Categories
ಚಿಕ್ಕಮಗಳೂರು

ಪ್ರವಾಸಕ್ಕೆ ಬಂದ ಇಬ್ಬರು ಯುವಕರು ಭದ್ರಾ ನದಿಯಲ್ಲಿ ಮುಳುಗಿ ಸಾವು

ಪ್ರವಾಸಕ್ಕೆ ಬಂದ ಇಬ್ಬರು ಯುವಕರು ಭದ್ರಾ ನದಿಯಲ್ಲಿ ಮುಳುಗಿ ಸಾವು

* ಪ್ರವಾಸಕ್ಕೆ ಬಂದಿದ್ದ ರಾಜಸ್ಥಾನ್ ಮೂಲದ 12 ಯುವಕರು
* ಮುಳುಗು ತಜ್ಞ ಭಾಸ್ಕರ್‌ರಿಂದ ಮೃತದೇಹಗಳಿಗೆ ಶೋಧ

NAMMUR EXPRESS NEWS
ಕಳಸ: ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಪ್ರವಾಸಿಗರು ಜೀವ ಕಳೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಜೆ ಮೆಟ್ಟಿಲು ತೂಗು ಸೇತುವೆ ಬಳಿ ನಡೆದಿದೆ.
ರಾಜಸ್ಥಾನದಿಂದ ಎರಡು ಕಾರಿನಲ್ಲಿ ಪ್ರವಾಸಕ್ಕೆ ಬಂದಿದ್ದ 12 ಜನ ಸ್ನೇಹಿತರು ಕಳಸ ತಾಲೂಕಿನ ಸಂಜೆ ಮೆಟ್ಟಿಲು ಸೇತುವೆ ಬಳಿ ಈಜಲು ತೆರಳಿದ್ದರು. ಈ ವೇಳೆ ಜಗದೀಶ್ (33) ಹಾಗೂ ಚೋಟಾ ಸಿಂಗ್ (28) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮಲ್ಪೆಯ ಮುಳುಗು ತಜ್ಞ ಭಾಸ್ಕರ್ ಮೃತದೇಹಗಳಿಗೆ ಶೋಧ ಕಾರ್ಯ ನಡೆಸುತ್ತಿದ್ದು, ಸದ್ಯ ಜಗದೀಶ್ ಮೃತದೇಹ ಮಾತ್ರ ಪತ್ತೆಯಾಗಿದೆ. ಚೋಟಾ ಸಿಂಗ್ ಮೃತದೇಹ ಪತ್ತೆಯಾಗದ ಕಾರಣ ಶೋಧ ಕಾರ್ಯ ಮುಂದುವರಿಸಲಾಗಿದ್ದು, ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.