ಕಾರ್ಕಳದಲ್ಲಿ ಮೆಣಸಿನ ಹುಡಿ ಎರಚಿ 70 ಸಾವಿರ ದರೋಡೆ?
– – ಸಾಲದ ಸುಳಿಯಿಂದ ತಪ್ಪಿಸಲು ಖಾರಪುಡಿಯ ನಾಟಕ?
– ಸುಳ್ಳು ಕಥೆ, ಸಾರ್ವಜನಿಕರಿಗೆ ವ್ಯಥೆ!
NAMMUR EXPRESS NEWS
ಕಾರ್ಕಳ: ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಮೆಣಸಿನ ಹುಡಿಯನ್ನು ಹಾಕಿ ಹಣ ದರೋಡೆ ಮಾಡಲಾಗಿದೆ ಎಂಬ ವಿಚಾರವು ಕಾರ್ಕಳದಾದ್ಯಂತ ಹಬ್ಬಿತ್ತು.
ಈ ವಿಷಯವು ಪೋಲಿಸ್ ಠಾಣೆ ಮೆಟ್ಟಿಲನ್ನೇರಿದ್ದು,
ಇದನ್ನು ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆಯ ಎಸ್ಐ ದಿಲೀಪ್ ನೇತೃತ್ವದ ತಂಡ ಸತ್ಯ ಸಂಗತಿ ಪೊಲೀಸ್ ತನಿಖೆಯಲ್ಲಿ ಬಯಲಿಗೆ ಬಂದಿದೆ.
ಘಟನೆ ವಿವರ ಹೇಗಿದೆ ನೋಡಿ?
ಮಾ. 20ರಂದು ರಾತ್ರಿ 8 ಗಂಟೆಯ ವೇಳೆಗೆ ಸರಿಯಾಗಿ ಕಾರ್ಕಳ ತಾಲೂಕಿನ ಬೋಳಗ್ರಾಮದ ಅಂಬರಾಡಿ ಎಂಬಲ್ಲಿ ರಸ್ತೆಯ ಬದಿಯಲ್ಲಿ ಬೈಕ್ ಸಮೇತ ಕೆಳಗೆ ಬಿದ್ದ ವ್ಯಕ್ತಿಯನ್ನು ಸ್ಥಳೀಯ ನಿವಾಸಿಯೊಬ್ಬರು ಗಮನಿಸಿ ವಿಚಾರಿಸಿದಾಗ ಕಣ್ಣಿಗೆ ಮೆಣಸಿನ ಹುಡಿಯನ್ನು ಎರಚಿ ಬಳಿಯಲ್ಲಿದ್ದ ಸುಮಾರು 70 ಸಾವಿರ ರೂಪಾಯಿಯನ್ನು ಅಪರಿಚಿತ ವ್ಯಕ್ತಿಗಳು ದೋಚಿದ್ದಾರೆ ಎಂದು ಕಡಂದಲೆ ನಿವಾಸಿ ವಿಶ್ವನಾಥ್ ಎಂಬವರು ಹೇಳಿಕೊಂಡಿದ್ದರು,
ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು ಆದರೆ ಪೋಲೀಸರು ಘಟನೆ ಸಂಬಂಧಿಸಿದಂತೆ ಸ್ಥಳೀಯ ಎಲ್ಲಾ ಸಿಸಿ ಟಿವಿಗಳು ಸೇರಿದಂತೆ ಎಲ್ಲಾ ಮಾಹಿತಿಯನ್ನು ಕಲೆಹಾಕಿದ್ದರು. ಆದರೆ ವಿಶ್ವನಾಥ್ ಎಂಬವರನ್ನೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಈ ವೇಳೆ ಪ್ರಕರಣ ಕೇವಲ ನಾಟಕ ಎಂಬ ಸತ್ಯ ಸಂಗತಿ ಬಯಲಾಗಿದೆ.
– ಸಾಲದ ಸುಳಿಯಿಂದ ತಪ್ಪಿಸಲು ಖಾರಪುಡಿಯ ನಾಟಕ!
ಮರದ ಕೆಲಸ ಮಾಡುತ್ತಿದ್ದ ವಿಶ್ವನಾಥ್ ಸಾಲದ ಸುಳಿಯಲ್ಲಿ ಸಿಲುಕಿದ್ದರು. ಹೀಗಾಗಿ ಸಾಲವನ್ನು ತೀರಿಸಲಾಗದೆ ಈ ರೀತಿಯಾದ ನಾಟಕವಾಡಿದ್ದ ಸ್ಥಳೀಯ ಅಂಗಡಿಯೊಂದರಲ್ಲಿ ಮೆಣಸಿನ ಹುಡಿಯನ್ನು ಖರೀದಿಸಿ ಬಳಿಕ ಅಂಬರಡಿ ಎಂಬಲ್ಲಿ ಕಣ್ಣಿಗೆ ಖಾರದ ಹುಡಿಯನ್ನು ತನ್ನ ಮುಖಕ್ಕೆ ಹಾಗೂ ಮೈ ಮೇಲೆ ಹಾಕಿಕೊಂಡು, ಬಟ್ಟೆಯ ಕಿಸೆಯನ್ನು ಹರಿದುಕೊಂಡು ಬೈಕ್ ಸಮೇತ ರಸ್ತೆಯ ಬದಿಗೆ ಬಿದ್ದಂತೆ ನಾಟಕವಾಡಿದ್ದ.
ಸ್ಥಳೀಯರೊಬ್ಬರು ಗಮನಿಸಿ ವಿಚಾರಿಸಿದಾಗ ಹಣವನ್ನು ದೋಚಿದ ಬಗ್ಗೆ ಕಥೆಯನ್ನು ಕಟ್ಟಿದ್ದ ಇದನ್ನೇ ಸ್ಥಳೀಯರು ಸತ್ಯವೆಂದು ನಂಬಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಹಣ ದೋಚಿದ ಸುದ್ದಿ ಎಲ್ಲೆಡೆ ತಾಲೂಕಿನಾದ್ಯಂತ ಹರಡಿ ಜನತೆಯಲ್ಲಿ ಆತಂಕಕ್ಕೀಡಾಗಿದ್ದು, ಪೋಲೀಸರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.