ಕೆಡಿಪಿ ಸಭೆಯಲ್ಲಿ ಶಾಸಕ ಹಾಗೂ ಪರಿಷತ್ ಸದಸ್ಯರ ನಡುವೆ ವಾಕ್ ಸಮರ
* ಉಸ್ತುವಾರಿ ಸಚಿವರ ಬದಲಾಗಿ ಪ್ರತಿಯೊಂದಕ್ಕೂ ಉತ್ತರಿಸುತ್ತಿದ್ದ ಶಾಸಕ ತಮ್ಮಯ್ಯ
* ಶಾಸಕರ ಸಮಾಜಾಯಿಷಿ ನೀಡಿದರು ಕೇಳದ ಸಿ.ಟಿ ರವಿ
NAMMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಬರೀ ಗಲಾಟೆ ಮತ್ತು ಗದ್ದಲ ನಡೆದಿದೆ. ಮೊದಲಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಮತ್ತು ಪತ್ರಕರ್ತರ ನಡುವೆ ಜಟಾಪಟಿ ಆಮೇಲೆ ಚಿಕ್ಕಮಗಳೂರು ಶಾಸಕ ಹೆಚ್. ಡಿ ತಮ್ಮಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಧ್ಯೆ ಮಾತಿನ ಯುದ್ಧ. ಈ ಸಭೆಯ ಅಧ್ಯಕ್ಷರು ಉಸ್ತುವಾರಿ ಸಚಿವರಾಗಿದ್ದರೂ ಪ್ರತಿಯೊಂದಕ್ಕೂ ತಮ್ಮಯ್ಯ ಉತ್ತರ ಕೊಡಲಾರಂಭಿಸಿದ್ದು ಮತ್ತು ಸಭಾಧ್ಯಕ್ಷನಂತೆ ವರ್ತಿಸಿದ್ದು ರವಿಯವರಿಗೆ ಸರಿ ಕಂಡಿಲ್ಲ, ಅವರು ಎದ್ದುನಿಂತು ಜಾರ್ಜ್ ಅವರ ಕಡೆ ನೋಡುತ್ತ ಸಭಾಧ್ಯಕ್ಷರೇ, ನೀವು ಮಾತಾಡಿ, ಸಭೆ ನಿಮ್ಮ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ ಎನ್ನುತ್ತಾರೆ. ತಮ್ಮಯ್ಯ ಏನೆಲ್ಲ ಸಮಜಾಯಿಷಿ ನೀಡಲು ಪ್ರಯತ್ನಿಸಿದರೂ ಸಿ.ಟಿ ರವಿ ಕೇಳಲಿಲ್ಲ.