Categories
ಚಿಕ್ಕಮಗಳೂರು

ಮಘಾ ಮಳೆ ಆರ್ಭಟಕ್ಕೆ ತತ್ತರಿಸಿದ ಶೃಂಗೇರಿ ತಾಲೂಕು

ಮಘಾ ಮಳೆ ಆರ್ಭಟಕ್ಕೆ ತತ್ತರಿಸಿದ ಶೃಂಗೇರಿ ತಾಲೂಕು

* ಗಾಂಧಿಮೈದಾನಕ್ಕೆ ಬಂದ ತುಂಗಾ ನದಿ ನೀರು,ಪ್ರವಾಹದಲ್ಲಿ ಸಿಲುಕಿದ ವಾಹನಗಳು
* ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಭೂ ಕುಸಿತ ಆತಂಕದಲ್ಲಿ ಸವಾರರು

NAMMMUR EXPRESS NEWS
ಶೃಂಗೇರಿ: ಮಘಾ ಮಳೆ ಆರ್ಭಟಕ್ಕೆ ತಾಲೂಕಿನ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಕಳೆದ ಮೂರು ದಿನಗಳಿಂದ ಬಿಡದೇ ಸುರಿಯುತ್ತಿರುವ ಮಳೆಗೆ ತುಂಗಾ ನದಿ,ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ತುಂಗೆಯಲ್ಲಿ ಪ್ರವಾಹ ಉಂಟಾಗಿದ್ದು,ನಗರದ ಗಾಂಧಿಮೈದಾನ ಹಾಗೂ ಬೈಪಾಸ್ ರಸ್ತೆ (ಭಾರತೀ ತೀರ್ಥ ರಸ್ತೆ)ಜಲಾವೃತಗೊಂಡಿದೆ.
ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಆನೆಗುಂದ ಸಮೀಪ ಧರೆ ಕುಸಿದು ಹೆದ್ದಾರಿಗೆ ಮಣ್ಣು ಜರಿದಿದ್ದು,ವಾಹನ ಸವಾರರಲ್ಲಿ ಆತಂಕ ಸೃಷ್ಟಿಯಾಗಿದೆ.
ಮೆಣಸೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶೆಟ್ಟಿಹಳ್ಳಿಯಲ್ಲಿ ಭಾರಿ ಪ್ರಮಾಣದ ಗುಡ್ಡ ಕುಸಿತ ಉಂಟಾಗಿದೆ.ತೆಕ್ಕೂರು ಗ್ರಾಮ ಪಂಚಾಯಿತಿಯ ಬೋಳೂರು ಹತ್ತಿರ ರಸ್ತೆ ಮೇಲೆ ಮರ ಹಾಗೂ ಗುಡ್ಡ ಕುಸಿದು ರೋಡ್ ಬ್ಲಾಕ್ ಆಗಿದೆ. ಕಿಗ್ಗಾ – ಕೆಲ್ಲಾರ್ – ಮಳೂರು – ಕೋಗಿನಬೈಲು ಸಂಪರ್ಕಿಸುವ ರಸ್ತೆ ಮೇಲೆ ನಂದಿನಿ ನದಿ ನೀರು ಉಕ್ಕಿ ಹರಿದು ರಸ್ತೆ ಸಂಪರ್ಕ ಕಡಿತಗೊಂಡಿತ್ತು.
ನಗರದ ಬೈಪಾಸ್ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಬೇಗಾನೆ ರಾಮಯ್ಯ ಸರ್ಕಲ್‌ನಲ್ಲಿ (ಕುರುಬಗೇರಿ ಸರ್ಕಲ್) ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಸಂಭವಿಸಿತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.