ಮಳೆಗೆ ಕುಸಿತು ಧರೆ ಕಸಿಯಿತು ಬದುಕು, ಎಲ್ಲವೂ ಅಸ್ಥವ್ಯಸ್ಥ
* ತಾತನ ಕಾಲದಿಂದ ಮನೆಯಿದೆ ಇನ್ನೂ ಹಕ್ಕುಪತ್ರವಿಲ್ಲ
* ಚರಂಡಿ ಮೋರಿ ಪೈಪುಗಳ ಸರಿಯಾದ ನಿರ್ವಹಣೆ ಇಲ್ಲದೇ ಮಳೆ ನೀರು ರಸ್ತೆಗೆ
* ಸೂಕ್ತ ಪರಿಹಾರ ಹಾಗೂ ನಿರ್ವಹಣೆಗೆ ಗ್ರಾಮದ ಪ್ರಮುಖರ ಆಗ್ರಹ
NAMMMUR EXPRESS NEWS
ಶೃಂಗೇರಿ/ಕೊಪ್ಪ: ಕಳೆದ ಮೂರು ದಿನಗಳಿಂದ ಸುರಿದ ಭಾರಿ ಮಳೆ ಗಾಳಿಗೆ ಶೃಂಗೇರಿ ತಾಲೂಕಿನ ಬೇಗಾರ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೀಗಾ ಗ್ರಾಮದ ಚೀಕ್ಲಿಮನೆಯ ಹರೀಶ್ ಭಟ್ ಎಂಬುವರ ಮನೆಯ ಹಿಂಭಾಗದ ಧರೆ ಕುಸಿದು ಮನೆಯ ದನದ ಕೊಟ್ಟಿಗೆಯ ಒಳಗೆ ಹಾಗೂ ಮನೆಯ ಹಿಂಭಾಗದ ಗೋಡೆಯವರೆಗೂ ಮಣ್ಣು ಬಂದು ಗೋಡೆಗಳು ಜಖ್ಖಂಗೊಂಡು, ಮನೆಗೆ ಸಂಪೂರ್ಣ ಹಾನಿಯಾಗಿದೆ. ಧರೆ ಇನ್ನೂ ಕುಸಿಯುವ ಭೀತಿಯಿದ್ದು ಆಕಾಸ್ಮಾತ್ ಕುಸಿತ ಮುಂದುರೆದರೆ ಸಂಪೂರ್ಣ ಮನೆ ಮಣ್ಣಿನಲ್ಲಿ ಮುಚ್ಚಿಹೋಗುವ ಹಂತದಲ್ಲಿದೆ.ಇದರಿಂದ ಹರೀಶ್ ಭಟ್ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು,ಘಟನಾ ಸ್ಥಳಕ್ಕೆ ತಾಲೂಕಿನ ಮಾಜಿ ತಾ ಪಂ ಅಧ್ಯಕ್ಷ ನೂತನ್ ಕುಮಾರ್ ಹಾಗೂ ಸ್ಥಳೀಯರಾದ ಸುರೇಶ್,ನಡುತೋಟ ಸತೀಶ್ ಭಟ್, ಮಾಜಿ ತಾ ಪಂ ಸದಸ್ಯ ಪದ್ಮನಾಭ್ ಮೀಗಾರವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುಮಾರು 50 ವರ್ಷದಿಂದ ಇಲ್ಲಿ ಮನೆಯಿದ್ದು ಹರೀಶ್ ಭಟ್ ಕುಟುಂಬ ವಾಸ ಮಾಡುತ್ತಿದೆ. ಆದರೆ ಇನ್ನೂ ಹಕ್ಕುಪತ್ರ ಸಿಕ್ಕಿರುವುದಿಲ್ಲ ಕೇವಲ ಅಸೆಸ್ಮೆಂಟ್, ಕಂದಾಯ ರಶೀದಿ ಮಾತ್ರ ಇವರ ಬಳಿ ಇದ್ದು ಇವರಿಗೆ ಸರ್ಕಾರದ ಪರಿಹಾರ ಸಿಗೋದು ತುಂಬಾ ಕಷ್ಟವಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ನೂತನ್ ಕುಮಾರ್ ಮಾತನಾಡಿ ಹರೀಶ್ ಭಟ್‌ರವರ ಕುಟುಂಬ ಸಂಕಷ್ಟದಲ್ಲಿದ್ದು ಇವರ ಸಹಾಯಕ್ಕೆ ಕ್ಷೇತ್ರದ ಶಾಸಕರು ಹಾಗೂ ಸರ್ಕಾರ ಕೂಡಲೇ ಸ್ಪಂದಿಸಬೇಕಿದೆ. ಸುಮಾರು 50 ವರ್ಷಗಳಿಂದ ಇದೇ ಸ್ಥಳದಲ್ಲಿ ವಾಸವಿರುವ ಇವರ ಕುಟುಂಬಕ್ಕೆ ಈ ಮನೆಗೆ ಯಾವುದೇ ಹಕ್ಕುಪತ್ರವಿಲ್ಲ ಕೇವಲ ಕಂದಾಯ ರಶೀದಿ ಹಾಗೂ ಅಸೆಸ್ಮೆಂಟ್ ಮಾತ್ರ ಇದೆ ಹೀಗಿರುವಾಗ ಸರ್ಕಾರದಿಂದ ಯಾವುದೇ ಸಹಕಾರ ಸಿಗುವುದಿಲ್ಲ ಹರೀಶ್ ಭಟ್ ಕುಟುಂಬ ಮಾತ್ರವಲ್ಲ ತಾಲೂಕಿನಲ್ಲಿ ನೂರಾರು ಕುಟುಂಬಗಳು ಇಂತಹ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಕೂಡಲೇ ಶಾಸಕರು ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ ಅತೀವೃಷ್ಠಿ ಪರಿಹಾರದಡಿಯಲ್ಲಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿ ಆ ಮೂಲಕ ಇಂತಹ ಸಮಸ್ಯೆಯಲ್ಲಿ ಸಿಲುಕಿರುವ ಕುಟುಂಬಕ್ಕೆ ನೆರವು ನೀಡುವಂತೆ ಆಗ್ರಹಿಸಿದರು.
* ಚರಂಡಿ, ಮೋರಿ ಪೈಪುಗಳ ಸರಿಯಾದ ನಿರ್ವಹಣೆ ಇಲ್ಲದೇ ಮಳೆ ನೀರು ರಸ್ತೆಗೆ
ಕೊಪ್ಪ: ನಿರಂತರವಾಗಿ ಸುರಿದ ಭಾರೀ ಮಳೆಗೆ ತಾಲೂಕಿನ ಬಸರೀಕಟ್ಟೆಯಲ್ಲಿ ಮುಖ್ಯರಸ್ತೆಗಳ ಚರಂಡಿ,ಮೋರಿ ಪೈಪುಗಳ ನಿರ್ವಹಣೆಯಿಲ್ಲದೇ ಮಳೆನೀರು ರಸ್ತೆಯಲ್ಲೇ ಹರಿಯುತ್ತಿದ್ದು,ಜನರು ಓಡಾಡುವುದಕ್ಕೂ ತುಂಬಾ ಕಷ್ಪವಾಗಿದೆ.ಗ್ರಾಮದ ಹೊನ್ನೆಗುಂಡಿ ಭಾಗದಲ್ಲಿ ನೀರು ನುಗ್ಗಿ ಅನೇಕ ಮನೆಗೆ ತೊಂದರೆಯಾಗುವ ಭೀತಿ ಎದುರಾಗಿದೆ. ಕಳೆದ ಬಾರಿ ಜಿಲ್ಲಾಧಿಕಾರಿ ಬಸ್ರಿಕಟ್ಟೆ ಭಾಗಕ್ಕೆ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದರು.ಅಗತ್ಯ ಕಾಮಗಾರಿಗಳಾಗದೆ ಇದ್ದಲ್ಲಿ ಇನ್ನಷ್ಟು ಅಪಾಯದ ಸಾಧ್ಯತೆ ಇದೆ ಎಂದು ಜಿಲ್ಲಾ ದಿಶಾ ಸಮಿತಿ ಸದಸ್ಯ ಮಣಿಕಂಠನ್ ಕಂದಸ್ವಾಮಿ ಪತ್ರಿಕೆಗೆ ತಿಳಿಸಿದ್ದಾರೆ.
