Categories
ಸಿನಿಮಾ

ಬಿಗ್‌ಬಾಸ್ ಮನೆಗೆ ಶಾಸಕ ಪ್ರದೀಪ್ ಈಶ್ವರ್!

ಬಿಗ್‌ಬಾಸ್ ಮನೆಗೆ ಶಾಸಕ ಪ್ರದೀಪ್ ಈಶ್ವರ್!
– ಮಾತಿನ ಮಲ್ಲ ಈಗ ಬಿಗ್ ಬಾಸಲ್ಲಿ ಏನ್ ಮಾಡ್ತಾರೆ?
– ಬಿಗ್ ಬಾಸ್ ಸ್ಪರ್ಧೆಗೆ ಯಾರು ಯಾರು ಬರ್ತಾರೆ?

NAMMUR EXPRESS NEWS
ಬಿಗ್ ಬಾಸ್ ಕನ್ನಡ 10 ನೇ ಆವೃತ್ತಿ ಆರಂಭಗೊಂಡಿದೆ.ಕಲರ್ಸ್‌ ಕನ್ನಡ ವಾಹಿನಿ ಜೊತೆಗೆ ಜಿಯೋ ಸಿನಿಮಾ ಒಟಿಟಿಯಲ್ಲಿ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಇದೀಗ ಬಿಗ್‌ಬಾಸ್‌ಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವ‌ ಸಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಈಗಾಗಲೇ ಬಿಗ್‌ಬಾಸ್ ಮನೆ ಸೇರಿಕೊಂಡಿದ್ದಾರೆ. ಪ್ರದೀಪ್ ಈಶ್ವರ್ ಅವರನ್ನು ನೋಡುತ್ತಿದ್ದಂತೆಯೇ ಬಿಗ್ ಬಾಸ್ ಸ್ಪರ್ಧಿಗಳು ಸಖತ್ ಥ್ರಿಲ್ ಆಗಿದ್ದಾರೆ. ಶಾಸಕರ ಜೊತೆಗೆ ಸ್ಪರ್ಧೆ ಮಾಡಬೇಕು ಅಂತಾನೂ ಮಾತನಾಡಿಕೊಳ್ಳುತ್ತಿದ್ದಾರೆ. ಪ್ರದೀಪ್ ಈಶ್ವರ್ ಸದ್ಯ ಅತಿಥಿಯಾಗಿ ಬಿಗ್‌ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ ಎನ್ನುತ್ತಿವೆ. ಆದರೆ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಸೀಸನ್ 10ರಲ್ಲಿ ಕಾಣಿಸಿಕೊಂಡಿರುವುದು ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಆದರೆ ಪ್ರದೀಪ್ ಈಶ್ವರ್ ಎಷ್ಟು ದಿನಗಳ ಕಾಲ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಳ್ಳಲಿದ್ದಾರೆ ಅನ್ನೋದು ಸದ್ಯದ ಕುತೂಹಲ.

ಸ್ಪರ್ಧೆಯಲ್ಲಿ ಯಾರು ಯಾರು…?

ಡ್ರೋನ್ ಪ್ರತಾಪ್, ನಾಗಿಣಿ ನಮ್ರತಾ ಗೌಡ, ಆಂಕರ್ ಗೌರೀಶ್ ಅಕ್ಕಿ ಸೇರಿದಂತೆ ಒಟ್ಟು 17 ಮಂದಿ ಸ್ಪರ್ಧಿಗಳು ಈಗಾಗಲೇ ಬಿಗ್‌ಬಾಸ್ ಮನೆಯನ್ನು ಸೇರಿಕೊಂಡಿದ್ದಾರೆ. ಈ ಪೈಕಿ ಬುಲೆಟ್ ಪ್ರಕಾಶ್ ಮಗ ರಕ್ಷತ್, ಡ್ರೋನ್ ಪ್ರತಾಪ್ ಸೇರಿದಂತೆ ಹಲವರು ಆರಂಭದಲ್ಲೇ ಡೇಜರ್ ಝೇನ್ ಸೇರಿದ್ದಾರೆ. ಪುಟ್ಟಗೌರಿ ಮದುವೆ, ನಾಗಿಣಿ 2 ಧಾರಾವಾಹಿಯ ಮೂಲಕ ಪ್ರಖ್ಯಾತಿಯನ್ನು ಪಡೆದುಕೊಂಡಿರುವ ನಮ್ರತಾ ಗೌಡ, ನಮ್ಮನೆ ಯುವರಾಣಿ ಖ್ಯಾತಿಯ ಸ್ನೇಹಿತ್ ಗೌಡ, ರಾಪರ್ ಈಶಾನಿ, ಹರಹರ ಮಹದೇವ್ ಧಾರಾವಾಹಿಯ ಶಿವನ ಪಾತ್ರಧಾರಿ ವಿನಯ್ ಗೌಡ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ಇನ್ನು ಕಾಮಿಡಿ ಕಿಲಾಡಿಗಳು ಖ್ಯಾತಿಯ ತುಕಾಲಿ ಸಂತು, ಬ್ಯೂಟಿ ಪಾರ್ಲರ್ ಹಾಗೂ ಹೋಟೆಲ್ ಉದ್ಯಮಿ ನೀತು ವನಜಾಕ್ಷಿ, ರಂಗೋಲಿ ಧಾರಾವಾಹಿ ಖ್ಯಾತಿಯ ಸಿರಿ, ಮೈಸೂರಿನ ಖ್ಯಾತ ಸ್ನೇಕ್ ಶ್ಯಾಮ್ ಈಗಾಗಲೇ ಬಿಗ್‌ಬಾಸ್ ಮನೆ ಸೇರಿಕೊಂಡಿದ್ದಾರೆ.
ಲಕ್ಷಣ ಧಾರಾವಾಹಿಯ ಮೂಲಕ ಖ್ಯಾತಿ ಪಡೆದಿರುವ ಭಾಗ್ಯಶ್ರೀ, ಖ್ಯಾತ ಆಂಕರ್ ಗೌರೀಶ್ ಅಕ್ಕಿ, ಖ್ಯಾತ ಕೇಶ ವಿನ್ಯಾಸಕಾರ ಮೈಕಲ್ ತಾಯಿ, ಯುವ ವಿಜ್ಞಾನಿ ಡೋನ್ ಪ್ರತಾಪ್, ಚಾರ್ಲಿ 777 ಖ್ಯಾತಿಯ ಸಂಗೀತ ಶೃಂಗೇರಿ, ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ದೊಡ್ಡನೆ ಸೇರಿಕೊಂಡಿದ್ದಾರೆ. ಇನ್ನು ರೈತ ವರ್ತೂರು ಸಂತೋಷ್, ಮಂಗಳಗೌರಿ ಧಾವಾಹಿ ಖ್ಯಾತಿಯ ತನಿಷಾ ಕುಪ್ಪಂಡ, ಡೊಳ್ಳು ಸಿನಿಮಾದ ನಟ ಕಾರ್ತಿಕ್ ಕೂಡ ಬಿಗ್ ಬಾಸ್ ಮನೆ ಸೇರಿದ್ದು, ಡೇಂಜರ್ ಝೂನ್‌ನಲ್ಲಿ ಇದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.