Categories
ಚಿಕ್ಕಮಗಳೂರು

ಟಾಪ್ 3 ನ್ಯೂಸ್ ಚಿಕ್ಕಮಗಳೂರು

ಟಾಪ್ 3 ನ್ಯೂಸ್ ಚಿಕ್ಕಮಗಳೂರು
-ಕೊಪ್ಪ: ಪಟ್ಟಣದಲ್ಲಿ ಹೆಚ್ಚಾಯಿತು ಬೀದಿ ನಾಯಿಗಳ ಕಾಟ
– ಶೃಂಗೇರಿ: ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ!
– ಹರಿಹರಪುರ: ಬಸ್ ಕಾಯುತ್ತಿದ್ದ ವೇಳೆ ಗುದ್ದಿದ ಕಾರು, ವೃದ್ಧೆ ಸಾವು

NAMMUR EXPRESS NEWS
ಕೊಪ್ಪ: ಕೊಪ್ಪ ಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ನಿರಂತರವಾಗಿ ಬೀದಿ ನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಾ ಇದೆ ಇದರಿಂದ ಜನಸಾಮಾನ್ಯರು ಹಾಗೂ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಎದುರಾಗಿದೆ. ಹೈಸ್ಕೂಲ್ ವಿದ್ಯಾರ್ಥಿಯ ಕಾಲಿಗೆ ಕಚ್ಚಿದ ಬೀದಿ ನಾಯಿ ಇದರಿಂದ ರಸ್ತೆಯಲ್ಲಿ ಓಡಾಡಲು ವಿದ್ಯಾರ್ಥಿಗಳು ಸಾರ್ವಜನಿಕರು ಭಯಪಡುವಂತಾಗಿದೆ. ಈ ಬೀದಿ ನಾಯಿಗಳ ಕಾಟವನ್ನು ತಡೆಯಲು ವಿಫಲವಾದ ಪಟ್ಟಣ ಪಂಚಾಯಿತಿ. ಪಟ್ಟಣ ಪಂಚಾಯಿತಿಯು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇದರ ಕಡೆ ಹೆಚ್ಚು ಗಮನ ಕೊಡಬೇಕು ಇಲ್ಲದಿದ್ದರೆ ಸೂಕ್ತವಾದ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಸಾರ್ವಜನಿಕರು ಆಕ್ರೋಶವನ್ನು ಹೊರಹಾಕಿದ್ದಾರೆ.

– ಶೃಂಗೇರಿ: ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ!

ಶೃಂಗೇರಿ: ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ಚಿಕ್ಕಮಗಳೂರಿನ ಶೃಂಗೇರಿ ತಾಲ್ಲೂಕಿನಲ್ಲಿ ನಡೆದಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ಈಗ ಆರೋಗ್ಯ ತಪಾಸಣೆ ವೇಳೆ ಘಟನೆ ಹೊರಬಂದಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ಪ್ರವೃತ್ತರಾದ ಪೊಲೀಸರು ಆರೋಪಿ ನಿಕ್ಕಿಮ್ ಎನ್ನುವನನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈತ ತೆಕ್ಕೂರಿನ ಎಸ್ಟೇಟ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಅಪ್ರಾಪ್ತ ಬಾಲಕನನ್ನು ಕೆಲಸಕ್ಕೆ ಸೇರಿಸಿಕೊಂಡಿರುವ ಮಾಲೀಕನ ವಿರುದ್ಧ ಸಹ ಕ್ರಮ ಪೊಲೀಸ್ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ. ಅಸ್ಸಾಂ ಕಾರ್ಮಿಕರು ಹಾಗೂ ಬಾಂಗ್ಲಾ ನುಸುಳುಕೋರರು ಮಲೆನಾಡಿನ ಎಸ್ಟೇಟ್ ಗಳಲ್ಲಿ ನುಸುಳಿಕೊಂಡಿದ್ದು ಕಡಿಮೆ ಕೂಲಿಗೆ ಸಿಗುತ್ತಾರೆ ಎಂಬ ಕಾರಣಕ್ಕೆ ಎಸ್ಟೇಟ್ ಮಾಲೀಕರು ಸಹ ಕಾನೂನನ್ನು ಗಾಳಿಗೆ ತೂರಿ ಇಂತವರನ್ನು ತಮ್ಮ ಎಸ್ಟೇಟ್ ನಲ್ಲಿ ಕೆಲಸಕ್ಕೆ ನಿರ್ವಹಿಸಿಕೊಂಡಿದ್ದಾರೆ.

– ಹರಿಹರಪುರ: ಬಸ್ ಕಾಯುತ್ತಿದ್ದ ವೇಳೆ ಗುದ್ದಿದ ಕಾರು, ವೃದ್ಧೆ ಸಾವು

ಹರಿಹರಪುರ: ಬಸ್ ಗಾಗಿ ಕಾಯುತ್ತಿದ್ದಾಗ ಕಾರು ಗುದ್ದಿದ ಪರಿಣಾಮ ವೃದ್ಧೆಯೊಬ್ಬರು ಮಾರ್ಗಮಧ್ಯೆ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹರಿಹರಪುರದಲ್ಲಿ ನಡೆದಿದೆ. 80 ವರ್ಷದ ವೃದ್ಧೆ ಪದ್ದಮ್ಮ ಮೃತ ದುರ್ದೈವಿ. ಪದ್ದಮ್ಮ ಕಾಳನಾಯನಕಟ್ಟೆ ಸಮೀಪ ಬಸ್ ಗಾಗಿ ಕಾಯುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ದನಕ್ಕೆ ಹೊಡೆದು ನಿಯಂತ್ರಣ ತಪ್ಪಿದೆ. ಬಳಿಕ ವೃದ್ಧೆಗೂ ಗುದ್ದಿದ್ದು, ಸುಮಾರು 30 ಅಡಿಯಷ್ಟು ದೂರ ಎಳೆದೊಯ್ದಿದೆ. ಪರಿಣಾಮ ವೃದ್ಧೆ ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರ ಸಹಕಾರ ಪಡೆದು ಆಸ್ಪತ್ರೆಗೆ ರವಾನಿಸಲಾಯಿತಾದರೂ, ವೈದ್ಯರು ವೃದ್ದೆ ಸಾವನ್ನಪ್ಪಿರುವ ಕುರಿತು ಖಚಿತಪಡಿಸಿದ್ದಾರೆ. ಹರಿಹರಪುರದ ಕಾಳನಾಯಕನಕಟ್ಟೆ ಸಮೀಪ ಈ ಘಟನೆ ಘಟನೆ ನಡೆದಿದ್ದು, KA 03 MC 6358 ನೋಂದಣಿಯ ಮಾರುತಿ 800 ಕಾರು ಎಂದು ಗುರುತಿಸಲಾಗಿದೆ. ಕೊಪ್ಪ ತಾಲ್ಲೂಕಿನ ಹರಿಹರಪುರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.