ರೆಬೆಲ್ ಸ್ಟಾರ್ ನೆನಪು: ಅಂಬರೀಶ್ ಜನ್ಮ ದಿನ!
– ಅಂಬಿ ಸ್ಮರಣಾರ್ಥ ಅಭಿಮಾನಿಗಳಿಂದ ವಿವಿಧ ಕಾರ್ಯಕ್ರಮ
– ಕರುನಾಡ ಮೇರು ಕಲಾವಿದನಿಗೆ ನುಡಿ ನಮನ
NAMMUR EXPRESS NEWS
ಬೆಂಗಳೂರು: ಕನ್ನಡ ಖ್ಯಾತ ನಟ ನಟ ಅಂಬರೀಷ್ ಅವರ 72ನೇ ಜನ್ಮ ಜಯಂತಿಯನ್ನು ಅವರ ಅಭಿಮಾನಿಗಳು ಎಲ್ಲೆಡೆ ಆಚರಣೆ ಮಾಡುತ್ತಿದ್ದಾರೆ. 47 ವರ್ಷಗಳ ಸಿನಿಮಾ ಜೀವನದಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ರೆಬೆಲ್ ಸ್ಟಾರ್. ಕೇಂದ್ರ ಮಾಹಿತಿ ಮತ್ತು ಪ್ರಸರಣ ರಾಜ್ಯ ಸಚಿವರಾಗಿ, ರಾಜ್ಯ ವಸತಿ ಸಚಿವರಾಗಿ ಕೆಲಸ ಮಾಡಿದ್ದಲ್ಲದೇ ಕಾವೇರಿ ವಿಷಯದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕಾರಣದಲ್ಲೂ ರೆಬೆಲ್ ಆದ ಗಟ್ಟಿಗ, ಇಂತಹ ಅಂಬರೀಷ್ ಅವರ ಬದುಕು ನಿಜಕ್ಕೂ ರೋಚಕ.
ಅಂಬರೀಶ್ ಅವರ 72 ಜಯಂತಿಯ ಅಂಗವಾಗಿ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸ್ಮಾರಕದ ಬಳಿ ವಿವಿಧ ಕಾರ್ಯಕ್ರಮ ಆಯೋಜಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಬರುವ ಅಭಿಮಾನಿಗಳು ಸ್ಮಾರಕಕ್ಕೆ ನಮಿಸಲಿದ್ದಾರೆ. ಜತೆಗೆ ಅವರ ಕುಟುಂಬದವರು, ಚಿತ್ರರಂಗ ಮತ್ತು ರಾಜಕೀಯ ವಲಯದ ಆಪ್ತರು ಸಹ ಅಂಬಿ ಸ್ಮಾರಕಕ್ಕೆ ಪೂಜೆ ಸಲ್ಲಿಸಲಿದ್ದಾರೆ.
ಕನ್ನಡ ಸಿನಿಮಾ, ಕಲಾ ಲೋಕದ ಮರೆಯಲಾಗದ ಮಾಣಿಕ್ಯ ಅಂಬರೀಷ್
ಅವರ ನೆನಪಿನ ಜತೆ ಒಳ್ಳೆಯ ಸಮಾಜ ಕಟ್ಟೋಣ
ನಮ್ಮೂರ್ ಎಕ್ಸ್ ಪ್ರೆಸ್ ಕರ್ನಾಟಕ