Categories
ಚಿಕ್ಕಮಗಳೂರು

ಕಡೂರಲ್ಲಿ ತಾಯಿಯನ್ನೇ ಹತ್ಯೆಗೈದ ಪಾಪಿ ಮಗ!

ಕಡೂರಲ್ಲಿ ತಾಯಿಯನ್ನೇ ಹತ್ಯೆಗೈದ ಪಾಪಿ ಮಗ!
– ಎಣ್ಣೆ ಕುಡಿಯಲು ಹಣ ಕೊಡದಕ್ಕೆ ಹತ್ಯೆ ಮಾಡಿದ
– ಕೊಟ್ಟಿಗೆಹಾರ ಬಳಿ ಹಿಟ್ ಅಂಡ್ ರನ್: ಗಾಯ
– ಬರ್ತ್‌ಡೇ ಆಚರಣೆ ವೇಳೆ ಬಲೂನ್ ಬ್ಲಾಸ್ಟ್: ಮೂವರಿಗೆ ಗಾಯ!

NAMMUR EXPRESS NEWS – ಕಡೂರು : ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ ತನ್ನ ತಾಯಿಯನ್ನೆ ಕೊಲೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಕೆ.ಬಿದರೆ ಗ್ರಾಮದಲ್ಲಿ ನಡೆದಿದೆ. ಕಮಲಮ್ಮ(50) ಕೊಲೆಯಾದ ಮಹಿಳೆ. ಮಗ ಸಂತೋಷ್( 30) ನನ್ನು ಪಂಚನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಡಿತಕ್ಕೆ ದಾಸನಾಗಿದ್ದ ಸಂತೋಷ ನಿತ್ಯ ತಂದೆ, ತಾಯಿಯೊಡನೆ ಜಗಳವಾಡುತ್ತಿದ್ದ. ಶನಿವಾರ ಸಹ ತಾಯಿಯೊಡನೆ ಹಣಕ್ಕಾಗಿ ಪೀಡಿಸಿ ಜಗಳವಾಡಿದ್ದ. ಜಗಳ ತಾರಕಕ್ಕೆ ಹೋಗಿ ಸಂತೋಷ್ ಹರಿತವಾದ ಆಯುಧದಿಂದ ತಾಯಿಯನ್ನು ಹತ್ಯೆಗೈದಿದ್ದಾನೆ ಎಂದು ಸಂತೋಷ್ ತಂದೆ ಕಲ್ಲೇಶಪ್ಪ ಪೊಲೀಸ್ ದೂರು ನೀಡಿದ್ದಾರೆ.ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಭೇಟಿ ನೀಡಿದ್ದರು. ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಟ್ಟಿಗೆಹಾರ: ಅಪರಿಚಿತ ಜೀಪ್ ಡಿಕ್ಕಿ!

ಕೊಟ್ಟಿಗೆಹಾರ: ಬಣಕಲ್ ಪೇಟೆಯಲ್ಲಿ ಮೂಡಿಗೆರೆಯಿಂದ ಕೊಟ್ಟಿಗೆಹಾರ ಕಡೆಗೆ ಸಾಗುತ್ತಿದ್ದ ಅಪರಿಚಿತ ಜೀಪ್ ವಾಹನ ವ್ಯಕ್ತಿಗೆ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೇ ಹೋಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.ವಿನಯ್ ಎಂಬ ಯುವಕ ಗಾಯಾಳು.ಬಣಕಲ್ ಸಮೀಪದ ಮತ್ತಿಕಟ್ಟೆಯಿಂದ ಬಿ.ಎಸ್ ರಕ್ಷಿತ್ ಅವರ ಬೈಕ್ನಲ್ಲಿ ವಿನಯ್ ಸೇರಿ ಅಂಗಡಿ ದಿನಸಿ ತರಲು ಬಣಕಲ್ ಗೆ ಬಂದಿದ್ದರು.ರಾತ್ರಿ 8ಗಂಟೆ ಸಮಯದಲ್ಲಿ ವಿನಯ್ ರಸ್ತೆ ದಾಟುತ್ತಿದ್ದಾಗ ಮೂಡಿಗೆರೆ ಕಡೆಯಿಂದ ಕೊಟ್ಟಿಗೆಹಾರ ಕಡೆ ಸಾಗುವ ವಾಹನವು ಚಾಲಕನ ಅತಿಯಾದ ವೇಗದಿಂದ ವಿನಯ್ ಗೆ ಢಿಕ್ಕಿಹೊಡೆದಿದೆ.ವಿನಯ್ ಗಂಭೀರ ಗಾಯಗೊಂಡು ತಲೆಗೆ, ಕಾಲಿಗೆ ಪೆಟ್ಟಾಗಿತ್ತು. ಕೂಡಲೆ ಸ್ಥಳೀಯ ಯುವಕರು ನಮ್ಮ ಊರು ಬಣಕಲ್ ವ್ಯಾಟ್ಸಾಪ್ ಗ್ರೂಪಿನಲ್ಲಿ ಒಬ್ಬರಿಂದೊಬ್ಬರಿಗೆ ಜೀಪ್ ಫೋಟೋ ಶೇರ್ ಮಾಡಿದ್ದಾರೆ. ಹಿಡಿಯುವಂತೆ ಬಾಳೂರು ಪೊಲೀಸ್ ಠಾಣೆ ಮಾಹಿತಿ ನೀಡಿದ್ದಾರೆ.

