Categories
ಚಿಕ್ಕಮಗಳೂರು

ಕಾರ್ಮಿಕ ಮಿತ್ರ ಬಳಗದಿಂದ ಶೃಂಗೇರಿಯಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜನೆ

ಕಾರ್ಮಿಕ ಮಿತ್ರ ಬಳಗದಿಂದ ಶೃಂಗೇರಿಯಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜನೆ

* ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಜನ್ಮದಿನದ ಪ್ರಯುಕ್ತ ಶಿಬಿರ
* ರಕ್ತದಾನಿಗಳು ವಾಟ್ಸ್‌ಆಪ್ ಗ್ರೂಪ್,ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇವರ ಸಹಯೋಗ

NAMMMUR EXPRESS NEWS
ಶೃಂಗೇರಿ: ಶ್ರೀ ಶಾರದಾ ಪೀಠ ಶೃಂಗೇರಿಯ ಜಗದ್ಗುರು ಶ್ರೀಶ್ರೀ ವಿದುಶೇಖರ ಭಾರತೀ ಸನ್ನಿಧಾನಂಗಳವರ 33 ನೇ ಜನ್ಮದಿನದ ಅಂಗವಾಗಿ ತಾಲೂಕಿನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.
ಆ.3 ರ ಭಾನುವಾರ ಶೃಂಗೇರಿ ಶ್ರೀ ಶಾರದಾ ಪೀಠದ ಸಮೀಪವಿರುವ ಶಾರದಾ ಕೃಪಾದಲ್ಲಿ ಕಾರ್ಮಿಕ ಮಿತ್ರ ಬಳಗ ಶೃಂಗೇರಿ ಹಾಗೂ ರಕ್ತದಾನಿಗಳು ವಾಟ್ಸ್ ಆಪ್ ಗ್ರೂಪ್ ಶೃಂಗೇರಿ ಮತ್ತು ಅಭಿನವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದೆ.
ಬೆಳಿಗ್ಗೆ 9 ಗಂಟೆ ಯಿಂದ ಮಧ್ಯಾಹ್ನ 2 ಘಂಟೆಯವರೆಗೆ ನಡೆಯಲಿರುವ ಶಿಬಿರವನ್ನು ಶ್ರೀಮಠದ ಫೈನಾನ್ಸ್ ಹಾಗೂ ಅಕೌಂಟ್ಸ್‌ ಜನರಲ್ ಮ್ಯಾನೇಜರ್‌ರಾಗಿರುವ ಸತೀಶ್ ಭಟ್ ಹೆಚ್ ಸಿ ಯವರು ಉದ್ಘಾಟಿಸಲಿದ್ದು, ಅಭಿನವ ವಿದ್ಯಾತೀರ್ಥ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ.ಲಕ್ಷ್ಮೀನಾರಣ್‌ಯವರು ಅಧ್ಯಕ್ಷತೆ ವಹಿಸಲಿದ್ದಾರೆ.ಉಳಿದಂತೆ ಕ ಸಾ ಪ ತಾಲೂಕು ಅಧ್ಯಕ್ಷರಾದ ಶೃಂಗೇರಿ ಸುಬ್ಬಣ್ಣ,ಕಾರ್ಮಿಕ ಮಿತ್ರ ಬಳಗದ ಪ್ರಧಾನ ಕಾರ್ಯದರ್ಶಿಯಾದ ಆನಂದ ಕಾಮ್ಲೆ,ರಕ್ತದಾನಿಗಳು ವಾಟ್ಸ್ ಆಪ್ ಗ್ರೂಪ್‌ನ ಪ್ರಶಾಂತ್ ಪೂಜಾರಿಯವರುಗಳು ಹಾಜರಿರಲಾದ್ದಾರೆ. ದಾನಗಳಲ್ಲಿ ಮಹತ್ವದ ದಾನವಾದ ರಕ್ತದಾನ ಮಾಡುವುದರ ಮೂಲಕ ಹಲವು ಜೀವ ಉಳಿಸಲು ನೆರವಾಗುವಂತೆ ಆಯೋಜಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ಆ ಮೂಲಕ ಜಗದ್ಗುರುಗಳ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಕೋರಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.