ಖಗ್ರಾಸ ಚಂದ್ರಗ್ರಹಣ ಗೋಚರ ಹಿನ್ನೆಲೆ ಕಾಫಿನಾಡಿನ ದೇವಾಲಯಗಳಲ್ಲಿ ಪ್ರಸಾದ ಇರಲ್ಲ
* ದೇವಸ್ಥಾನದಲ್ಲಿ ರಾತ್ರಿ ಪ್ರಸಾದ ಸೇವೆ ಬಂದ್, ಗ್ರಹಣ ಮುಕ್ತಾಯದವರೆಗೂ ಪೂಜೆ
* ಹೊರನಾಡು,ಶೃಂಗೇರಿ ದೇವಾಲಯದಲ್ಲಿ ರಾತ್ರಿ ಪ್ರಸಾದ ಇರಲ್ಲ
NAMMMUR EXPRESS NEWS
ಚಿಕ್ಕಮಗಳೂರು: ಇಂದು ಖಗ್ರಾಸ ಚಂದ ಗ್ರಹಣ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ದೇವಾಲಯಗಳಾದ ಹೊರನಾಡು ಶ್ರೀಅನ್ನಪೂರ್ಣೇಶ್ವರಿ,ಶೃಂಗೇರಿ ಶ್ರೀ ಶಾರದಾಂಬೆ ದೇವಾಲಯ,ಹರಿಹರಪುರ ದೇವಾಲಯ ಸೇರಿದಂತೆ ಇತರ ದೇವಾಲಯಲ್ಲಿ ಇಂದು ಮಧ್ಯಾಹ್ನದವರೆಗೆ ಮಾತ್ರ ಅನ್ನಸಂತರ್ಪಣೆ ವ್ಯವಸ್ಥೆ ಇರಲಿದೆ.
ದೇವಸ್ಥಾನದಲ್ಲಿ ನಡೆಯುವ ಪೂಜೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಹೊರನಾಡು ಶ್ರೀಅನ್ನಪೂರ್ಣೇಶ್ವರಿ, ಶೃಂಗೇರಿ ಶ್ರೀಶಾರದಾ ಪೀಠ, ಕಿಗ್ಗಾದ ಋಷ್ಯಶೃಂಗೇಶ್ವರ, ಕಳಸದ ಕಳಸೇಶ್ವರ ಸನ್ನಿಧಿಯಲ್ಲಿ ಗ್ರಹಣ ಆರಂಭದಿಂದ ಅಂತ್ಯದವರೆಗೂ ಜಲಾಭಿಷೇಕ,ವಿಶೇಷ ಪೂಜೆ ಪೂಜೆ ನಡೆಯಲಿದ್ದು,ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ಇಂದು ರಾತ್ರಿ 8:30ಕ್ಕೆ ದೇವಸ್ಥಾನ ಬಾಗಿಲು ಬಂದ್, ಸೋಮವಾರ ಬೆಳಗ್ಗೆ 6 ರಿಂದ ಭಕ್ತರಿಗೆ ದರ್ಶನದ ವ್ಯವಸ್ಥೆ ಇರಲಿದೆ ಎಂದು ದೇವಸ್ಥಾನಗಳ ಮೂಲಗಳು ತಿಳಿಸಿವೆ.