Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

• ಉಳ್ಳಾಲ: ಹೊಡೆದಾಡಿಕೊಂಡ ಮೂವರು ಯುವಕರು
• ಸುಳ್ಯ: ವಾರೆಂಟ್ ಜಾರಿಯಾಗಿದ್ದ ಆರೋಪಿಯ ಬಂಧನ
• ಪುತ್ತೂರು: ಮನೆಗೆ ನುಗ್ಗಿ ಚಿನ್ನಾಭರಣ, ನಗದು ಕಳ್ಳತನ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಳ್ಳಾಲ: ವಾಹನ ಅಪಘಾತವನ್ನೇ ಗುರಿಯಾಗಿಟ್ಟುಕೊಂಡು, ಎರಡು ಕಾರುಗಳಲ್ಲಿದ್ದ ಮೂವರು ಭಿನ್ನ ಸಮುದಾಯದ ಯುವಕರು ಸ್ಥಳದಲ್ಲೇ ಹೊಡೆದಾಡಿಕೊಂಡ ಘಟನೆ ಉಳ್ಳಾಲದಲ್ಲಿ ನಡೆದಿದೆ. ಇದು ಜನಾಂಗೀಯ ಸಂಘರ್ಷಕ್ಕೆ ತಿರುಗಬಹುದು ಎಂಬುದನ್ನು ಸೂಕ್ಷ್ಮವಾಗಿ ಅರಿತ ಪೊಲೀಸರು ಸೈಯದ್ ತಾಹ, ಮನ್ವಿತ್ ಮತ್ತು ಜೀವನ್ ವಿರುದ್ಧ ಸ್ವಯಂ ಪ್ರೇರಿತರಾಗಿ ಪ್ರಕರಣವನ್ನು ದಾಖಲಿಸಿಕೊಂಡಿರುವುದು ಕಂಡುಬಂದಿದೆ. ಇದನ್ನೇ ಬಂಡವಾಳವಾಗಿಸಿಕೊಂಡು ಒಂದು ಸಮುದಾಯದ ಯುವಕನ ಪರ ಪ್ರಕಟಿಸಿ, ಕೋಮುಗಲಭೆಗೆ ಇಂಬು ನೀಡುವಂತಹ ಸುದ್ಧಿಯನ್ನು ಪ್ರಕಟಿಸಿದ ಯೂಟ್ಯೂಬ್ ವಾಹಿನಿಯೊಂದರ ವಿರುದ್ಧ ಕೂಡ ಕಮಿಷನರ್ ಅವರ ಆದೇಶದ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

• ಸುಳ್ಯ: ವಾರೆಂಟ್ ಜಾರಿಯಾಗಿದ್ದ ಆರೋಪಿಯ ಬಂಧನ

ಸುಳ್ಯ: ಆಡೊಂದನ್ನು ಕದ್ದಿದ್ದ ಹಿನ್ನೆಲೆಯಲ್ಲಿ, ಕುದ್ಮಾರು ಗ್ರಾಮದ ಉನ್ಮೇಶ್ ವಿರುದ್ಧ ಕಳುವು ಪ್ರಕರಣ ದಾಖಲಾಗಿತ್ತು.‌ ಆದರೆ ನ್ಯಾಯಾಲಯಕ್ಕೆ ಹಾಜರಾಗದೆ ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದ , ವಾರೆಂಟ್ ಜಾರಿಯಾಗಿದ್ದ ಈತನನ್ನು ಬೆಳ್ಳಾರೆ ಪೊಲೀಸರು ಬಂಧನಕ್ಕೆ ಒಳಪಡಿಸಿದ್ದಾರೆ.‌ ಇದೀಗ ಉನ್ಮೇಶ್ ಗೆ ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ವಿಧಿಸಿದೆ.

• ಪುತ್ತೂರು: ಮನೆಗೆ ನುಗ್ಗಿ ಚಿನ್ನಾಭರಣ ನಗದು ಕಳ್ಳತನ.‌

ಪುತ್ತೂರು: ದಯಾನಂದ ನಾಯ್ಕ ಎಂಬಾತ ಈಶ್ವರಮಂಗಲದಲ್ಲಿನ ಶೋಭಾ ಎನ್ನುವವರ ಮನೆಯೊಳಗೆ ಹಿಂಬಾಗಿಲಿನಿಂದ ನುಗ್ಗಿ, ಚಿನ್ನಾಭರಣ ಮತ್ತು ನಗದನ್ನು ಕಳುವು ಮಾಡಿರುವ ಘಟನೆ ನಡೆದಿದೆ.‌ ಒಟ್ಟು 31 ಗ್ರಾಂ ಚಿನ್ನ ಮತ್ತು ನಗದನ್ನು ಕಳುವು ಮಾಡಿದ್ದಾನೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಅವನ ಬಳಿಯಿದ್ದ 30,120 ಗ್ರಾಂ ಚಿನ್ನ ಮತ್ತು ಕಳ್ಳತನದ ಸಮಯದಲ್ಲಿ ಬಳಸಿದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.