Categories
ಚಿಕ್ಕಮಗಳೂರು

ಅಗಲಿದ ಜೆಡಿಎಸ್ ನಾಯಕ ಹೆಚ್.ಟಿ ರಾಜೇಂದ್ರ‌ರವರಿಗೆ ಶ್ರದ್ಧಾಂಜಲಿ ಸಭೆ

ಅಗಲಿದ ಜೆಡಿಎಸ್ ನಾಯಕ ಹೆಚ್.ಟಿ ರಾಜೇಂದ್ರ‌ರವರಿಗೆ ಶ್ರದ್ಧಾಂಜಲಿ ಸಭೆ

* ಮಲೆನಾಡಿ ಅಪರೂಪದ ರಾಜಕಾರಣಿ ಹೆಚ್.ಟಿ ರಾಜೇಂದ್ರ
* ಚಿಕ್ಕಮಗಳೂರು,ಎನ್ ಆರ್ ಪುರದಲ್ಲಿ ಶ್ರದ್ಧಾಂಜಲಿ ಸಭೆ

NAMMMUR EXPRESS NEWS
ಚಿಕ್ಕಮಗಳೂರು: ಜಾತ್ಯತೀತ ಜನತಾದಳದ ರಾಜ್ಯ ಉಪಾಧ್ಯಕ್ಷ ಹಾಗೂ ಮಲೆನಾಡಿನ ಅಪರೂಪದ ರಾಜಕೀಯ ದುರೀಣ ಹೆಚ್.ಟಿ.ರಾಜೇಂದ್ರ ಅವರ ನಿಧನಕ್ಕೆ ಸೋಮವಾರ ನಗರದ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಮುಖಂಡರು ಪುಷ್ಪನಮನ ಸಲ್ಲಿಸಿ ಶ್ರದ್ದಾಂಜಲಿ ಅರ್ಪಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್‌ ಅಜಿತ್‌ಕುಮಾರ್, ಮಾಜಿ ಅಧ್ಯಕ್ಷ ಮಂಜಪ್ಪ, ನಗರಸಭೆ ಸದಸ್ಯ ಗೋಪಿ, ಎಸ್ಸಿ ಎಸ್ಪಿ ವಿಭಾಗದ ಜಿಲ್ಲಾಧ್ಯಕ್ಷ ದೇವಿಪ್ರಸಾದ್, ನಗರ ಪ್ರಧಾನ ಕಾರ್ಯದರ್ಶಿ ಸಿ.ಕೆ. ಮೂರ್ತಿ, ಮುಖಂಡರುಗಳಾದ ನಾಗಣ್ಣ, ಚಂದ್ರಶೇಖರ್, ಆನಂದೇಗೌಡ, ಇರ್ಷಾದ್, ಜಾಕರೀಯಾ ಜಾಕೀರ್, ದೇವರಾಜ್‌ ಅರಸ್, ರತ್ನ ಇದ್ದರು.

* ಹೆಚ್.ಟಿ ರಾಜೇಂದ್ರ ಅಗಲಿಕೆ ಕ್ಷೇತ್ರಕ್ಕೆ ಹಾಗೂ ಜೆಡಿಎಸ್‌ಗೆ ಅಪಾರ ನಷ್ಟ
ಎನ್.ಆರ್ ಪುರ: ನಗರದಲ್ಲಿ ಜೆಡಿಎಸ್ ಎನ್.ಆರ್ ಪುರ ತಾಲೂಕು ವತಿಯಿಂದ ಹೆಚ್.ಟಿ ರಾಜೇಂದ್ರರಿಗೆ ಶ್ರದ್ಧಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ಶೃಂಗೇರಿ ಕ್ಷೇತ್ರದಲ್ಲಿ ಜೆಡಿಎಸ್‌ ನೆಲೆಕಳೆದು ಕೊಂಡ ಸಂದರ್ಭದಲ್ಲಿ 2004ರಲ್ಲಿ ಸ್ಪರ್ಧಿಸಿ ಪಕ್ಷಕ್ಕೆ ಭದ್ರನೆಲೆ ಕಲ್ಪಿಸಿದರು. ರಾಜೇಂದ್ರ ಅವರು ಶಾಸಕರಾಗಿದ್ದರೆ ಕ್ಷೇತ್ರದ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿ ಕಾಣುತ್ತಿತ್ತು. ಈ ರೀತಿ ಜನಪರ ಕಾಳಜಿ ಇರುವವರು ಶಾಸಕರಾಗಿ ಆಯ್ಕೆಯಾಗಿದ್ದರೆ ಅಭಿವೃದ್ಧಿ ಪರ್ವ ಆರಂಭವಾಗುತ್ತಿತ್ತು. ಕ್ಷೇತ್ರದ ಅಭಿವೃದ್ಧಿ ಬಗ್ಗೆ ದೂರದೃಷ್ಟಿ ಹೊಂದಿದ್ದ ರಾಜಕಾರಣಿಯನ್ನು ಜನರು ಕೈಬಿಟ್ಟರು. ಅವರ ಯೋಚನೆ, ಚಿಂತನೆಗಳಿಂದ 2008ರಲ್ಲಾದರೂ ಅವರು ಶಾಸಕರಾಗಬೇಕಿತ್ತು. ಆದರೆ, ನ್ಯಾಯಯುತವಾಗಿ ಬದುಕುವವರಿಗೆ ಜನರು ಕೈಹಿಡಿಯಲಿಲ್ಲ. ಜೆಡಿಎಸ್‌ ಇರುವವರೆಗೆ ಪಕ್ಷದ ಕಚೇರಿಯಲ್ಲಿ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್‌ನ ಅಧ್ಯಕ್ಷರು ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.