ಸಿನಿಮಾ ಸ್ಟೈಲಲ್ಲಿ ಆಕ್ಸಿಡೆಂಟ್!
* ಕರ್ನಾಟಕ ಬಸ್ ಆಂಧ್ರ ಕಾರು ಮುಖಾಮುಖಿ ಅಪಘಾತ
* ಅಪಘಾತ ತಪ್ಪಿಸಲು ಹೋಗಿ ಬಸ್ ಬ್ಲೇಡ್ ಕಟ್!
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಕಲ್ಲುಕೊಪ್ಪ ದ ಸಂಪಿಗೆಹಳ್ಳ ಗ್ರಾಮದ ಬಳಿ ಆಗಸ್ಟ್ 17 ರಂದು ಬೆಳಿಗ್ಗೆ ಸುಮಾರು 11 30ರ ಸಮಯದಲ್ಲಿ ಶಿವಮೊಗ್ಗದಿಂದ ಹರಣಗೆರೆ ಮಾರ್ಗವಾಗಿ ಕೋಣಂದೂರುಗೆ ಬರುತ್ತಿದ್ದ ಕೃಷ್ಣಸ್ವಾಮಿ ಬಸ್ ಹಾಗೂ ಆಂಧ್ರ ಮೂಲದ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ಅಪಾಯ ತಪ್ಪಿಸುವ ಭರದಲ್ಲಿ ಬಸ್ ಹೌಜಿಂಗ್ ಬೆಲ್ಡ್ ಕಟ್ಟಾಗಿರುವ ಪರಿಣಾಮ ಚಕ್ರ ವಿಲ್ಲದೆ ಕೆಲವು ಅಡಿಗಳಷ್ಟು ಬಸ್ ಪ್ರಯಾಣಿಸಿದೆ, ಅದೃಷ್ಟವಶಾತ್ ಕಾರು ಚಾಲಕರಿಗೂ ಹಾಗೂ ಬಸ್ ಪ್ರಯಾಣಿಕರಿಗೆ ಯಾವುದೇ ತರಹದ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
