ಪಿ.ಎಸ್.ಐ ಮೇಲೆ ಪತ್ನಿಯಿಂದಲೇ ವರದಕ್ಷಿಣೆ ಕಿರುಕುಳ ಆರೋಪ,ದೂರು..!
– 50 ಲಕ್ಷ ವರದಕ್ಷಿಣೆ ನೀಡಬೇಕೆಂದು ಪತ್ನಿ ಮೇಲೆ ಹಲ್ಲೆ ಆರೋಪ
– ಪ್ರತಿ ದೂರು ದಾಖಲಿಸಿದ ಪಿ.ಎಸ್.ಐ,ಪೋಲೀಸ್ ಠಾಣೆಯಲ್ಲಿ ಹೈಡ್ರಾಮ
NAMMUR EXPRESS NEWS
ಕಳಸ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಿತ್ಯಾನಂದ ಗೌಡ ಇವರ ಮೇಲೆ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದೆ, ಪತ್ನಿ ಆಮಿತಾ ಕಳಸ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳಸದ ಪೊಲೀಸ್ ಕ್ವಾಟರ್ಸ್‌ನಲ್ಲಿ ಜ.17ರಂದು ನನ್ನ ಪತಿಯಾದ ನಿತ್ಯಾನಂದ ಗೌಡ ಇವರು ನನ್ನ ಮೇಲೆ ಹಲ್ಲೆ ನಡೆಸಿದ್ದು, ಕೆನ್ನೆಗೆ ಹೊಡೆದು,ಕಾಲಿನಿಂದ ಒದ್ದು ರೂಮಿನಿಂದ ಹೊರ ಹಾಕಿದ್ದಾನೆ. 50 ಲಕ್ಷ ವರದಕ್ಷಿಣೆ ನೀಡಬೇಕು. ಇಲ್ಲದಿದ್ದರೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅಮಿತಾ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಪಿ.ಎಸ್.ಐ ನಿತ್ಯಾನಂದ ಗೌಡನ ಮೇಲೆ ಹಲವು ಆರೋಪಗಳು..!??
ವರದಕ್ಷಿಣೆ ಕಿರುಕುಳದ ದೂರು ನೀಡಿದ ಪತ್ನಿ ಅಮಿತಾರವರು ದೂರಿನಲ್ಲಿ ಹಲವು ಆರೋಪಗಳನ್ನು ಉಲ್ಲೇಖಿಸಿದ್ದಾರೆ. ದೂರು ನೀಡಲು ಬಂದ ಹೆಣ್ಣು ಮಕ್ಕಳ ಜತೆಯಲ್ಲಿ ಅಸಭ್ಯ ವರ್ತನೆ ಮಡುತಾನ. ಪಾಸ್‌ಪೋರ್ಟ್‌ಗೆ ಬಂದ ಮಹಿಳೆಯರ ಜತೆಯಲ್ಲಿ ಲೈಂಗಿಕ ಸಂಪರ್ಕ ಹೊಂದಲು ಬಯಸುತ್ತಾನೆ. ಈ ಹಿಂದೆ ಕಾಪು ಪೊಲೀಸ್ ಠಾಣೆಯಲ್ಲಿ ಮುಸ್ಲಿಂ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ, ಆಗ ಮುಸ್ಲಿಂಮರು ಗಲಾಟೆ ಮಾಡಿದ್ದರು, ಕೋಟ,ಬ್ರಹ್ಮಾವರ ಠಾಣೆಯಲ್ಲಿ ಮಹಿಳೆಯರಿಗೆ ನ್ಯಾಯ ಕೊಡಿಸುವುದಾಗಿ ಹೇಳಿ ಮಂಗಳೂರಿನಲ್ಲಿ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ದೂರುನಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ನಿತ್ಯಾನಂದ ಗೌಡ ಸೇರಿದಂತೆ ಮೇನಕ, ಚಂದ್ರಕಾಂತ್, ಪ್ರೇಮಾ ವಿರುದ್ದ ದೂರು ದಾಖಲಾಗಿದೆ. ಸ್ಥಳಕ್ಕೆ ಎಸ್ಪಿ ಬರುವವರೆಗೂ ಠಾಣೆಯಿಂದ ಕದಲುವುದಿಲ್ಲವೆಂದೂ ಪೋಲೀಸ್ ಠಾಣೆಯಲ್ಲೇ ಪತ್ನಿ ಅಮಿತಾ ಕುಳಿತಿದ್ದಾರೆ. ಇತ್ತ ಕಳಸ ಠಾಣೆಯಲ್ಲಿ ಹೈಡ್ರಾಮ ನಡೆದಿದ್ದು ನಿತ್ಯಾನಂದ ಗೌಡ ಕೂಡ ತನ್ನ ಪತ್ನಿಯ ವಿರುದ್ಧ ಕಳಸ ಠಾಣೆಯಲ್ಲಿಯೇ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
