Categories
ಕರಾವಳಿ ಮಲ್ನಾಡ್

ಅಡಕೆ ಬೆಲೆ ಹೆಚ್ಚಳ..?!

ಅಡಕೆ ಬೆಲೆ ಹೆಚ್ಚಳ..?!
– ಕಳಪೆ ಗುಣಮಟ್ಟದ ಅಡಕೆ ಆಮದು ಶಾಶ್ವತ ಬಂದ್ ಸಾಧ್ಯತೆ
– ಕರ್ನಾಟಕ ಅತೀ ಹೆಚ್ಚು ಅಡಿಕೆ ಬೆಳೆಯುವ ರಾಜ್ಯ
– ಆಸಿಯಾನ್ ರಾಷ್ಟ್ರಗಳ ಗುಣಮಟ್ಟವಿಲ್ಲದ ಅಡಕೆ ನಿಲ್ಲುತ್ತಾ?

NAMMUR EXPRESS NEWS
ಬೆಂಗಳೂರು: ಅಡಕೆ ಸೇರಿ ಕಳಪೆ ಗುಣಮಟ್ಟದ ಉತ್ಪನ್ನಗಳು ಪದೇಪದೆ ಭಾರತದ ಮಾರುಕಟ್ಟೆಗೆ ಆಮದಾಗುತ್ತಿರುವ ಹಿನ್ನೆಲೆಯಲ್ಲಿ ಆಸಿಯಾನ್ ರಾಷ್ಟ್ರಗಳ ಗುಣಮಟ್ಟವಿಲ್ಲದ ಅಡಕೆ ಶಾಶ್ವತ ಬಂದ್‌ಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಆ ರಾಷ್ಟ್ರಗಳೊಂದಿಗಿನ ಅಮದು ಒಪ್ಪಂದವನ್ನು ಮರು ಪರಿಶೀಲನೆ ನಡೆಸಲು ತೀರ್ಮಾನಿಸಿದೆ. ಒಂದು ವೇಳೆ ಅಡಕೆ ಆಮದು ನಿಂತಲ್ಲಿ ಅಡಕೆ ಬೆಲೆ ಹೆಚ್ಚಳ ಆಗುವ ಸಾಧ್ಯತೆ ಇದೆ.
2020-21ನೇ ಸಾಲಿನಲ್ಲಿ 10 ವರ್ಷಗಳಲ್ಲಿ ಅಡಕೆ, ಆಹಾರ ಉತ್ಪನ್ನ ಕಾಡುತ್ಪತ್ತಿ ವಸ್ತುಗಳು ಗುಣಮಟ್ಟವಿಲ್ಲದೆ ಭಾರತದ ಮಾರುಕಟ್ಟೆ ಪ್ರವೇಶಿಸಿರುವ ಬಗ್ಗೆ ವಾಣಿಜ್ಯ ಸಚಿವಾಲಯ ವರದಿ ಪಡೆದು ಎಚ್ಚರಿಕೆ ನೀಡಿತ್ತು. ಆದರೆ ನಂತರ ಆಹಾರ ಉತ್ಪನ್ನ ಕೆಲವು