ನಮಾಜಿಗೆ ಹೋದವರ ಲಾರಿಯಲ್ಲಿದ್ದ 30 ಲಕ್ಷ ಕಳ್ಳತನ ಮಾಡಿದ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು
– ತೀರ್ಥಹಳ್ಳಿ ಪೋಲೀಸರ ಈ ಕಾರ್ಯಕ್ಕೆ ಇಡೀ ತೀರ್ಥಹಳ್ಳಿ ಜನತೆ ಶ್ಲಾಘನೆ
– ಆರೋಪಿತರಿಂದ 29 ಲಕ್ಷ ನಗದು, ಅಶೋಕ ಲೈಲ್ಯಾನ್ಸ್ ವಾಹನ, ಟಯೋಟಾ ಕಾರು,ಸೇರಿ ಒಟ್ಟು 45 ಲಕ್ಷ ಮೌಲ್ಯದ ಹಣ ಮತ್ತು ವಾಹನವನ್ನು ಪೋಲೀಸರ ವಶಕ್ಕೆ
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆಯಲ್ಲಿ ಲಾರಿಯಲ್ಲಿ ಇದ್ದ ಸುಮಾರು 30 ಲಕ್ಷ ಹಣವನ್ನು ಕಳ್ಳರು ದೋಚಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದ್ದು, ಶಿವಮೊಗ್ಗ ಕಡೆಯಿಂದ ಮಂಗಳೂರು ಕಡೆಗೆ ಹೊರಟಿದ್ದ ಲಾರಿ ಯಲ್ಲಿದ್ದವರು ಶುಕ್ರವಾರ ನಮಾಜು ಸಮಯ ಆದ್ದರಿಂದ ರಂಜದಕಟ್ಟೆ ಮಸೀದಿ ಬಳಿ ಲಾರಿ ನಿಲ್ಲಿಸಿ ನಮಾಜು ಮಾಡಲು ಹೋಗಿದ್ದಾರೆ. ಈ ವೇಳೆ ಕಳ್ಳರು ಕೈಚಳಕ ತೋರಿಸಿದ್ದು ಲಾರಿಯನ್ನು ಮುಂದೆ ತೆಗೆದುಕೊಂಡು ಹೋಗಿ ನಿಲ್ಲಿಸಿ ಅದರಲ್ಲಿದ್ದ ಹಣ ದೋಚಿದ್ದಾರೆ. ನಮಾಜು ಮಾಡಿ ಬಂದು ನೋಡಿದಾಗ ಲಾರಿ ನಾಪತ್ತೆಯಾಗಿದ್ದರಿಂದ ಲಾರಿ ಮಾಲೀಕ ಗಾಬರಿ ಯಾಗಿ ನೋಡಿದಾಗ ಲಾರಿ ಸ್ವಲ್ಪ ಮುಂದೆ ಹೋಟೆಲ್ ಬಳಿ ನಿಲ್ಲಿಸಲಾಗಿದೆ. ಲಾರಿ ಬಳಿ ನೋಡಿದಾಗ ಹಣ ನಾಪತ್ತೆಯಾಗಿತ್ತು. ಹಣವನ್ನು ತೆಗೆದುಕೊಂಡು ಗೂಡ್ಸ್ ವಾಹನವನ್ನು ಬಿಳಲುಕೊಪ್ಪ ಬಳಿ ಬಿಟ್ಟು ಪರಾರಿಯಾಗಿದ್ದರು. ಕಳೆದುಕೊಂಡವರು ತೀರ್ಥಹಳ್ಳಿ ಠಾಣೆಗೆ ದೂರು ನೀಡಿದ್ದು,ತಕ್ಷಣ ಪೊಲೀಸರು ತನಿಖೆ ಶುರು ಮಾಡಿದ್ದರು.
ಅದರಂತೆ ಇಂದು ಖತರ್ನಾಕ್ ಕಳ್ಳರು ಯಾರೆಂದು ತಿಳಿದು ಬಂದಿದ್ದು ಹಣ ಕಳವು ಆದ 12 ಗಂಟೆಯೊಳಗೆ ತೀರ್ಥಹಳ್ಳಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿ ಲಕ್ಷಗಟ್ಟಲೆ ಹಣವನ್ನು ವಶಕ್ಕೆ ಪಡೆದಿರುವುದಲ್ಲದೇ ತೀರ್ಥಹಳ್ಳಿ ಪೊಲೀಸರು ಅವರ ಕರ್ತವ್ಯ ನಿಷ್ಠೆಯನ್ನು ತೋರಿಸಿಕೊಟ್ಟಿದ್ದಾರೆ.
ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಸಿಕ್ಕಿದ್ದು ಇವರು ಹೊನ್ನಾಳಿಯವರು ಎಂದು ತಿಳಿದು ಬಂದಿದೆ. ಆರೋಪಿತರಿಂದ 29 ಲಕ್ಷ ನಗದು, ಅಶೋಕ ಲೈಲ್ಯಾನ್ಸ್ ವಾಹನ, ಟಯೋಟಾ ಕಾರು,ಸೇರಿ ಒಟ್ಟು 45 ಲಕ್ಷ ಮೌಲ್ಯದ ಹಣ ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಿನಲ್ಲಿ ತೀರ್ಥಹಳ್ಳಿ ಪೋಲೀಸರ ಈ ಕಾರ್ಯಕ್ಕೆ ಇಡೀ ತೀರ್ಥಹಳ್ಳಿ ಜನತೆ ಶ್ಲಾಘಿಸಿದ್ದಾರೆ.
ಪತ್ತೆ ಕಾರ್ಯದಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಸಿಪಿಐ ಇಮ್ರಾನ್ ಬೇಗ್, ಪಿಎಸ್ ಐ ಶಿವನಗೌಡ, ಲೋಕೇಶಪ್ಪ, ಲಿಂಗೇಗೌಡ, ರಾಜಶೇಖರ್, ರವಿ, ಪ್ರದೀಪ್, ಸುರೇಖಾ, ದೀಪಕ್, ಪ್ರಾಶ್ ಮೊಯ್ದ್ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ಮಂಜುನಾಥ್, ರಾಘವೇಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.