ಕೋಣಂದೂರು ಎಟಿಎಂ ಕದಿಯಲು ಯತ್ನಿಸಿದವ ಅರೆಸ್ಟ್!
– ತೀರ್ಥಹಳ್ಳಿ ತಾಲೂಕಿನ ಹಲವೆಡೆ ಮನೆ, ಬೈಕ್ ಕಳ್ಳತನ
– ತೀರ್ಥಹಳ್ಳಿ ಪೊಲೀಸರ ಕಾರ್ಯಾಚರಣೆ: ಜನರ ಮೆಚ್ಚುಗೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಕೋಣಂದೂರು ಗ್ರಾಮದಲ್ಲಿ ಮನೆ ಮತ್ತು ಬೈಕ್ ಕಳ್ಳತ ಪ್ರಕರಣಗಳು ಹಾಗೂ ಕೆನರಾ ಬ್ಯಾಂಕ್ ಎ.ಟಿ.ಎಂ. ನಲ್ಲಿ ಹಣ ಕಳುವು ಪ್ರಯತ್ನ ಮಾಡಿರುವ ಸಂಬಂದ ಪ್ರಕರಣಗಳು ದಾಖಲಾಗಿದ್ದು ಇದೀಗ ಆರೋಪಿ ಅರೆಸ್ಟ್ ಆಗಿದ್ದಾನೆ.
ಪ್ರಕರಣಗಳಲ್ಲಿ ಆರೋಪಿ ಮತ್ತು ಮಾಲು ಪತ್ತೆಗಾಗಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳು ಶಿವಮೊಗ್ಗ ಜಿಲ್ಲೆ ಅವರ ಮಾರ್ಗದರ್ಶನದಲ್ಲಿ ಶ್ರೀ ಅರವಿಂದ ಕಲಗುಂಜಿ, ಡಿವೈಎಸ್ ಪಿ ತೀರ್ಥಹಳ್ಳಿ ಉಪವಿಭಾಗರವರ ಸೂಚನೆಯಂತೆ ಒಂದು ವಿಶೇಷ ತಂಡವನ್ನು ರಚಿಸಿ ಅದರಂತೆ ತೀರ್ಥಹಳ್ಳಿ ಪೊಲೀಸ್ ಠಾಣಾ ನಿರೀಕ್ಷಕರಾದ ಇಮ್ರಾನ್ ಬೇಗ್ ಹಾಗೂ ತೀರ್ಥಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಸುಷ್ಮಾ ಆರ್ ಅವರೊಂದಿಗೆ ಸಿಬ್ಬಂದಿಗಳಾದ ಸಿ.ಹೆಚ್.ಸಿ. ಲಿಂಗೇಗೌಡ, ಪ್ರವೀಣ್ ಕುಮಾರ್, ಸಿಪಿಸಿ ಸುರೇಶ ನಾಯ್ಕ, ಮೋಹನ್, ವಿಜಯ್ ಕುಮಾರ್ ರವರನ್ನು ಒಳಗೊಂಡ ವಿಶೇಷ ತಂಡವನ್ನು ರಚನೆ ಮಾಡಿ ಆರೋಪಿಗಳನ್ನು ವಿಶೇಷ ಮಾಹಿತಿ ಆಧರಿಸಿ ಪತ್ತೆ ಹಚ್ಚಲಾಗಿದೆ.
ಸುಮಾರು 3 ತಿಂಗಳ ಹಿಂದೆ ಕೋಣಂದೂರು ಗ್ರಾಮಕ್ಕೆ ಗಾರೆ ಕೆಲಸಕ್ಕೆ ಬಂದು ಕಳ್ಳತನಗಳನ್ನು ನಡೆಸುತ್ತಿದ್ದ ಆರೋಪಿತನಾದ ಗಣೇಶ ತಂದೆ ಮಲ್ಲೇಶಪ್ಪ, 31 ವರ್ಷ, ಗಾರೆ ಕೆಲಸ, ಮಡಿವಾಳರ ಜನಾಂಗ, ವಾಸ ಕೋಟೆಹಾಳ್ ಗ್ರಾಮ, ನ್ಯಾಮತಿ ತಾಲ್ಲೂಕು, ದಾವಣಗೆರೆ ಜಿಲ್ಲೆ ಈತನನ್ನು ದಿನಾಂಕ: 31-07-2025 ರಂದು ವಶಕ್ಕೆ ಪಡೆದು ಆತನು ನೀಡಿದ ಮಾಹಿತಿಯ ಮೇರೆಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದ 2 ಮನೆ ಕಳುವು ಮತ್ತು 1 ವಾಹನ ಕಳುವು ಹಾಗೂ 01 ಬ್ಯಾಂಕ್ ಎ.ಟಿ.ಎಂ. ಕಳವು ಯತ್ನದ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಆರೋಪಿಯಿಂದ 20,000/- ರೂ ಮೌಲ್ಯದ ಬೈಕ್ ಮತ್ತು ಕಳುವು ಮಾಡಲು ಬಳಸಿದ ವಸ್ತುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ.
