮತ್ತು ಮುತ್ತೈದೆಯರು ಮಂಗಳವಾರ ಗೌರಿ ದೇವಿಯನ್ನು ಸ್ಥಳೀಯ ಬಾವಿಯ ಬಳಿ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಬೆಳಗಿನ ಜಾವ ಮನೆಗೆ ಬರಮಾಡಿಕೊಂಡು, ಅಲಂಕಾರಗೊಂಡ ಮಂಟಪದಲ್ಲಿ ಕೂರಿಸಲಾಯಿತು.
ಕಿಚಡಿ, ಕೆಸವಿನ ಸೊಪ್ಪು ಸಾಂಬಾರ್,ಕಾಯಿ ಹೋಳಿಗೆ ಮತ್ತು ಖರ್ಜೂರ ಹೋಳಿಗೆ ನೈವೇದ್ಯ ಮಾಡಿ ಪೂಜೆ ಸಲ್ಲಿಸಲಾಯಿತು.
ನಂತರ ಬುಧವಾರ ಬೆಳಿಗ್ಗೆಯೇ ಬಾಂಧವ್ಯ, ಡಿಂಪಲ್, ಸಿ.ಸಿ.ರಾಜಣ್ಣ, ಡಾ.ಮೋಹನ್ ರಾಜಣ್ಣ,ಗಂಗಾಧರ್
ಹಾಗೂ ಮುಂತಾದವರು ಸೇರಿ ಗಣೇಶ ಮೂರ್ತಿಯನ್ನು ಭಕ್ತಿ ಹಾಗೂ ವೈಭವದಿಂದ ಸ್ವಾಗತಿಸಿ ಗಣೇಶ ಮೂರ್ತಿಯನ್ನು ಭವ್ಯ ಮಂಟಪದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ನಂತರ ಹೂವು,ಹಣ್ಣು ಹಂಪಲು,ಗರಿಕೆಯಿಂದ ಪೂಜೆ ಸಲ್ಲಿಸಿ ಮೋದಕ, ಚಕ್ಕುಲಿ, ಗರ್ಜಿಕಾಯಿ,ಕೊಡುಬಾಳೆ,ಕಾಯಿ ಕಡುಬು,ಹೂರಣ ಕಡುಬು ಇಟ್ಟು ನೈವೇದ್ಯ ಮಾಡಿ ಶ್ರದ್ದಾಭಕ್ತಿಯಿಂದ ಪೂಜೆ ಸಲ್ಲಿಸಿ ಮೂರು ದಿನಗಳ ನಂತರ ಸ್ಥಳೀಯ ಹೇಮಾವತಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.ವಿಸರ್ಜನಾ ಮೆರವಣಿಗೆಯಲ್ಲಿ ಸಂಸ್ಥೆಯ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
