ಪಟಮಕ್ಕಿ ರತ್ನಾಕರ್ ಅವರ ಕುರಿತಾದ ಪುಸ್ತಕ ಬಿಡುಗಡೆ ಸಮಾರಂಭ
– ಮೇ 18 ರಂದು ಶಾಂತವೇರಿ ಗೋಪಾಲಗೌಡ ರಂಗಮಂದಿರ, ಸೊಪ್ಪಗುಡ್ಡೆ, ತೀರ್ಥಹಳ್ಳಿಯಲ್ಲಿ
– ಸಂಜೆ 5.00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಿಮಿಕ್ರಿ ಗೋಪಿ ಅವರಿಂದ ಮಿಮಿಕ್ರಿ
NAMMUR EXPRESS NEWS
ಮಾನವೀಯತೆಯ ಗಣಿ, ಅಪರೂಪದ ರಾಜಕಾರಣಿಯಾದ ತೀರ್ಥಹಳ್ಳಿ ಕ್ಷೇತ್ರದ ಮಾಜಿ ಶಾಸಕ ದಿ॥ ಪಟಮಕ್ಕಿ ರತ್ನಾಕರ್ ಅವರ ಕುರಿತಾದ ಪುಸ್ತಕ ಬಿಡುಗಡೆ ಸಮಾರಂಭ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ದಿನಾಂಕ: 18.05.2025ರ ಭಾನುವಾರ ಸಂಜೆ 4.00 ಗಂಟೆ ಶ್ರೀ ಶಾಂತವೇರಿ ಗೋಪಾಲಗೌಡ ರಂಗಮಂದಿರ, ಸೊಪ್ಪಗುಡ್ಡೆ, ತೀರ್ಥಹಳ್ಳಿಯಲ್ಲಿ ಈ ಕಾರ್ಯಕ್ರಮ ನೆರವೇರಲಿದೆ.
ಈ ಸಮಾರಂಭದ ಉದ್ಘಾಟನೆಯನ್ನು ಎಸ್. ಮಧು ಬಂಗಾರಪ್ಪ ನೆರವೇರಿಸಲಿದ್ದಾರೆ. ಪುಸ್ತಕ ಬಿಡುಗಡೆಯನ್ನು ರಮೇಶ್ ಕುಮಾರ್ ರವರು ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯದಲ್ಲಿ ಸ್ವಾಮಿ ಜಿತಕಾಮಾನಂದ, ಪುಸ್ತಕದ ಅವಲೋಕನವನ್ನು ಸುಧೀರ್ ಕುಮಾರ್ ಮುರೊಳ್ಳಿ ವಾಗ್ನಿ, ಖ್ಯಾತ ವಕೀಲರು ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರಗ ಜ್ಞಾನೇಂದ್ರರವರು ವಹಿಸಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಿಮ್ಮನೆ ರತ್ನಾಕರ್, ಆರ್ ಎಂ ಮಂಜುನಾಥ ಗೌಡ, ನೈಜಲಾ ಪಟ್ಟಮಕಿ ರತ್ನಾಕರ್, ಬಿ ಸ್ವಾಮಿ ರಾವ್, ಕಲಗೋಡು ರತ್ನಾಕರ್ ಇವರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿರುತ್ತಾರೆ.
ಸಂಜೆ 5.00 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕರ್ನಾಟಕದ ಹೆಸರಾಂತ ಬಹುಬೇಡಿಕೆಯ ಮಿಮಿಕ್ರಿ (ಅನುಕರಣೆ) ಕಲಾವಿದರಾದ “ಮಿಮಿಕ್ರಿ ಗೋಪಿ” ನಡೆಸಿಕೊಡುವ ರಾಜ್ಯದ ಪ್ರಸಿದ್ಧ ವ್ಯಕ್ತಿಗಳನ್ನು ಅನುಕರಿಸುವ ಮಿಮಿಕ್ರಿ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ.
