ಸೆ.14ರಂದು ಬಸವಾನಿ ಸೊಸೈಟಿಯ ನೂತನ ಕಟ್ಟಡದ ಉದ್ಘಾಟನೆ
– ಸುಮಾರು 2. ಕೋಟಿ 46 ಲಕ್ಷ ರೂಪಾಯಿಯಲ್ಲಿ ಸುಸರ್ಜಿತ ಕಟ್ಟಡ ನಿರ್ಮಾಣ
– ಸರ್ವ ಸದಸ್ಯರಿಗೆ ಸಭೆಗೆ ಆಹ್ವಾನ: ಜಿಲ್ಲೆಯಲ್ಲಿ ನಂ. 1 ಸೊಸೈಟಿ
– ಸಹಕಾರ ನಾಯಕ ವಿಜಯದೇವ್ ನೇತೃತ್ವದಲ್ಲಿ ಕಾರ್ಯಕ್ರಮ
NAMMUR EXPRESS NEWS
ತೀರ್ಥಹಳ್ಳಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಬಸವಾನಿ
ನೂತನ ಕಟ್ಟಡ ಸೆ. 14ರಂದು ಉದ್ಘಾಟನೆಗೊಳ್ಳಲಿದೆ.
ಸಹಕಾರ ನಾಯಕ ಬಸವಾನಿ ವಿಜಯದೇವ್ ಮಾತನಾಡಿ, ಸೆ.14ರಂದು ಬಸವಾನಿ ಸೊಸೈಟಿಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಬೆಳಿಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದರು.
ನೂತನ ಸಭಾಭವನ ಸುಮಾರು 2. ಕೋಟಿ 46 ಲಕ್ಷ ರೂಪಾಯಿಯಲ್ಲಿ ಸುಸರ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಈ ಕಾರ್ಯಕ್ರಮದ ಶಿಲಾನ್ಯಾಸ ಅನಾವರಣವನ್ನು ಸಚಿವ ಮಧು ಬಂಗಾರಪ್ಪರವರು, ವ್ಯಾಪರ ಮಳಿಗೆ ಉದ್ಘಾಟನೆಯನ್ನು ಶಾಸಕ ಟಿ. ಡಿ. ರಾಜೇಗೌಡ, ಸಂಘದ ಕಛೇರಿ ಉದ್ಘಾಟನೆಯನ್ನು ಡಿಸಿಸಿ ಬ್ಯಾಂಕ್ ಡಾ.ಆರ್. ಎಂ. ಮಂಜುನಾಥ ಗೌಡ , ಸಭಾಭವನ ಉದ್ಘಾಟನೆಯನ್ನು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ , ಊಟದ ಹಾಲ್ ಉದ್ಘಾಟನೆಯನ್ನು ಮಾಜಿ ಸಚಿವ, ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷರಾದ ಬಸವಾನಿ ವಿಜಯದೇವ್ ವಹಿಸಲಿದ್ದಾರೆ.ಈ ಕಾರ್ಯಕ್ರಮದ ಉಪಸ್ಥಿತಿಯಲ್ಲಿ ರಾಜಣ್ಣರೆಡ್ಡಿ, ವ್ಯವಸ್ಥಾಪಕ ನಿರ್ದೇಶಕರು, ಡಿಸಿಸಿಬಿ ಶಿವಮೊಗ್ಗ, ಶರತ್ ಪಿ ಗೌಡ, ಡಿ.ಡಿ.ಎಂ.ನಬಾರ್ಡ್, ಶಿವಮೊಗ್ಗ, ನಾಗಭೂಷಣ್ ಕಲ್ಮನೆ, ಸಹಕಾರ ಸಂಘಗಳ ಉಪನಿಬಂಧಕರು, ಶಿವಮೊಗ್ಗ, ಟಿ. ವಿ. ಶ್ರೀನಿವಾಸ್, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಶಿವಮೊಗ್ಗ, ವೆಂಕಟಾಚಲಪತಿ, ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ, ತೀರ್ಥಹಳ್ಳಿ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಬಸವಾನಿ ಇವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತದಲ್ಲಿ ಇರುತ್ತಾರೆ.
– ಅತಿ ಹೆಚ್ಚು ಪ್ರದೇಶದ ಸ್ವಂತ ಜಾಗ ಹೊಂದಿದ ಜಿಲ್ಲೆಯ ನಂಬರ್ 1 ಸೊಸೈಟಿ
ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಸುಮಾರು 1 1/2 ಎಕರೆಯಷ್ಟು ಸ್ವಂತ ಜಾಗವನ್ನು ಹೊಂದಿರುವ ಸೊಸೈಟಿಗಳ ಪೈಕಿ ಬಸವಾನಿ ಸೊಸೈಟಿ ಮೊದಲನೆಯದು. ಕಳೆದ ವರ್ಷವಷ್ಟೇ ನಬಾರ್ಡ್ ಅನುದಾನ ಮತ್ತು ತನ್ನ ಸ್ವಂತ ಬಂಡವಾಳದಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಿಸಿಕೊಂಡಿರುವ ಹಿರಿಮೆ ಈ ಸೊಸೈಟಿಯದು. ಪ್ರತಿ ವರ್ಷವೂ ನಡೆಯುವ ಸರ್ವ ಸದಸ್ಯರ ಸಭೆಗೆ ಸದಸ್ಯರಿಗೆ ಶುಭ ಸಮಾರಂಭ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಮತ್ತು ವಿಶಾಲವಾದ ಸಭಾಂಗಣ ನಿರ್ಮಿಸಿಕೊಂಡಿದೆ. ಈ ಸಭಾಂಗಣಕ್ಕೆ ಕಳೆದ ವರ್ಷ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಒಕ್ಕೊರಲಿನ ಒತ್ತಾಯದ ಮೇರೆಗೆ ಈ ಸಭಾಂಗಣಕ್ಕೆ “ಬಸವಾನಿ ವಿಜಯದೇವ್ ಸಭಾಂಗಣ” ಎಂದು ನಾಮಕರಣ ಮಾಡಲಾಗಿದೆ. ಈ ಸಭಾಂಗಣದಲ್ಲಿ ಸ್ಥಳೀಯವಾಗಿ ಜನರಿಗೆ ಅನುಕೂಲವಾಗುವಂತೆ ಯಾವುದೇ ಮದುವೆ, ಶುಭಕಾರ್ಯಗಳನ್ನು ನಡೆಸಬಹುದಾದ ವ್ಯವಸ್ಥೆ ಯನ್ನು ಮಾಡಲಾಗಿದೆ. ಕೆಳ ಅಂತಸ್ತಿನಲ್ಲಿ ಸೊಸೈಟಿಯ ಕಚೇರಿ, ವ್ಯಾಪಾರ ವಿಭಾಗ ನಿರ್ಮಿಸಲಾಗಿದೆ.
