Categories
ಚಿಕ್ಕಮಗಳೂರು

ಹಿಂದೂ ಪ್ರವಾಸಿಗರ ಗುರಿಯಾಗಿಸಿ ಉಗ್ರರ ದಾಳಿ

ಹಿಂದೂ ಪ್ರವಾಸಿಗರ ಗುರಿಯಾಗಿಸಿ ಉಗ್ರರ ದಾಳಿ

* ಕಾಫಿನಾಡಿನಾದ್ಯಂತ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಕೆ
* ಉಗ್ರರ ಕೃತ್ಯ ಖಂಡನೆ, ಭಾರತದಿಂದ ತಕ್ಕ ಉತ್ತರಕ್ಕೆ ಆಗ್ರಹ

NAMMMUR EXPRESS NEWS
ಚಿಕ್ಕಮಗಳೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಹಾಗೂ ದಾಳಿಯಲ್ಲಿ ಮೃತರಾದ ಮೂವರು ಕನ್ನಡಿಗರು ಸೇರಿದಂತೆ ಒಟ್ಟು 28 ಜನರ ಆತ್ಮಕ್ಕೆ ಶ್ರದ್ಧಾಂಜಲಿ ಸಭೆ ಮತ್ತು ಪ್ರತಿಭಟನೆಗಳು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ನಡೆದಿದೆ.
ಹಿಂದೂಪರ ಸಂಘಟನೆಗಳು ಕರೆನೀಡಿದ್ದ ಶ್ರದ್ಧಾಂಜಲಿ ಸಭೆ ಹಾಗೂ ಪ್ರತಿಭಟನೆಗೆ ವ್ಯಾಪಕ ಜನ ಬೆಂಬಲ ವ್ಯಕ್ತವಾಗಿದ್ದು ದಾಳಿಯಲ್ಲಿ ಮೃತರಾದ 28 ಜನರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಉಗ್ರರ ಈ ದುಶ್ಕೃತ್ಯಕ್ಕೆ ಮತ್ತು ಇದಕ್ಕೆ ಬೆಂಬಲಿಸಿದ ಪಾಕ್ ವಿರುದ್ಧ ಪ್ರತಿಭಟಿಸಿದರು.
ಪಾಕ್ ವಿರುದ್ಧ ಘೋಷಣೆ ಕೂಗಿ,ಪಾಕ್ ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಚಿಕ್ಕಮಗಳೂರು,ಮೂಡಿಗೆರೆ,ಕಳಸ,ಬಾಳೆಹೊನ್ನೂರು,ಶೃಂಗೇರಿ,ಕೊಪ್ಪ,ಎನ್.ಆರ್ ಪುರ,ತರೀಕೆರೆ,ಕಡೂರಿನಲ್ಲಿ ಪ್ರತಿಭಟನೆ ಹಾಗೂ ಶ್ರದ್ಧಾಂಜಲಿ ಸಭೆ ನಡೆಯಿತು. ಎಲ್ಲಾ ಸಭೆಯಲ್ಲೂ ಮೃತರ ಆತ್ಮಕ್ಕೆ ಶಾಂತಿ ಕೋರಿ ಈ ದಾಳಿಗೆ ಭಾರತದಿಂದ ತಕ್ಕ ಪ್ರತ್ಯುತ್ತರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.