Categories
ಚಿತ್ರದುರ್ಗ

ಸಿನಿಮಾ ಸ್ಟೈಲ್ ದರೋಡೆ!

ಸಿನಿಮಾ ಸ್ಟೈಲ್ ದರೋಡೆ!
– ಅಡಿಕೆ ದುಡ್ಡು ಸಿನಿಮಾ ಸ್ಟೈಲ್‌ನಲ್ಲಿ ಲೂಟಿ ಕೇಸ್!
– ಅರೋಪಿಗಳ ಬಂಧನ- 63ಲಕ್ಷ ನಗದು ರಿಕವರಿ!

NAMMUR EXPRESS NEWS
ಚಿತ್ರದುರ್ಗ: ಇಲ್ಲೊಂದು ದರೋಡೆಕೋರರ ಗ್ಯಾಂಗ್ ಸಿನಿಮೀಯ ರೀತಿಯಲ್ಲಿ ಹಣ ದರೋಡೆ ಮಾಡಿದ್ದು, ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಅಂತರ್ ಜಿಲ್ಲಾ ದರೋಡೆಕೋರರನ್ನು ಬಂಧಿಸಿದ್ದಾರೆ. ಅಲ್ಲದೆ ಬರೋಬ್ಬರಿ, 63.25ಲಕ್ಷ ನಗದು ಹಾಗೂ ಹೊಸ ಕಾರು ಮತ್ತು ಬೈಕ್‌ ವಶಪಡಿಸಿಕೊಂಡಿದ್ದಾರೆ. ಅರೋಪಿಗಳಾದ ಮಹಮದ್‌ ಷಫೀಉಲ್ಲಾ ಮತ್ತು ಸಮೀರ್ ಭಾಷಾ ಸ್ಥಳೀಯರಾಗಿದ್ದು, ಇವರಿಗೆ ಅಡಿಕೆ ವ್ಯಾಪಾರಿಯೊಂದಿಗೆ ಪರಿಚಯವಿತ್ತು. ಅವರು ಹೈದರಾಬಾದ್ ನಿಂದ ಅಡಿಕೆ ಮಾರಿ ಹಣ ತರುವ ಬಗ್ಗೆಯು ಮಾಹಿತಿ ಇತ್ತು. ಈ ವಿಚಾರವನ್ನು ಸ್ನೇಹಿತರಿಗೆ ತಿಳಿಸಿ, ಹಣವನ್ನು ದರೋಡೆ ಮಾಡುವ ಪ್ಲಾನ್ ಮಾಡಿದ್ದರು. ಅಂದುಕೊಂಡಂತೆ, ಡಿ. 4ರಂದು ಬೆಳಗಿನ ಜಾವ ಈ ಅಡಿಕೆ ವ್ಯಾಪಾರಿ ಹೈದರಾಬಾದ್ ನಿಂದ ವಾಪಸ್‌ ಆಗುವ ಸಂದರ್ಭದಲ್ಲಿ ಚಿತ್ರದುರ್ಗದ ಸಮೀಪ ಅವರು ಹಾಗೂ ಅವರ ಸ್ನೇಹಿತನ ಮೇಲೆ ಹಲ್ಲೆ ಮಾಡಿ 1.5 ಕೋಟಿ ರೂ.ಗಳನ್ನು ದರೋಡೆ ಮಾಡಿದ್ದರು.

ವಿಶೇಷ ಅಂದರೆ, ರಸ್ತೆಗೆ ಕಾರು ಅಡ್ಡ ನಿಲ್ಲಿಸಿ, ಅಡಿಕೆ ವ್ಯಾಪಾರಿಯ ಕಾರು ನಿಲ್ಲುವಂತೆ ಮಾಡಿದ್ದರು. ಬಳಿಕ ಅಲ್ಲಿಗೆ ಸಿನಿಮಾ ಸ್ಟೈಲ್‌ನಲ್ಲಿ, ಬೈಕ್‌ ಗಳಲ್ಲಿ ಬಂದು ಚಾಕು ತೋರಿಸಿ ಹಣ ಲಪಟಾಯಿಸಿ ಎಸ್ಕೆಪ್ ಆಗಿದ್ದರು. ಸಧ್ಯ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ದಾವಣಗೆರೆ ಜಯನಗರದ ಶಶಿಕಿರಣ್, ಬೆಂಗಳೂರು ಕೆಂಪೇಗೌಡ ಲೇಔಟ್‌ನ ನವೀನ, ದಾವಣಗೆರೆ ಮಾಯಕೊಂಡ ಹೋಬಳಿಯ ಆರ್. ಮಂಜುನಾಥ, ಮಾಯಕೊಂಡ ಹೋಬಳಿ ಪ್ರತಾಪ ಗೌಡ, ಚನ್ನಗಿರಿ ತಾಲೂಕಿನ ಎ. ಕಿರಣ್, ಚಿತ್ರದುರ್ಗ ತಾಲೂಕಿನ ಮಹಮದ್‌ ಷಫೀಉಲ್ಲಾ ಹಾಗೂ ಎಸ್. ಸಮೀರ್ ಭಾಷಾ, ಚನ್ನಗಿರಿ ತಾಲೂಕಿನ ಬಿ.ಕೆ. ಲಿಂಗರಾಜ, ಬೆಂಗಳೂರಿನ ಲಗ್ಗೆರೆಯ ಹುಸೇನ್ ಭಾಷ, ಬೆಂಗಳೂರಿನ ಪೀಣ್ಯದ ಬಿ. ಶ್ರೀನಿವಾಸ ಬಂಧಿತ ಅರೋಪಿಗಳಾಗಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.