ಕಾಡುತ್ಪತ್ತಿ ಉತ್ಪನ್ನ ಹೊರತುಪಡಿಸಿ ಆಡಕೆ ಶೇ.70 ಕಳಪೆ ಗುಣಮಟ್ಟ ಹೊಂದಿರುವುದನ್ನು ಪತ್ತೆ ಮಾಡಿದ ವಾಣಿಜ್ಯ ಸಚಿವಾಲಯ ಮುಂದಿನ ಆರ್ಥಿಕ ವರ್ಷದಿಂದ ಅಡಕೆ ಆಮದು ಶಾಶ್ವತ ಬಂದ್ ಮಾಡುವ ಬಗ್ಗೆ ಚಿಂತನೆ ನಡೆಸಿದೆ. ಈ ಮೂಲಕ ಭಾರತದ ದೇಸಿ ಅಡಕೆ ಇನ್ನುಮುಂದೆ ಭಾರತದ ಅಡಕೆ ಮಾರುಕಟ್ಟೆಯನ್ನು ಪೂರ್ಣಪ್ರಮಾಣದಲ್ಲಿ ನಿಯಂತ್ರಿಸಬಹುದಾದ ಮುನ್ಸೂಚನೆ ಲಭ್ಯವಾಗಿದೆ. ಭಾರತ-ಆಸಿಯಾನ್ (ದಕ್ಷಿಣ ಕೊರಿಯಾ, ಸಿಂಗಾಪುರ, ಮಲೇಷ್ಯಾ) ಒಪ್ಪಂದದಿಂದ ಈ ರಾಷ್ಟ್ರಗಳಿಂದ
ಅಮದಾಗುವ ವಸ್ತು, ಕಳಪೆ ಗುಣಮಟ್ಟದ ಉತ್ಪನ್ನಗಳ 2022-2025ರ ಮಾರ್ಚ್‌ವರೆಗಿನ ಪಟ್ಟಿ ನೀಡುವಂತೆ ವಾಣಿಜ್ಯ ಸಚಿವಾಲಯ ಮಾಹಿತಿ ಕೇಳಿದೆ. ಭಾರತ-ಅಸಿಯಾನ್ ಒಪ್ಪಂದ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾ, ಸಿಂಗಾಪುರ, ಮಲೇಷ್ಯಾ, ಥಾಯ್ಲೆಂಡ್, ಕಾಂಬೋಡಿಯಾದ ಕಡಿಮೆ ಗುಣಮಟ್ಟದ ಕಾಡುತ್ಪತ್ತಿ ಉತ್ಪನ್ನ ಸಹಿತ ಅಡಕೆ, ಯಥೇಚ್ಛವಾಗಿ ಮಯನ್ನಾರ್ ನಿಂದ ಬಾಂಗ್ಲಾ, ನೇಪಾಳ, ಶ್ರೀಲಂಕಾ ಮೂಲಕ ಭಾರತಕ್ಕೆ ಸಕ್ರಮವಾಗಿ ರಫ್ತಾಗುತ್ತಿದ್ದರಿಂದ ಭಾರತದ ಗುಣಮಟ್ಟದ ದೇಸಿ
ಅಡಕೆ ಬೇಡಿಕೆ ಕಳೆದುಕೊಂಡಿತ್ತು.

