ಕಾಫಿನಾಡಲ್ಲಿ 2 ಸರ್ಕಾರಿ ಬಸ್‌ಗಳ ಪ್ರತ್ಯೇಕ ಅಪಘಾತ
* ಕಡೂರಿನಲ್ಲಿ ಬೈಕ್‌ಗೆ ಗುದ್ದಿದ ಸರ್ಕಾರಿ ಬಸ್: ಬೈಕ್ ಸವಾರ ಸಾವು
* ಕೊಪ್ಪದ ಹಿರಿಕೆರೆ ಬಳಿ ಸರ್ಕಾರಿ ಬಸ್ ಮತ್ತು ಕಾರ್ ನಡುವೆ ಅಪಘಾತ:ಓರ್ವ ಗಂಭೀರ
NAMMMUR EXPRESS NEWS
ಕಡೂರು/ಕೊಪ್ಪ: ಕಾಫಿನಾಡಲ್ಲಿ 2 ಸರ್ಕಾರಿ ಬಸ್‌ಗಳ ಪ್ರತ್ಯೇಕ ಅಪಘಾತಗಳು ನಡೆದಿದ್ದು, ಓರ್ವ ಮೃತಪಟ್ಟು, ಓರ್ವನಿಗೆ ಗಂಭೀರ ಗಾಯವಾದೆ.ಕಡೂರು ಪಟ್ಟಣ ಮತ್ತು ಕೊಪ್ಪ ತಾಲೂಕಿನ ಹಿರಿಕೆರೆ ಬಳಿ ಈ ಅಪಘಾತಗಳು ನಡೆದಿದೆ.
ಕಡೂರು ಪಟ್ಟಣದ ಹುಸೇನ್ (23) ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ.
ಹುಸೇನ್ ಕಡೂರು ಎಪಿಎಂಸಿಗೆ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಇನ್ನೊಂದೆಡೆ ಕೊಪ್ಪ ತಾಲೂಕಿನಿಂದ ತರೀಕೆರೆ ಹೋಗುತ್ತಿದ್ದ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರು ಚಾಲಕನಿಗೆ ಗಂಭೀರ ಗಾಯವಾಗಿದ್ದು, ಬಸ್ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇನ್ನೊಂದೆಡೆ ವಿದ್ಯುತ್ ಕಂಬಕ್ಕೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಂಬ ಬಸ್ ಮೇಲೆ ಮುರಿದು ಬಿದ್ದ ಘಟನೆ ನಡೆದಿದೆ. ವಿದ್ಯುತ್ ಲೈನ್‌ನ ಪ್ಯೂಸ್ ತುಂಡಾಗಿದ್ದರಿಂದ ಭಾರೀ ಅನಾಹುತ ತಪ್ಪಿದೆ.