Categories
ಚಿಕ್ಕಮಗಳೂರು

ಶಿವಮೊಗ್ಗ-ಶೃಂಗೇರಿ -ಮಂಗಳೂರು ರೈಲ್ವೆ ಮಾರ್ಗಕ್ಕೆ ಮರುಜೀವ !!

ಶಿವಮೊಗ್ಗ-ಶೃಂಗೇರಿ -ಮಂಗಳೂರು ರೈಲ್ವೆ ಮಾರ್ಗಕ್ಕೆ ಮರುಜೀವ !!

* ಅಂತಿಮ ಹಂತದ ಸಮೀಕ್ಷೆಗೆ ರೈಲ್ವೇ ಇಲಾಖೆಯಿಂದ ಅನುದಾನ
* ಬಹುದಿನಗಳ ಕನಸು ನನಸಾಗೋ ಭರವಸೆ

NAMMUR EXPRESS NEWS
ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಮತ್ತು ಕರಾವಳಿ ಪ್ರದೇಶಗಳನ್ನು ಸಂಪರ್ಕಿಸುವ ಹಲವು ದಶಕಗಳ ಕನಸಾದ ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲ್ವೆ ಸಂಪರ್ಕ ಯೋಜನೆಗೆ ಇದೀಗ ಮರುಜೀವ ಸಿಕ್ಕಿದೆ. ಮಾರ್ಚ್ 19ರಂದು ಅಂತಿಮ ಹಂತದ ಸಮೀಕ್ಷೆಗಾಗಿ ಭಾರತೀಯ ರೈಲ್ವೆ ಇಲಾಖೆ 23.90 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ.
ಇದರಿಂದ ಈ ಭಾಗದ ಬಹುದಿನಗಳ ಕನಸು ನನಸಾಗುವ ಭರವಸೆ ಮೂಡಿಸಿದೆ.
ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲ್ವೆ ಮಾರ್ಗವು ಹಲವು ದಶಕಗಳ ಹಳೆಯ ಬೇಡಿಕೆಯಾಗಿದೆ. ಈ ಯೋಜನೆ ಸಾಕಾರಗೊಂಡರೆ ಮಲೆನಾಡು ಮತ್ತು ಕರಾವಳಿ ಪ್ರದೇಶಗಳ ನಡುವಿನ ಸಂಪರ್ಕವನ್ನು ಸುಧಾರಿಸಲಿದೆ. ಜೊತೆಗೆ ಪ್ರವಾಸೋದ್ಯಮ, ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ. ಅಲ್ಲದೇ ಕೃಷಿ, ವ್ಯಾಪಾರ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲೂ ಮತ್ತಷ್ಟು ಅವಕಾಶಗಳನ್ನು ಸೃಷ್ಟಿಸುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.