ಗುಣಮಟ್ಟದ ಸಂಶಯಕ್ಕೆ ಕಾರಣವೇನು?:

ಎಫ್‌ಟಿಎ ನೆಪವಾಗಿರಿಸಿಕೊಂಡು ಆಸಿಯಾನ್ ರಾಷ್ಟ್ರಗಳು ಭಾರತಕ್ಕೆ ಕಡಿಮೆ ಡಬ್ಲ್ಯುಟಿಒ ನಿಯಮದಂತೆ, ಆರೋಗ್ಯಕ್ಕೆ ಹಾನಿಯಾಗುವ ಕಳಪೆ ಗುಣಮಟ್ಟದ ಉತ್ಪನ್ನಗಳ ಆಮದು ನಿಷೇಧಿಸುವುದು ಆಯಾ ರಾಷ್ಟ್ರಗಳ ವಿವೇಚನೆಗೆ ಬಿಟ್ಟಿದ್ದು. ಆಸಿಯಾನ್ ರಾಷ್ಟ್ರಗಳಿಂದ ಭಾರತಕ್ಕೆ ಆಮದಾಗುವ ವಸ್ತು ಆರೋಗ್ಯಕ್ಕೆ ಹಾನಿ ಮಾಡುವ ಕಳಪೆ ಗುಣಮಟ್ಟದ್ದು ಎಂಬುದನ್ನು ನಿರೂಪಿಸಬೇಕಾಗುತ್ತದೆ.
ಭಾರತ ಇತ್ತೀಚೆಗೆ ಕೈಗೊಂಡ ನಿರ್ಧಾರದಂತೆ ಥಾಯ್ಲೆಂಡ್, ಕಾಂಬೋಡಿಯಾ, ವಿಯೆಟ್ನಾಂ, ಆಸಿಯಾನ್ ರಾಷ್ಟ್ರಗಳಿಂದ ಭಾರತಕ್ಕೆ ಅಡಕೆ ಆಮದಿಗೆ ಗರಿಷ್ಠ ಶೇ.42ರವರೆಗೆ ತೆರಿಗೆ ಪಾವತಿಸಬೇಕಾಗುತ್ತದೆ. ಜತೆಗೆ ಅಡಕೆ ಅಮದಾಗುವ ಎಲ್ಲ ಬಂದರುಗಳಲ್ಲಿ ಕಳ್ಳಸಾಗಾಣಿಕೆ ತಡೆಗೆ
ಕ್ರಮ ಕೈಗೊಂಡಿತ್ತು. ಗರಿಷ್ಠ ತೆರಿಗೆ ಪಾವತಿಸಿಯೂ ಭಾರತಕ್ಕೆ ಅಡಕೆ ಅಮದಾಗುತ್ತಿರುವುದರಿಂದ ಅಮದು ಉತ್ಪನ್ನಗಳ ಗುಣಮಟ್ಟದ ಮೇಲೆ ಸಂಶಯ ಹೆಚ್ಚಾಗಿದೆ. ಇದೇ ಕಾರಣಕ್ಕೆ ಆಮದು ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗಾಗಿ ಸರ್ಕಾರ ಕ್ರಮ ಕೈಗೊಂಡಿದೆ.
ಅಡಕೆ ಬೇಕಾದಷ್ಟು ಉತ್ಪಾದನೆ ನಮ್ಮಲ್ಲೇ ಇದೆ. ಕೇಂದ್ರ ಸರ್ಕಾರದಿಂದ ಆಸಿಯಾನ್ ರಾಷ್ಟ್ರಗಳೊಂದಿಗಿನ ಆಮದು ಒಪ್ಪಂದ ಮರು ಪರಿಶೀಲನೆ ನಡೆಯುತ್ತಿದ್ದು ಅಮದಾಗುವ ಕಳಪೆ ಗುಣಮಟ್ಟದ ಉತ್ಪನ್ನಗಳ ಪಟ್ಟಿಯಲ್ಲಿ ಅಡಕೆ ಇದೆ. ಸದ್ಯಕ್ಕೆ ಭಾರತದಲ್ಲಿ ಬೇಡಿಕೆಯಷ್ಟೇ ಆಡಕೆ ಉತ್ಪಾದನೆ ಇದೆ. ಕಳಪೆ ಗುಣಮಟ್ಟದ ಹಿನ್ನೆಲೆಯಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳು ಆಸಿಯಾನ್ ರಾಷ್ಟ್ರದ ಅಡಕೆ ಸಹಿತ ಕೆಲವು ಕಾಡುತ್ಪತ್ತಿ ಉತ್ಪನ್ನಗಳನ್ನು ಕಪ್ಪು ಪಟ್ಟಿಯಲ್ಲಿ ಸೇರಿಸಿದೆ. ಭಾರತ ಇದೇ ಹಾದಿಯಲ್ಲಿ ಕ್ರಮ ಕೈಗೊಂಡರೆ ಅಸಿಯಾನ್ ರಾಷ್ಟ್ರಗಳಿಂದ ಅಡಕೆ ಆಮದು ಸಂಪೂರ್ಣ ಸ್ಥಗಿತ ಗೊಳ್ಳಲಿದೆ. ಈವರೆಗೆ ದೇಶದ ಜಿಡಿಪಿಗೆ ದಕ್ಷಿಣ ಭಾರತದ ಕರ್ನಾಟಕ, ಆಂಧ್ರ, ತೆಲಂಗಾಣ, ಕೇರಳ, ತ.ನಾಡಿನ ಕೊಡುಗೆ ಗಣನೀಯ ಏರಿಕೆ ಕಂಡಿದ್ದು, ಅಡಕೆ ಅಮದು ಶಾಶ್ವತ ಬಂದ್ ಆದರೆ ಅಡಕೆ ಬೆಳೆಯುವ ಈ ರಾಜ್ಯಗಳಿಂದ ಬಿಡಿಪಿ ಹೆಚ್ಚಳಕ್ಕೆ ಕೊಡುಗೆ ಸಾಧ್ಯತೆಯನ್ನು ಇಎಸಿ-ಪಿಎಂ ವರದಿಯಲ್ಲಿ ಉಲ್ಲೇಖಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.