Categories
ಚಿಕ್ಕಮಗಳೂರು

ಎನ್. ಆರ್. ಪುರದಲ್ಲಿ ಜೂ.14ಕ್ಕೆ ರಕ್ತದಾನ ಶಿಬಿರ

ಎನ್. ಆರ್. ಪುರದಲ್ಲಿ ಜೂ.14ಕ್ಕೆ ರಕ್ತದಾನ ಶಿಬಿರ
– ಅಭಿನವ ಪ್ರತಿಭಾ ವೇದಿಕೆ, ರಕ್ತದಾನಿಗಳ ಬಳಗ, ನರಸಿಂಹರಾಜಪುರ ವತಿಯಿಂದ ರಕ್ತದಾನ
– ಜೂನ್ 14ರಂದು ಅಪ್ಪು ಸ್ಮರಣಾರ್ಥವಾಗಿ ಬೃಹತ್ ರಕ್ತದಾನ ಶಿಬಿರ

NAMMUR EXPRESS NEWS
ಎನ್.ಆರ್.ಪುರ: ಜೂ. 14ರಂದು ಎನ್. ಆರ್. ಪುರದಲ್ಲಿ ಪುನೀತ್ ಸ್ಮರಣಾರ್ಥವಾಗಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.
ಅಭಿನವ ಪ್ರತಿಭಾ ವೇದಿಕೆ, ರಕ್ತದಾನಿಗಳ ಬಳಗ, ನರಸಿಂಹರಾಜಪುರ
ಇವರ ನೇತೃತ್ವದಲ್ಲಿ ರೆಡ್‌ ಕ್ರಾಸ್ ಸಂಜೀವಿನಿ ರಕ್ತನಿಧಿ ಕೇಂದ್ರ, ಶಿವಮೊಗ್ಗ, ಶ್ರೀ ಭುವನೇಶ್ವರಿ ಆಟೋ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘ (ರಿ.), ಜೇಸಿಐ ಸಂಸ್ಥೆ, ಅಪ್ಪು ಫ್ಯಾನ್ಸ್ ಬಳಗ, ತಾಲ್ಲೂಕು ಛಾಯಾಚಿತ್ರಗ್ರಾಹಕರ ಸಂಘ(ರಿ.), ಪರಸ್ಪರ ಮಾನವತಾ ವೇದಿಕೆ, ಮೀನ್‌ಕ್ಯಾಂಪ್ ಬಳಗ, ತಾಲ್ಲೂಕು ಸರ್ಕಾರಿ ನೌಕರರ ಸಂಘ, ಎನ್.ಆರ್.ಪುರ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಮೆಸ್ಕಾಂ ಎನ್.ಆ‌ರ್.ಪುರ. ಇವರ ಸಹಯೋಗದೊಂದಿಗೆ ಅಪ್ಪು ಸ್ಮರಣಾರ್ಥವಾಗಿ ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವನ್ನು ದಿನಾಂಕ: 14-06-2025ನೇ ಶನಿವಾರ, ಬೆಳಿಗ್ಗೆ 09:00 ರಿಂದ ಮಧ್ಯಾಹ್ನ 01:00ರವರೆಗೆ ಬಸ್ ಸ್ಟ್ಯಾಂಡ್, ಆಟೋ ನಿಲ್ದಾಣ, ನ.ರಾ.ಪುರದಲ್ಲಿ ಆಯೋಜನೆ ಮಾಡಲಾಗಿದೆ. ರಕ್ತದಾನದಿಂದ ಮೂರು ಜೀವ ಉಳಿಸಬಹುದು, ರಕ್ತದಾನ – ಮಹಾದಾನ ರಕ್ತದಾನ ಮಾಡಿ ಜೀವ ಉಳಿಸಿ. ತುರ್ತು ಸಂದರ್ಭದಲ್ಲಿ ರಕ್ತದಾನಕ್ಕೆ ನೀವು ಸಿದ್ಧರಾಗಿ, ನಿಮ್ಮವರಿಗೆ ಅವಶ್ಯಕತೆ ಇದ್ದಾಗ ನಾವು ಸಿದ್ಧರಿದ್ದೇವೆ. ರಕ್ತದಾನ ಮಾಡಿ ಮತ್ತೊಂದು ಜೀವಕ್ಕೆ ಆಸರೆಯಾಗಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9448203388-7760760208

ರಕ್ತದಾನ ಮಾಡಿ… ಮತ್ತೊಬ್ಬರ ಜೀವಕ್ಕೆ ಉಸಿರಾಗಿ..!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.