Categories
ಚಿಕ್ಕಮಗಳೂರು

ಶೃಂಗೇರಿ ಕ್ಷೇತ್ರದಲ್ಲಿ ನಿಲ್ಲದ ಕಾಡಾನೆ ಹಾವಳಿ,ಅಪಾರ ಪ್ರಮಾಣದ ಬೆಳೆ ನಾಶ

ಶೃಂಗೇರಿ ಕ್ಷೇತ್ರದಲ್ಲಿ ನಿಲ್ಲದ ಕಾಡಾನೆ ಹಾವಳಿ,ಅಪಾರ ಪ್ರಮಾಣದ ಬೆಳೆ ನಾಶ

* 200 ಕ್ಕೂ ಅಧಿಕ ಅಡಿಕೆ ಮರ ಸಂಪೂರ್ಣ ನಾಶ
* ಆನೆಗಳ ಕಾಟದಿಂದ ಕಂಗಾಲದ ಜನ,ಶಾಲೆಗೆ ಹೋಗಲು ವಿದ್ಯಾರ್ಥಿಗಳ ಹಿಂದೇಟು

NAMMMUR EXPRESS NEWS
ಕೊಪ್ಪ: ಶೃಂಗೇರಿ ಕ್ಷೇತ್ರದಾದ್ಯಂತ ಕಾಡಾನೆಗಳ ಕಾಟ ಕಡಿಮೆಯಾಗುವಂತೆ ಕಾಣಿಸುತ್ತಿಲ್ಲ ಮೊನ್ನೆಯಷ್ಟೇ ಎನ್ ಆರ್ ಪುರ ತಾಲೂಕಿನ ಮಡಬೂರಿನ ಬಳಿ ಎರಡನೇ ಕಾಡಾನೆಯನ್ನು ಸೆರೆಹಿಡಿಯಲಾಗಿತ್ತು. ಕೊಪ್ಪ ಭಾಗದಲ್ಲಿ ಒಂದು ಕಾಡಾನೆ ಒಡಾಡುತ್ತಿದ್ದು ರೈತರ ತೋಟಗಳಿಗೆ ನುಗ್ಗಿ ಬೆಳನಾಶ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು,ಆದರೆ ಈಗ ಕೊಪ್ಪ ತಾಲೂಕಿನ ಜಯಪುರ ಸಮೀಪದ ಇಟ್ಟಿಗೆ ಸೀಗೋಡಿನ ಸರ್ಕಾರಿ ಶಾಲೆಯ ಹಿಂಭಾಗದ ಕಾಫಿ ತೋಟದಲ್ಲಿ ಎರಡು ಆನೆಗಳು ಓಡಾಡುತ್ತಿರುವ ವೀಡಿಯೋ ವೈರಲ್ ಆಗಿತ್ತು,ಈಗ ಈ ಆನೆಗಳು ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿರುವ ಕಾಡಾನೆಗಳು ಸುಮಾರು 200 ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಸಂಪೂರ್ಣ ನಾಶ ಮಾಡಿದೆ ಎಂದು ರೈತರು ಮಾಹಿತಿ ನೀಡಿದ್ದಾರೆ.
ತಾಲೂಕಿನ ಲೋಕನಾಥಪುರ ಹಾಗೂ ಕೋಣಂಬಿ ಗ್ರಾಮಗಳಿಗೆ ಕಳೆದೊಂದು ವರ್ಷದಿಂದ ಕಾಡಾನೆಗಳು ದಾಳಿ ಮಾಡುತ್ತಿದ್ದು,ಕಳೆದ 30 ದಿನದ ಅಂತರದಲ್ಲಿ ಕೋಣಂಬಿ ಗುರುಪ್ರಸಾದ್ ಎಂಬುವರ ತೋಟಕ್ಕೆ 5 ಬಾರಿ,ಶ್ರೀಕರ ಎಂಬುವರ ತೋಟಕ್ಕೆ 4 ಬಾರಿ,ರವೀಶ್ ಎಂಬುವರ ತೋಟಕ್ಕೆ 2 ಬಾರಿ,ನಾಗರಾಜ್ ರವರ ತೋಟಕ್ಕೆ ಒಂದು ಬಾರಿ,ಪಕ್ಕದ ಊರಿನ ಪರಮೇಶ್ವರ್ ಎಂಬುವರ ಕೆರೆಯನ್ನು ಸಂಪೂರ್ಣ ಹಾಳು ಮಾಡಿದ್ದು, ವೀರಪ್ಪನವರ ಅಡಿಕೆ ತೋಟಗಳಿಗೆ ದಾಳಿ ಮಾಡಿ ಸುಮಾರು 200 ಕ್ಕೂ ಅಧಿಕ ಅಡಿಕೆ ಮರಗಳು ಸಂಪೂರ್ಣ ನಾಶವಾಗಿದೆ. ಕುಡಿಯಲು ಗ್ರಾವಿಟಿ ನೀರನ್ನು ಅವಲಂಬಿಸೋ ಗ್ರಾಮಸ್ಥರು ಈಗ ನೀರಿಲ್ಲದೇ ಕಷ್ಟಪಡುವಂತಾಗಿದೆ,ನೀರಿಗಾಗಿ ಹಾಕಿದ್ದ ಪೈಪ್ ಲೈನ್‌ಗಳು ಸಂಪೂರ್ಣ ತಂಡಾಗಿದೆ ಹಾಗೂ ಗ್ರಾವಿಟಿ ನೀರು ಸಂಪೂರ್ಣ ಕಲುಷಿತಗೊಂಡಿದೆ.
ಹೆಚ್ಚಾಗಿ ಕೂಲಿಕಾರ್ಮಿಕರೇ ವಾಸಿಸುತ್ತಿರುವ ಈ ಭಾಗದಲ್ಲಿ ಈಗ ಜನ ಓಡಾಡಲೂ ಭಯಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಗಳಿಗೆ ಹೋಗಲು ಮಕ್ಕಳು ಭಯಪಟ್ಟು ಮನೆಯಲ್ಲಿಯೇ ಕೂರುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಕೂಡ ಯಾವೊಬ್ಬ ಸರ್ಕಾರಿ ಪ್ರತಿನಿಗಳು,ಅಧಿಕಾರಿಗಳಾಗಲಿ ನಮ್ಮನ್ನ ಬಂದು ವಿಚಾರಿಸಿಲ್ಲ ಹೀಗಿರುವಾಗ ಜನರಿಗೆ ಸರ್ಕಾರಕ್ಕೆ,ಅಧಿಕಾರಿಗಳಿಗೆ ನಮ್ಮ ಮೇಲೆ ಕಾಳಜಿ ಇದೆಯೇ ಎಂಬುದೇ ಪ್ರಶ್ನೆಯಾಗಿದೆ ಎಂದು ಅಲ್ಲಿನ ಗ್ರಾಮಸ್ಥರು ಹೇಳುತ್ತಿದ್ದಾರೆ.
ಕಾಡು ಪ್ರಾಣಿಗಳ ದಾಳಿಯಿಂದ ಶಾಶ್ವತ ಪರಿಹಾರ ಕಲ್ಪಿಸುವಂತೆ ಹಾಗೂ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.