Categories
ತೀರ್ಥಹಳ್ಳಿ

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕೋಮುವಾದಿಗಳಿಗೆ ಶಕ್ತಿ

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕೋಮುವಾದಿಗಳಿಗೆ ಶಕ್ತಿ
– ಕಾಂಗ್ರೆಸ್ ಸರ್ಕಾರದ ವಿರುದ್ಧ ಆರಗ ಜ್ಞಾನೇಂದ್ರ ಕಿಡಿ
– ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು

NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗದಲ್ಲಿ ಕಳೆದ ಎರಡು ಮೂರು ದಿನಗಳ ಹಿಂದೆ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ಸೇರಿದಂತೆ ಎಲ್ಲಾ ಗಣಪತಿಗಳ ವಿಸರ್ಜನಾ ಮಹೋತ್ಸವ ನಡೆದಿದ್ದು ಲಕ್ಷಗಟ್ಟಲೆ ಜನ ಭಾಗವಹಿಸಿ ಅದ್ದೂರಿಯಾಗಿ, ಶಾಂತಿಯುತವಾಗಿ ನಡೆದಿದೆ ಎಲ್ಲೂ ಏನು ತೊಂದರೆ ಆಗಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ತೀರ್ಥಹಳ್ಳಿಯಲ್ಲಿ ಮಾತನಾಡಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾನುವಾರ ರಾತ್ರಿ ರಾಗಿಗುಡ್ಡ ಮೆರವಣಿಗೆಯಲ್ಲಿ ಒಂದು ಬ್ಯಾಚ್ ಇದ್ದಕ್ಕಿದ್ದ ಹಾಗೆ ಒಳಗೆ ನುಗ್ಗಿ ಗಲಾಟೆ ಮಾಡಿದೆ, ಭಯಾನಕವಾದ ವಾತಾವರಣ ಸೃಷ್ಟಿ ಮಾಡಿದೆ. ಮನೆ ಮೇಲೆ ಕಲ್ಲು ಹೊಡೆದಿದ್ದಾರೆ, ವಿಚಿತ್ರ ರೀತಿಯಲ್ಲಿ ವರ್ತನೆ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅಖಂಡ ಭಾರತದ ನಕಾಶೆಯ ಒಳಗಡೆ ಔರಂಗಜೇಬನ ಫೋಟೋ ಹಾಕಿದ್ದಾರೆ.

ಟಿಪ್ಪು ಸುಲ್ತಾನ ಹಾಗೂ ಸೈನಿಕರನ್ನು ತುಳಿದು ನಿಂತಿರುವಂತಹ ಫೋಟೋ ಹಾಕಿದ್ದಾರೆ. ಅನಾವಶ್ಯಕವಾಗಿ ಪ್ರಚಾರ ಕೊಡುವಂತಹ ಇಂಥ ಫೋಟೋಗಳನ್ನು ಯಾಕೆ ಹಾಕಿದ್ರು, ಈ ಸಂದರ್ಭದಲ್ಲಿ ಪೊಲೀಸ್ ಏನು ಮಾಡುತ್ತಿದ್ದರು? ಮತ್ತು ಎಲ್ಲಕ್ಕಿಂತ ಕಾಂಗ್ರೆಸ್ ಸರ್ಕಾರ ಬಂದಮೇಲೆ ಇಂತ ದುಷ್ಟ ಶಕ್ತಿಗಳಿಗೆ ಈ ದೇಶವನ್ನು ವಿರೋಧಿಸುವಂತಹ ಕೋಮು ಶಕ್ತಿಗಳಿಗೆ ಬಹಳ ದೊಡ್ಡ ಶಕ್ತಿ ಬಂದಿದೆ. ಇದನ್ನು ನಿಲ್ಲಿಸದೆ ಹೋದರೆ ಬಹಳ ಕಷ್ಟ ಆಗುತ್ತದೆ. ಶಾಂತಿ ಸುವ್ಯವಸ್ಥೆ ನಿರ್ಮಾಣ ಮಾಡುವುದು ಕಷ್ಟ ಆಗುತ್ತಿದೆ. ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕು. ಈ ದೇಶದಲ್ಲಿ ಕಾನೂನು ಇದೆ ಈ ರೀತಿ ಪ್ರಚೋದನೆಗೆ ಯಾರು ಬಗ್ಗುವುದಿಲ್ಲ ಎಂದು ತೋರಿಸಿಕೊಡಬೇಕಾದ ಅವಶ್ಯಕತೆ ಪೊಲೀಸರ ಮೇಲಿದೆ ಎಂದು ಹೇಳಿದರು.

ಇನ್ನು ಕೋಲಾರದ ಘಟನೆ ಬಗ್ಗೆ ಮಾತನಾಡಿದ ಅವರು ಕೋಲಾರದಲ್ಲಿ ನಡೆದಿರುವಂತಹ ಘಟನೆ ಲಾಂಗ್ ನಲ್ಲಿ ಕೂಡ ತೋರಣ ಮಾಡಿದ್ದರು ಹಾಗಾಗಿ ನಿನ್ನೆದು ಕೂಡ ಎಲ್ಲ ದಾಖಲಾತಿ ಇದೆ. ಹೋಂ ಮಿನಿಸ್ಟ್ರು ಇದ್ರ? ಅವರು ಈ ಮಾಹಿತಿ ತೆಗೆದುಕೊಂಡಿಲ್ಲ ಎಂದರೆ ತುಂಬಾ ಕಷ್ಟ ಆಗುತ್ತದೆ. ಈ ರೀತಿ ಮಾತನಾಡಬಾರದು ಮಾಹಿತಿ ತೆಗೆದುಕೊಂಡು ಮಾತನಾಡಬೇಕು. ಯಾವುದೇ ಒಂದು ಧರ್ಮವನ್ನು ಪುಷ್ಟಿಕರಿಸುವುದಕ್ಕಾಗಿ ಅವರ ಸತ್ಯವನ್ನು ಮುಚ್ಚಿಡುವ ಅವಶ್ಯಕತೆ ಇಲ್ಲ. ಎಲ್ಲರೂ ಕೂಡ ನೋಡಿದ್ದಾರೆ ಎಲ್ಲರಿಗೂ ಸತ್ಯ ತಿಳಿದಿದೆ. ಹಾಗಾಗಿ ಹೋಂ ಮಿನಿಸ್ಟರ್ ಎಂಬ ಜವಾಬ್ದಾರಿ ಸ್ಥಾನದಲ್ಲಿರುವವರು ಈ ಮಾತನಾಡುವುದು ಎಲ್ಲರಿಗೂ ಕೂಡ ಗೊತ್ತಾಗುತ್ತದೆ. ಅವರು ಮಾಹಿತಿ ಪಡೆದು ಮತ್ತೊಮ್ಮೆ ಪ್ರತಿಕ್ರಿಯೆ ವ್ಯಕ್ತಪಡಿಸಬೇಕು ಎಂದು ಹೇಳಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.