Categories
ಚಿಕ್ಕಮಗಳೂರು ಶೃಂಗೇರಿ

ಶೃಂಗೇರಿ ಶಂಕರ ಗಿರಿ ಈಗ ಸಾರ್ವಜನಿಕ ಪ್ರವೇಶಕ್ಕೆ ಮುಕ್ತ

ಶೃಂಗೇರಿ ಶಂಕರ ಗಿರಿ ಈಗ ಸಾರ್ವಜನಿಕ ಪ್ರವೇಶಕ್ಕೆ ಮುಕ್ತ

* ಆದಿ ಶಂಕರಾಚಾರ್ಯ ಭಗವತ್ಪಾದರ 32 ಅಡಿ ಎತ್ತರದ ಪ್ರತಿಮೆ
* ದೇವಾಲಯ,ಆಡಿಟೋರಿಯಂ ಹಾಗೂ 360° ಪಶ್ಚಿಮ ಘಟ್ಟದ ದೃಶ್ಯ ಮತ್ತು ಹಲವು ವಿಶೇಶತೆಗಳು

NAMMMUR EXPRESS NEWS
ಶೃಂಗೇರಿ: ಮೇ 19 ರಿಂದ ಶೃಂಗೇರಿಯ ಶಂಕರ ಗಿರಿ ದರ್ಶನಕ್ಕೆ ಪ್ರವೇಶ ಆರಂಭವಾಗಲಿದೆ. ಕೆಲವು ತಿಂಗಳ ಹಿಂದೆ ಶ್ರೀಮಠದ ಉಭಯ ಜಗದ್ಗುರುಗಳಿಂದ ಇಲ್ಲಿನ ಶ್ರೀಶಂಕರಾಚಾರ್ಯರ 32 ಅಡಿ ಎತ್ತರದ ಮೂರ್ತಿ,ಅಡಿಟೋರಿಯಂ,ಎಲಿವೇಟರ್ ಉದ್ಘಾಟನೆಗೊಂಡಿದ್ದವು. ಕೆಲ ಸಣ್ಣಪುಟ್ಟ ಕೆಲಸಗಳು ಪೂರ್ಣಗೊಳಿಸುವ ಸಲುವಾಗಿ ಸಾರ್ವಜನಿಕರಿಗೆ ಪ್ರವೇಶ ನಿರ್ಭಂಧಿಸಲಾಗಿತ್ತು. ಈಗ ಶಂಕರ ಗಿರಿಯ ಎಲ್ಲಾ ಕೆಲಸಗಳು ಪೂರ್ಣಗೊಂಡಿದ್ದು ಮೇ.19 ರಿಂದ ಶಂಕರ ಗಿರಿಯು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿರಲಿದೆ. 32 ಅಡಿ ಶಂಕರಾಚಾರ್ಯರ ಭವ್ಯ ಮೂರ್ತಿ,ಆಡಿಟೋರಿಯಂ, ಪಶ್ಚಿಮ ಘಟ್ಟದ 360° ವಿಹಂಗಮ ದೃಷ್ಯ ಶಂಕರ ಗಿರಿಯ ವಿಶೇಷತೆಗಳು. ಗಿರಿಗೆ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಂತರ ಮಧ್ಯಾಹ್ನ 3 ರಿಂದ ರಾತ್ರಿ 8 ಗಂಟೆಯ ವರೆಗೆ ಸಾರ್ವಜನಿಕರು ಭೇಟಿ ನೀಡಬಹುದಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.