ಸರ್ವ ಸದಸ್ಯರ ಸಭೆಗೆ ಆಹ್ವಾನ
ಸೆಪ್ಟೆಂಬರ್ 14 ರಂದು ಮಧ್ಯಾಹ್ನ 4:30 ಕ್ಕೆ ಸೊಸೈಟಿಯ ಅಧ್ಯಕ್ಷರಾದ ಸುರೇಶ್ ಬಿ ಎನ್ ಇವರ ಅಧ್ಯಕ್ಷತೆಯಲ್ಲಿ ಹಾಗೂ ಸೊಸೈಟಿಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಬಸವಾನಿ ವಿಜಯದೇವ್ರವರ ಮಾರ್ಗದರ್ಶನದಲ್ಲಿ ಸರ್ವ ಸದಸ್ಯರ ಸಭೆ ಸೊಸೈಟಿಯ ಆವರಣದಲ್ಲಿ ನಿರ್ಮಾಣಗೊಂಡ ಸಹಕಾರ ಸೌಧ ಕಟ್ಟಡದ ಬಸವಾನಿ ವಿಜಯದೇವ್ ಸಭಾಂಗಣದಲ್ಲಿ ನಡೆಯಲಿದೆ. ಈ ಸರ್ವ ಸದಸ್ಯರ ಸಭೆಗೆ ಸೊಸೈಟಿ ವ್ಯಾಪ್ತಿಯ ಎಲ್ಲಾ ಸದಸ್ಯರು ಆಗಮಿಸುವಂತೆ ಕಾರ್ಯದರ್ಶಿ ಸಂದೀಪ್ ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸೊಸೈಟಿಯ ಅಧ್ಯಕ್ಷರಾದ ಸುರೇಶ್ ಬಿ ಎನ್, ಉಪಾಧ್ಯಕ್ಷರಾದ ರಮೇಶ್, ರವಿ ಕುಪ್ಪಳ್ಳಿ, ಭಾಸ್ಕರ್ ಭಟ್,ನಾಗರಾಜ್ ಭಟ್,ಡಾ. ಹೆಚ್ ಸಿ ಚಂದನ್ ಹಾಗೂ ಕಾರ್ಯದರ್ಶಿ ಸಂದೀಪ್ ಮತ್ತು ಪ್ರಮುಖರು ಉಪಸ್ಥಿತರಿದ್ದರು ಈ ಕಾರ್ಯಕ್ರಮಕ್ಕೆ ಸರ್ವರಿಗೂ
ಆದರದ ಸುಸ್ವಾಗತವನ್ನು ಕೋರಿದ್ದಾರೆ.
ಸರ್ವಸದಸ್ಯರ ಸಭೆಗೆ ಆಹ್ವಾನ
ಸೆಪ್ಟೆಂಬರ್ 14 ರಂದು ಸೊಸೈಟಿಯ ಅಧ್ಯಕ್ಷರಾದ ಸುರೇಶ್ ಬಿ.ಎನ್ ಇವರ ಅಧ್ಯಕ್ಷತೆಯಲ್ಲಿ ಹಾಗೂ ಸೊಸೈಟಿಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಬಸವಾನಿ ವಿಜಯ ದೇವ್ರವರ ಮಾರ್ಗದರ್ಶನದಲ್ಲಿ ಸರ್ವ ಸದಸ್ಯರ ಸಭೆ ಸೊಸೈಟಿಯ ಆವರಣದಲ್ಲಿ ನಿರ್ಮಾಣಗೊಂಡ ಸಹಕಾರ ಸೌಧ ಕಟ್ಟಡದ ಬಸವಾನಿ ವಿಜಯದೇವ್ ಸಭಾಂಗಣದಲ್ಲಿ ನಡೆಯಲಿದೆ. ಈ ಸರ್ವ ಸದಸ್ಯರ ಸಭೆಗೆ ಸೊಸೈಟಿ ವ್ಯಾಪ್ತಿಯ ಎಲ್ಲಾ ಸದಸ್ಯರು ಆಗಮಿಸುವಂತೆ ಕಾರ್ಯದರ್ಶಿ ಸಂದೀಪ್ ವಿನಂತಿಸಿದ್ದಾರೆ.