ಬರ್ತ್‌ಡೇ ಆಚರಣೆ ವೇಳೆ ಬಲೂನ್ ಬ್ಲಾಸ್ಟ್: ಮೂವರಿಗೆ ಗಾಯ!

ಹೀಲಿಯಂ ಗ್ಯಾಸ್‌ ತುಂಬಿದ್ದ ಬಲೂನ್ ಬ್ಲಾಸ್ಟ್ ಆಗಿ ಓರ್ವ ವ್ಯಕ್ತಿ ಸೇರಿಂದಂತೆ ಮೂವರು ಮಕ್ಕಳಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಬಳಿಯ ಕಾಡುಗೋಡಿ ಬಳಿಯ ಬೆಲತ್ತೂರಿನಲ್ಲಿ ಸಂಭವಿಸಿದೆ.
ಗಾಯಗೊಂಡವರನ್ನು ವಿಜಯ್ ಕುಮಾರ್ (44), ಧ್ಯಾನ್(7), ಸಂಜಯ್(8), ಸೋಹಿಲಾ (3) ಎಂದು ಗುರುತಿಸಲಾಗಿದೆ.
ಶನಿವಾರ ಹುಟ್ಟುಹಬ್ಬದ ಪ್ರಯುಕ್ತ ಹೀಲಿಯಂ ಗ್ಯಾಸ್‌ ತುಂಬಿಸಿದ್ದ ಬಲೂನ್ ಬಳಸಲಾಗಿತ್ತು, ಆಕಸ್ಮಿಕವಾಗಿ ಮನೆಯ ಮುಂದಿನ ವಿದ್ಯುತ್‌ ತಂತಿಗೆ ತಾಗಿ ಒಮ್ಮೆಲೆ ಬಲೂನ್ ಬ್ಲಾಸ್ಟ್ ಆಗಿದೆ.ಹಿಲಿಯಂ ಬಲೂನ್ ಬ್ಲಾಸ್ಟ್ ಆದ ಪರಿಣಾಮ ಅಕ್ಕಪಕ್ಕದಲ್ಲಿದ್ದ ಮೂವರು ಮಕ್ಕಳು ಸೇರಿ ವ್ಯಕ್ತಿಗೆ ಗಂಭೀರ ಗಾಯವಾಗಿದೆ.ಬ್ಲಾಸ್ಟ್ ಪರಿಣಾಮ ಮಕ್ಕಳ ಮುಖ ಸೇರಿ ಕೈ-ಕಾಲುಗಳು ಸುಟ್ಟು ಹೋಗಿದ್ದು, ಅಲ್ಲಿಯೇ ಇದ್ದ ವ್ಯಕ್ತಿಯ ಮುಖದ ಚರ್ಮವೆಲ್ಲ ಸುಟ್ಟು ಹೋಗಿದೆ.ಹೀಗಾಗಿ ಗಾಯಗೊಂಡವರು ನರಳಾಡುತ್ತಿರುವ ಹಿನ್ನಲೆಯಲ್ಲಿ ಕೂಡಲೇ ವಿಕ್ಟೋರಿಯಾದ ಸುಟ್ಟಗಾಯ ವಾರ್ಡ್‌ ರವಾನಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.